Date: 22-11-2025
Location: ಬೆಂಗಳೂರು
ಉಡುಪಿ :- ಕನ್ನಡ ಭಾಷೆಯ ಅಮೂಲ್ಯವಾದ ಸಾಹಿತ್ಯ ಪ್ರಕಾರಗಳನ್ನು ದೇಶದ ಇತರ ಭಾಷೆಗಳಿಗೆ ಭಾಷಾಂತರ ಮಾಡಬೇಕಾದ ಅಗತ್ಯತೆ ಇದೆ ಎಂದು ಖ್ಯಾತ ವಿದ್ವಾಂಸ ಕೀಲಿಮಣೆ ತಜ್ಞ ಪ್ರೊ. ಕೆ.ಪಿ. ರಾವ್ ಹೇಳಿದರು.
ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಡಾ. ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಉಡುಪಿ ಇವರ ಸಹಯೋಗದಲ್ಲಿ ನಡೆದ 'ನಾರಿ ಚೇತನ' ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಳಿಕ ಮಾತನಾಡಿ,ನಮ್ಮ ಭಾಷೆಯ ಈ ಗ್ರಂಥಗಳು ವಿದೇಶಗಳಿಗೆ ಕೂಡ ತಲುಪಲು ಭಾಷಾಂತರ ನೆರವಾಗುತ್ತದೆ ಎಂದರು.ಸಂಸ್ಕೃತ ಭಾಷೆ ಸತ್ತ ಭಾಷೆ ಅಲ್ಲ ಪ್ರಪಂಚದಲ್ಲಿ ಇರುವ ಭಾಷೆಗಳಲ್ಲಿ ಅತ್ಯಂತ ಅಮೂಲ್ಯವಾದ ಭಾಷೆಗಳಲ್ಲಿ ಒಂದಾಗಿದೆ. ನಮ್ಮ ಸಂಸ್ಕೃತಿ ಬಗ್ಗೆ ಇರುವ ಸಂವೇದನೆಯನ್ನು ದೂರ ಮಾಡಬೇಕಾಗಿದೆ ಎಂದ ಅವರು, ಒಂದು ಭಾಷೆಯನ್ನು ಬಳಕೆ ಮಾಡಿದಷ್ಟು ಮತ್ತು ಗ್ರಾಂಥಿಕವಾಗಿ ಪ್ರಸಾರ ಮಾಡಿದಷ್ಟು ಅದರ ಬೆಳವಣಿಗೆ ಸಾಧ್ಯ ಎಂದರು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಸೋಜನ್ ಕೆ ಉದ್ಘಾಟಿಸಿ ಶುಭಹಾರೈಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿಯ ಸದಸ್ಯರಾದ ಚನ್ನಪ್ಪ ಅಂಗಡಿ ಅಕಾಡೆಮಿಯ ಕಾರ್ಯ ವೈಖರಿಯ ಕುರಿತು ಮಾಹಿತಿ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಾಂಸ್ಕೃತಿಕ ನಗರಿ ಉಡುಪಿಯಲ್ಲಿ ಈ ರೀತಿಯ ವೈಶಿಷ್ಟ ಪೂರ್ಣ ಕಾರ್ಯಕ್ರಮ ನಡೆಯುತ್ತಿರುವುದು ಅಭಿನಂದನೀಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ಮಾತನಾಡಿ , ಕಸಾಪ ಉಡುಪಿ ತಾಲೂಕು ವತಿಯಿಂದ ನಿರಂತರವಾಗಿ ವಿವಿಧ ಚಟುವಟಿಕೆಗಳು ನಡೆಯುತ್ತಿವೆ. ಮುಖ್ಯವಾಗಿ ಮನೆಯೇ ಗ್ರಂಥಾಲಯ ಮತ್ತು ಕಥೆ ಕೇಳೋಣ ಅಭಿಯಾನ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ವಿದ್ಯಾರ್ಥಿಗಳು ಕೂಡ ಈ ಕಾರ್ಯಕ್ರಮದ ಪ್ರಯೋಜನ ಪಡೆಯಲು ಕರೆ ನೀಡಿದರು.
ವಿಚಾರಗೋಷ್ಠಿಯಲ್ಲಿ ರಂಗಭೂಮಿಯಲ್ಲಿ ಮಹಿಳಾ ಧ್ವನಿ ಈ ವಿಷಯದ ಕುರಿತು ಸಾಹಿತಿ ಡಾ. ಕಾತ್ಯಾಯನಿ ಕುಂಜಿಬೆಟ್ಟು ವಿಷಯ ಮಂಡನೆ ಮಾಡಿದರು. ಅದೇ ರೀತಿ ತುಳುನಾಡಿನ ಮಹಿಳಾ ಸಾಹಿತ್ಯದ ಕುರಿತು ಉಪನ್ಯಾಸಕಿ ಡಾ. ನಿಕೇತನ, ಮಹಿಳಾ ಕಾದಂಬರಿಗಳಲ್ಲಿ ಸ್ತ್ರೀ ವಾದಿ ಚಿಂತನೆ ಬಗ್ಗೆ ಡಾ. ರೇಖಾ ಬನ್ನಾಡಿ ವಿಚಾರ ಮಂಡನೆ ಮಾಡಿದರು.
ಕನ್ನಡ ಉಪನ್ಯಾಸಕಿ ಡಾ. ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.ತಾಲೂಕು ಕಸಾಪ ಸಂ.ಕಾಯ೯ದಶಿ೯ಗಳಾದ ರಾಘವೇಂದ್ರ ಪ್ರಭು ಕವಾ೯ಲು ಸ್ವಾಗತಿಸಿದರು. ಸತೀಶ್ ಕೊಡವೂರು ವಂದಿಸಿದರು.
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...
ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...
©2025 Book Brahma Private Limited.