ನಯನ ರಾಜು ಅವರ ಕಾರ್ಯವೈಖರಿ ಪಕ್ವತೆಯಿಂದ ಕೂಡಿದೆ; ಬರಗೂರು ರಾಮಚಂದ್ರಪ್ಪ

Date: 05-05-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ರಂಗ ಪರಿಷತ್ತು ಕೇಂದ್ರ ಸಮಿತಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ರಾಜು 60, ಅಶ್ವಿನಿ ಮದನಕರ ಸಂಪಾದಿಸಿರುವ ರಮಾಬಾಯಿ ಅಂಬೇಡ್ಕರ್ ಕೃತಿ ಲೋಕಾರ್ಪಣೆ, ಭೀಮಾ ಗಾಯನ, ರಂಗ ಗೌರವ ಹಾಗೂ ಬೆಂಗಳೂರಿನ ಸಂಸ ಥಿಯೇಟರ್ ರಂಗಧರ್ಮ ಅವರ ಅಭಿನಯದ ಮಿಸೆಸ್ ಅಂಬೇಡ್ಕರ್ ನಾಟಕ ಪ್ರದರ್ಶನ ಕಾರ್ಯಕ್ರಮವು 2024 ಮೇ 05 ಭಾನುವಾರದಂದು ನಗರದ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ರಂಗಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಲೇಖಕ ಬರಗೂರು ರಾಮಚಂದ್ರಪ್ಪ, "ಈ ಕಾರ್ಯಕ್ರಮದ ಬಹಳ ವಿಶೇಷತೆ ಏನೆಂದರೆ ಅಂಬೇಡ್ಕರ್ ಅವರ ಕುರಿತ ನಾಟಕ ಪ್ರದರ್ಶನ ಮತ್ತು ರಮಾಬಾಯಿ ಅವರ ಕುರಿತ ಪುಸ್ತಕದ ಬಿಡುಗಡೆ. ನಾಟಕ, ಪುಸ್ತಕದ ಬಿಡುಗಡೆ ಮತ್ತು ಸನ್ಮಾನ ನನಗೆ ಭಾವ ಸಂಬಂಧಿಯಾದ ಧ್ಯೇಯಗಳಾಗಿವೆ. ಕಾರಣ ರಮಾಬಾಯಿ, ಅಂಬೇಡ್ಕರ್ ಅವರ ಪತ್ನಿಯಾಗಿ ಏನ್ನೆಲ್ಲಾ ಮಾಡಿದ್ದರು ಅನ್ನುವ ಅವರ ಅನುಭವಗಳ ಅರಿವಿನ ಅನಾವರಣವನ್ನು ಈ ಕೃತಿ ಒಂದು ಕಡೆ ಮಾಡುತ್ತಿದೆ,” ಎಂದರು.

“ನಯನ ರಾಜು ಅವರು ಬಹಳ ಕಷ್ಟಜೀವಿಯಾಗಿ ಬದುಕಿದವರು. ಈ ಸಭಾಂಗಣವನ್ನು ಪ್ರವೇಶ ಮಾಡುತ್ತಿದ್ದಂತೆಯೇ ಒಂದು ಆತ್ಮೀಯವಾದ ವಾತವರಣ ಸೃಷ್ಟಿಯಾಗುತ್ತದೆ. ಯಾಕೆಂದರೆ ನಯನ ರಾಜು ಅವರು ಆತ್ಮೀಯವಾದ ವ್ಯಕ್ತಿ. ನಯನ ಅವರು ನನ್ನನ್ನು ಮೌನದಲ್ಲಿಯೇ ಹಾಗೂ ನಾನು ಕೂಡ ಅವರನ್ನು ಮೌನದಲ್ಲಿಯೇ ನೋಡಿದ್ದೇನೆ, ಆದರೆ ಅವರ ಕೆಲಸ ಮಾತ್ರ ಪಕ್ಚತೆಯಿಂದ ಕೂಡಿದೆ. ಕಷ್ಟಜೀವಿಯಾಗಿ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ," ಎಂದು ತಿಳಿಸಿದರು.

ಕೃತಿಯನ್ನು ಯುವ ಬರಹಗಾರ ವಿ.ಎಲ್. ನರಸಿಂಹಮೂರ್ತಿ ಪರಿಚಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರ ಕಲಾವಿದ ಡಾ ಎಂ.ಎಸ್ ಮೂರ್ತಿ ವಹಿಸಿದ್ದರು.

ಸಮಾರಂಭದಲ್ಲಿ ನಯನ ರಾಜಣ್ಣ ಅವರಿಗೆ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್ ಅವರು ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಡಾ. ಹೆಚ್.ಎಲ್. ಪುಷ್ಪಾ, ಮಹಿಳಾ ಹೋರಾಟಗಾರ್ತಿ ದು. ಸರಸ್ವತಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಯನ ರಾಜು, ಜಯಮ್ಮ ರಾಜು, ಅಶ್ವಿನಿ ಮದನಕರ್ ಸೇರಿದಂತೆ ಅನೇಕರು ಸೇರಿದ್ದರು.

MORE NEWS

ಬರವಣಿಗೆಗೆ ಅನುಭವ ಎಷ್ಟು ಮುಖ್ಯವೋ ಅಧ್ಯಯನವೂ ಅಷ್ಟೇ ಮುಖ್ಯ: ಬರಗೂರು ರಾಮಚಂದ್ರಪ್ಪ

18-05-2024 ಬೆಂಗಳೂರು

ಬೆಂಗಳೂರು: ಇಲ್ಲಿ ಬಿಡುಗಡೆಗೊಂಡ ಮೂರು ಪುಸ್ತಕಗಳು ವಿಭಿನ್ನ ವಿಚಾರಗಳನ್ನು ಒಳಗೊಂಡಿದ್ದರೂ, ಅವೆಲ್ಲವೂ ಸಾಮಾಜಿಕ ಕಾಳಜಿಯ...

ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿನಿಧಿ ರಾಜ್ಯ ಪ್ರಶಸ್ತಿಗಳಿಗೆ ಆಹ್ವಾನ 

18-05-2024 ಬೆಂಗಳೂರು

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2023ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿ...

ಅನುಪಮಾ ನಿರಂಜನ ಅವರ ಬಗ್ಗೆ ಓದಿ ತಿಳಿದುಕೊಳ್ಳುವುದು ಬಹಳಷ್ಟಿದೆ; ಎಚ್.ಎಲ್. ಪುಷ್ಟ

17-05-2024 ಬೆಂಗಳೂರು

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯಿಂದ ಡಾ. ಅನುಪಮಾ ನಿರಂಜನ ಹುಟ್ಟು ಹಬ್ಬದ ಪ್ರಯುಕ್ತ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ...