ಕಟ್ಟುಪಾಡುಗಳ ಸಂಕೋಲೆ ತೊರೆದ ಮುಕ್ತ ಕವನಗಳ ಸಂಕಲನ ‘ರತಿಯ ಕಂಬನಿ’: ಎಚ್.ಎಲ್. ಪುಷ್ಪ

Date: 20-09-2021

Location: ಎಂ.ವಿ.ಸೀ ಸಭಾಂಗಣ,ಬಿ.ಎಂ.ಶ್ರೀ ಪ್ರತಿಷ್ಠಾನ, ನರಸಿಂಹರಾಜ ಕಾಲೋನಿ,ಬೆಂಗಳೂರು


ಇಂದಿನ ಕವಿಗಳು ಹಿಂದಿನವರಂತೆ ಕಟ್ಟುಪಾಡುಗಳ ನಡುವೆ ಕವನಗಳನ್ನು ಬರೆಯುವವರಲ್ಲ. ಮೋಹ, ಪ್ರೇಮ ಸೇರಿದಂತೆ ಯಾವುದೇ ವಿಚಾರವನ್ನು ಮುಕ್ತವಾಗಿ ಮಾತನಾಡುವುದಾಗಲೀ,ಬರವಣಿಗೆಯ ರೂಪದಲ್ಲಾಗಲೀ ತರಬಲ್ಲ ಸಾಮರ್ಥ್ಯ ಉಳ್ಳವರು ಎಂಬುದಾಗಿ ಕವಿ ಎಚ್.ಎಲ್. ಪುಷ್ಪ ಹೇಳಿದರು.

ಬೆಂಗಳೂರಿನ ನರಸಿಂಹರಾಜ ಕಾಲೋನಿಯ ಬಿ.ಎಂ.ಶ್ರೀ ಪ್ರತಿಷ್ಠಾನದ ಎಂ.ವಿ.ಸೀ ಸಭಾಂಗಣದಲ್ಲಿ, ವಿಕಾಸ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಲೇಖಕಿ ನಂದಿನಿ ಹೆದ್ದುರ್ಗ ಅವರ ’ರತಿಯ ಕಂಬನಿ’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಹೆಚ್ಚಿನ ಕವಿಗಳೂ ಕೃಷ್ಣನ ರೂಪಕವನ್ನು ಬಳಸಿ ಇಂದು ಕವನಗಳ ರಚನೆ ಮಾಡುವುದಿದೆ..ಆದರೆ ಕವಿ ನಂದಿನ ಅವರ ನೇರ ಬರವಣಿಗೆ ಎಲ್ಲರ ಗಮನಸೆಳೆಯುತ್ತದೆ. ಅದರಲ್ಲಿ ಈ ಸಂಕಲನ ‘ಅವಳು’ ಎಂಬ ಕವನದ ‘ಇವಳು ಮುಗ್ಧಳಲ್ಲ..ಇವಳು ಪ್ರಬುದ್ಧಳಲ್ಲ..ಇವಳು ಶುದ್ಧಳಲ್ಲ..ಹಾಗೂ ಇವಳು ಅಶುದ್ಧಳೂ ಅಲ್ಲ..’ ಎಂಬ ಸಾಲುಗಳಂತೂ ಇಡೀ ಸಂಕಲನವನ್ನೇ ಪ್ರತಿನಿಧಿಸುವಂತಿದೆ ಎಂದರು.

ಕೃತಿ ಪರಿಚಯವನ್ನು ಮಾಡಿದ ಪತ್ರಕರ್ತ ಹಾಗೂ ಬರಹಗಾರ ಬಿ.ಎಂ. ಹನೀಫ್ ಮಾತನಾಡಿ ಈ ಕವನ ಸಂಕಲನ ಒಂದು ರಾಜಾರೋಶ ಪ್ರೇಮವನ್ನು ಸಾರುವಂತಿದೆ. ಯಾರಿಗೂ ಹೆದರದೆ, .ಪ್ರೇಮ ನನ್ನ ಹಕ್ಕು ಎಂಬುದನ್ನು ಹೇಳುವಂತಿದೆ ಎಂದರು. ಅಲ್ಲದೆ ಶಿವ ರಾಮ ಬುದ್ಧನನ್ನೇ ಕವನಗಳ ಮೂಲಕ ಗದರಿಸುವ ಇವರ ಕವಿತೆಗಳು ಹೊಸ ಬಗೆಯ ಪ್ರತಿಮೆಗಳನ್ನು ಬಳಕೆ ಮಾಡಿರುವ ವಿಭಿನ್ನ ಪ್ರಯತ್ನ ಎಂಬುದಾಗಿ ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿ ಬಿ. ಆರ್. ಲಕ್ಷಣರಾವ್ ಅವರು ಕವನ ಸಂಕಲನದ ಬಗ್ಗೆ ಹಾಗೂ ಕವಯಿತ್ರಿಯ ಹೊಸತನದ ಕವಿತೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಸಂಕಲನದ ಕವಿತೆಗಳ ಬಗ್ಗೆ ಖುದ್ದು ಕವಿ ನಂದಿನಿ ಹೆದ್ದುರ್ಗ ಅವರು ಮಾತನಾಡಿ, ಕವಿತೆಗಳನ್ನು ಸುಖಾ ಸುಮ್ಮನೆ ಬರೆಯುವುದಕ್ಕೆ ಸಾಧ್ಯವಿಲ್ಲ.ಕಾಲವೇ ಕವಿತೆಗಳನ್ನು ತಾನಾಗಿಯೇ ಬರೆಸಿಬಿಡುತ್ತವೆ...ಈ ಸಂಕಲನದ ಎಲ್ಲ ಕವನಗಳೂ ಹಾಗೆಯೇ ಕಾಲವೇ ಬರೆಸಿದಂತವು ಎಂಬುದಾಗಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಗಾಯಕಿ ಲೀಲಾವತಿ, ಮುದ್ದುಕೃಷ್ಣ, ರಮೇಶ್ ಉಡುಪ,ಲಿಂಗದೇವರು,ವಿನಾಯಕ ಮೂರೂರು ಸೇರಿದಂತೆ ಅನೆಕ ಸಾಹಿತ್ಯಾಸಕ್ತರು ಭಾಗವಿಸಿದ್ದರು. ರಾಮನಾಥ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.ಪೂರ್ಣಿಮಾ ಧನ್ಯವಾದ ಸಮರ್ಪಿಸಿದರು.ಗಾಯಕಿ ಪ್ರೇಮಲತಾ ದಿವಾಕರ್ ಸಂಕಲನದ ಆಯ್ದ ಹಾಡುಗಳನ್ನು ಹಾಡಿದರು.

 

MORE NEWS

ದಲಿತರು ಮತ್ತು ಸ್ತ್ರೀಯರ ಕಣ್ಣಲ್ಲಿ ದೇವರಾದ ಬಸವಣ್ಣ

10-05-2024 ಬೆಂಗಳೂರು

'ಭಾರತೀಯ ಧರ್ಮಗಳಲ್ಲಿ ಬಸವಧರ್ಮ ತುಂಬ ವಿಶಿಷ್ಟ, ವೈಚಾರಿಕ ಮತ್ತು ವೈಜ್ಞಾನಿಕವಾಗಿದೆ. ಕನ್ನಡ ಸಾಹಿತ್ಯದ ಬೇರೆ ಬೇರೆ...

ನಾಲ್ಕು ಕವನ ಸಂಕಲನಗಳಿಗೆ ರಾಜ್ಯಮಟ್ಟದ ‘ಸಹೃದಯ ಕಾವ್ಯ ಪ್ರಶಸ್ತಿ’

10-05-2024 ಬೆಂಗಳೂರು

ಬೆಳಗಾವಿ: ಜಿಲ್ಲೆಯ ಸವದತ್ತಿ ಸಹೃದಯ ಸಾಹಿತ್ಯ ಪ್ರತಿಷ್ಠಾನದಿಂದ ನೀಡುವ 2 ನೇ ವರ್ಷದ ರಾಜ್ಯಮಟ್ಟದ ಸಹೃದಯ ಕಾವ್ಯ ಪ್ರಶಸ್...

‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2024ರ’ ವೆಬ್ ಸೈಟ್ ಅನಾವರಣ

09-05-2024 ಬೆಂಗಳೂರು

ಬೆಂಗಳೂರು: ದಕ್ಷಿಣ ಭಾರತದ ಸಾಹಿತ್ಯ ಲೋಕದ ಮಟ್ಟಿಗೆ ಬಹುದೊಡ್ಡ ಸಾಹಿತ್ಯೋತ್ಸವವನ್ನು ‘ಬುಕ್ ಬ್ರಹ್ಮ’ ಆಯೋ...