ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ


‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ಈ ಪುಸ್ತಕ ನನ್ನ ಮನಸ್ಸಿನಿಂದ ಎಂದು ನಿರ್ಗಮನವಾಗದಿರಲಿ ಎಂದು, ಸದಾ ಕಾಡುತ್ತಿರಲಿ ಎಂದು, ಮತ್ತೊಮ್ಮೆ ನಾನು ಓದಬೇಕೆಂದು, ನನಗೆ ಅರ್ಥವಾದದ್ದು ಬಹಳ ಕಡಿಮೆ. ಇನ್ನು ತಿಳಿಯಲು ಬಹಳಷ್ಟಿದೆ. ಅದನ್ನು ತಿಳಿಯುವ ಹಾದಿಯಲ್ಲಿ ನಿರ್ಗಮನ ನನ್ನಲ್ಲಿ ಸದಾ ಜೀವಂತ ಎನ್ನುತ್ತಾರೆ ವಿದ್ಯಾರ್ಥಿ ಶಿಲ್ಪ ಬಿ. ಅವರು ಜೋಗಿಯವರ ‘ನಿರ್ಗಮನ’ ಕಾದಂಬರಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಯಾರೋ ವೃದ್ಧರೊಬ್ಬರು ಯಾರದೋ ಮೆದುಳಿನಲ್ಲಿ ನಿಂತಿದ್ದಾರೆ. ಅವರು ಪ್ರವೇಶಿಸುತ್ತಿದ್ದಾರೊ ಅಥವಾ ನಿರ್ಗಮಿಸುತ್ತಿದ್ದಾರೊ? ಬಹುಶಃ ಪುಸ್ತಕದ ಹೆಸರೇ 'ನಿರ್ಗಮನ'ವಾಗಿರುವುದರಿಂದ ನಿರ್ಗಮಿಸುತ್ತಿರಬೇಕು? ಪುಸ್ತಕವನ್ನು ಅದರ ಶೀರ್ಷಿಕೆಯಿಂದ ನಿರ್ಣಯಿಸಬಾರದೆನ್ನುತ್ತಾರೆ. ಆದರೇ ಅದರ ಶೀರ್ಷಿಕೆಯ ಸೆಳೆತದಲ್ಲಿ ಸಿಕ್ಕಿ ಹೋದ ನನಗೆ ಈ ಪ್ರಶ್ನೆಗಳಿಗೆ ಉತ್ತರವನ್ನುಡುಕುವ ತಾಳ್ಮೆಯಂತು ಖಂಡಿತ ಇರಲಿಲ್ಲ. ಪುಸ್ತಕವನ್ನು ಓದಲು ಪ್ರಾರಂಭಿಸಿದೆ. ಉದ್ಯಾವನಗಳಲ್ಲಿ ವಾಕಿಂಗ್ ಮಾಡುವ ವಯಸ್ಸಾದವರನ್ನ ಕಾಣುವಾಗ ನನಗೇನೊ ಇನ್ನಿಲ್ಲದ ಕುತೂಹಲ ಮೂಡುತ್ತದೇ. ಅಂತಹದರಲ್ಲಿ ಪುಸ್ತಕವೇ ಶಾರದ ಪ್ರಸಾದರವರ ಸುತ್ತ ಸುಳಿಯುವಾಗ, ಓದುವಾಗ ಆದ ಖುಷಿ ಹೇಳತೀರದ್ದು. ನಾವೆನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ. ಆ ಮಾತನ್ನು ಅನಿರುದ್ಧರವರು ಪ್ರತಿಬಿಂಬಿಸುತ್ತಾರೆ. ಅದರ ಜೊತೆಗೆ ಜೋಗಿಯವರು ಆಗಾಗ ಪರಿಚಯಿಸುವ ಬಿಸಿ ಬಿಸಿ ಖಾರ ಪೊಂಗಲ್, ಕೇಸರಿ ಬಾತ್, ಇಡ್ಲಿ, ಕಾಫಿ, ಚಿತ್ರನ್ನ, ಮೊಸರನ್ನ ಮನಸ್ಸನ್ನು ಹಿಡಿದಿಟ್ಟುಕೊಳ್ಳುತ್ತದೆ. ಆಹಾ! ಓದುವಾಗ ಅದೆಷ್ಟು ಸ್ವಾದಿಷ್ಟಕರ.

ಓದುತ್ತ, ಓದುತ್ತ , ಕೊನೆ ಕೊನೆಯದಾಗಿ ನಾ ನಾನೆಂಬುದು ನಾನಲ್ಲ ಓದುವಾಗ ಕಣ್ಣಾಲಿಗಳನ್ನು ಅರಳಿಸಿ, ಬಾಯಿ ಬಿಟ್ಟು ಕೊಂಡು ಪುಸ್ತಕವನ್ನೇ ಹಲವು ಬಾರಿ ದಿಟ್ಟಿಸಿ, ಶಾರದಪ್ರಸಾದವರನ್ನು ನೆನೆದು ಪಟ್ಟ ವಿಸ್ಮಯ, ಅಚ್ಟಳಿಯದೆ ಕಣ್ಣೆದುರು ಕಂಗೊಳಿಸುತ್ತಿದೆ. ತಂದೆಯ ದೇಶ ಪ್ರೇಮ, ಅವರ ಮನಸ್ಸಿನ ಮಾತುಗಳ ಸಾಕ್ಷಿಯಾಗಿ ಕೆಂಡವಾಗಿ ಉರಿಯುತ್ತಿಯುವ ಆ ಪತ್ರಗಳ, ಒಂದು ಕ್ಷಣ ಕಣ್ಣಲ್ಲಿ ನೀರು ತರಿಸುವಾಗಲೇ ಅಪ್ಪ ಕೆಲಸ ಮುಗಿಸಿ ಮನೆಗೆ ಬಂದರು. ಅಪ್ಪನ ಮನಸ್ಸಿನಲ್ಲೂ ಇಂತಹದ್ದೆ ಮಹಾಯುದ್ಧ ನಡೆಯುತ್ತಿರಬಹುದಾ? ಅವರ ವರ್ತಮಾನ ಏನು? ಎಂದು ಯೋಚಿಸುತ್ತಾ, ಅವರನ್ನೇ ನೋಡುತ್ತ ಮುಗುಳ್ನಗೆ ಬೀರಿದೆ.

ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ಈ ಪುಸ್ತಕ ನನ್ನ ಮನಸ್ಸಿನಿಂದ ಎಂದು ನಿರ್ಗಮನವಾಗದಿರಲಿ ಎಂದು, ಸದಾ ಕಾಡುತ್ತಿರಲಿ ಎಂದು, ಮತ್ತೊಮ್ಮೆ ನಾನು ಓದಬೇಕೆಂದು, ನನಗೆ ಅರ್ಥವಾದದ್ದು ಬಹಳ ಕಡಿಮೆ. ಇನ್ನು ತಿಳಿಯಲು ಬಹಳಷ್ಟಿದೆ. ಅದನ್ನು ತಿಳಿಯುವ ಹಾದಿಯಲ್ಲಿ ನಿರ್ಗಮನ ನನ್ನಲ್ಲಿ ಸದಾ ಜೀವಂತ.

-ಶಿಲ್ಪ ಬಿ
ಪ್ರಥಮ ಪಿ ಯು ಸಿ
ಶೇಷಾದ್ರಿಪುರಂ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು

MORE FEATURES

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...

‘ಪಾತಕ ಲೋಕ’ ತರುಣರಿಗೆ ಅತ್ಯಂತ ಆಕರ್ಷಣೀಯ ವಸ್ತು

16-05-2024 ಬೆಂಗಳೂರು

"ನಾ ಕಂಡ ಈ ಭೂಗತ ಜಗತ್ತಿನಲ್ಲಿ ಬೆಂಗಳೂರು ನಗರ ಹಾಗೂ ಮುಂಬೈ ನಗರದ ರೌಡಿಗಳ ಸಂಪರ್ಕ ಹಾಗೂ ಮಂಗಳೂರು ನಗರದ ರೌಡಿಗಳ ...