'ಮಕ್ಕಳ ಕತೆಗಳ ಅನನ್ಯ ಪ್ರೀತಿ ರಾಮೇಂದ್ರ ಕುಮಾರ' ಕುರಿತು ವಿಚಾರಣ ಸಂಕಿರಣ 

Date: 15-04-2024

Location: ಬೆಂಗಳೂರು


ಬೆಂಗಳೂರು: ಜೀವನಾನುಭವವನ್ನು ವಿಸ್ತರಿಸುವ, ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವ ಕೆಲಸವನ್ನು ಹಿಂದೆ‌ ಅಜ್ಜಿಯರ ಕಥೆಗಳು ಮಾಡುತ್ತಿದ್ದವು ಈಗ ಮಕ್ಕಳ ಸಾಹಿತ್ಯ ಮಾಡಬೇಕು ಎಂದು ಭೈರಮಂಗಲ ರಾಮೇಗೌಡ ಆಭಿಪ್ರಾಯಪಟ್ಟರು. ಅವರು ಅಭಿನವ ಮತ್ತು ಮಕ್ಕಳ‌ ಸಾಹಿತ್ಯಾಸಕ್ತರ ಬಳಗ ಧಾರವಾಡ ಮತ್ತು ಬಿ.ಎಂ.ಶ್ರೀ. ‌ಪ್ರತಿಷ್ಠಾನದ ಸಹಯೋಗದಲ್ಲಿ ಏರ್ಪಡಿಸಿದ್ದ ಮಕ್ಕಳ ಕಥೆಗಳ ಅನನ್ಯಯ ಪ್ರೀತಿ ರಾಮೇಂದ್ರಕುಮಾರ್ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದನ‌ ಕಾಲದಲ್ಲಿ‌ ಅಜ್ಜಿಯರ ಕಥೆಗಳಲ್ಲಿ ಜನಜೀವನದ ಎಲ್ಲ ವಿವರಗಳೂ ಬರುತ್ತಿದ್ದವು. ರಾಜ-ರಾಣಿಯರು, ಪ್ರಕೃತಿ ನಕ್ಷತ್ರ -ಮಂಡಲ, ದೇವರು -ದೆವ್ವ ಹೀಗೆ ಮನುಷ್ಯ ಪ್ರೇಮದ ಜೀವ ಜಗತ್ತಿನ ಎಲ್ಲ ವಿವರಗಳೂ ಬರುತ್ತಿದ್ದವು. ಈಗ ಪೋಷಕ ತಮ್ಮ ಮಕ್ಕಳ ಬಾಲ್ಯವನ್ನು ನಾಲ್ಕು ಗೋಡೆಗಳ ಮಧ್ಯೆ ರೂಪಿಸುವ ಆನಂತರ ಬೇಸಿಗೆ ಶಿಬಿರಗಳ ಮಧ್ಯೆ ರೂಪುಗೊಳ್ಳುವಂತೆ ಮಾಡುತ್ತಿದ್ದಾರೆ. ಆದರೆ ರಾಮೇಂದ್ರ ಕುಮಾರ್ ಅವರು ಮಾಡುತ್ತಿರುವ ಕೆಲಸ ನಮ್ಮೆಲ್ಲರಿಗೂ‌ ಮಾದರಿಯಾದುದು.

ಕೊರೋನಾ ಕಾಲದ ಅನುಭವಗಳನ್ನು ತಮ್ಮ ಸಾಕು‌ ನಾಯಿಯ‌ ಮನದಾಳದ‌ ಅನುಭವಗಳಂತೆ ಚಿತ್ರಿಸಿದ್ದಾರೆ. ಕ್ಯಾನ್ಸರ್ ಅನುಭವವನ್ನು ಅಜ್ಜನ ಅನುಭವದಂತೆ ಕಟ್ಟಿಕೊಟ್ಟಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಅವರು‌ ಮಾಡುತ್ತಿರುವ ಕೆಲಸವನ್ನು ಕನ್ನಡದಲ್ಲಿ ಆನಂದ‌ ಪಾಟೀಲರು‌ ಮಾಡುತ್ತಿದ್ದಾರೆ. ಅಭಿನವದಂಥ ಸಂಸ್ಥೆ ಮಕ್ಕಳ ಪುಸ್ತಕಗಳನ್ನು ಸಾಹಿತ್ಯದ ದಿಕ್ಸೂಚಿಯಂತೆ ಮಾಡುತ್ತಿದೆ ಎಂದರು.

ಆನಂದ‌ ಪಾಟೀಲರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ‌ ಸಾಹಿತಿ ಶಿವಲುಂಗಪ್ಪ ಹಂದಿಹಾಳ್, ತಮ್ಮಣ್ಣ ಬೀಗಾರ್, ಕಾವ್ಯಾ, ನರಹಳ್ಳಿ ಬಾಲಸುಬ್ರಹ್ಮಣ್ಯ, ರಜನಿ‌ ನರಹಳ್ಳಿ, ಶಿವನಂದ ಹೊಂಬಳ, ಟಿ‌. ಎಸ್. ನಾಗರಾಜ ಶೆಟ್ಟಿ‌, ಅಭಿನವ ನ. ರವಿಕುಮಾರ್, ಶಾಂತರಾಜ್ ಮುಂತಾದವರು ಭಾಗವಹಿಸಿದ್ದರು. ಮತ್ತೂರು ಸುಬ್ಬಣ್ಣ ಸ್ವಾಗತಿಸಿ ವಂದಿಸಿದರು.

MORE NEWS

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-04-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...

ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಗೆ ಆಹ್ವಾನ 

29-04-2024 ಬೆಂಗಳೂರು

ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇವರ ವತಿಯಂದ ಹಾಗೂ ನಾಡೋಜ ಚೆನ್ನವೀರ ಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ದತ್ತ...

ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

28-04-2024 ಬೆಂಗಳೂರು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023ನೇ ಸಾಲಿನಲ್ಲಿ ಪುಸ್ತಕಗಳಿಗೆ ನೀಡಲಾಗುವ ವಿವಿಧ ದತ್ತಿ ಪುರಸ್ಕಾರಗಳಿಗಾಗಿ ಕ...