ಪ್ರಕಾಶ ಖಾಡೆ ‘ಬಾಳುಕುನ ಪುರಾಣ’ ಕೃತಿಗೆ ಕಸಾಪ ಅರಕೇರಿ ದತ್ತಿ ಪ್ರಶಸ್ತಿ

Date: 29-03-2024

Location: ಬೆಂಗಳೂರು


ಬಾಗಲಕೋಟೆ: ಸಾಹಿತಿ ಡಾ.ಪ್ರಕಾಶ ಗ.ಖಾಡೆ ಅವರ ‘ಬಾಳುಕುನ ಪುರಾಣ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ 2023 ನೇ ಸಾಲಿನ ಬೀಳಗಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಅರಕೇರಿ ನೆನಪಿನ ಪುಸ್ತಕ ದತ್ತಿ ಪ್ರಶಸ್ತಿ ಲಭಿಸಿದೆ. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅವರು ಈಚೆಗೆ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. 

ಪ್ರಶಸ್ತಿ ಪ್ರದಾನ ಸಮಾರಂಭವು ಶುಕ್ರವಾರ 29 ರಂದು ಬೀಳಗಿ ತಾಲೂಕು ಅರಕೇರಿಯಲ್ಲಿ ಜರುಗಲಿದೆ. ಕನ್ನಡದ ಪ್ರಮುಖ ಕಥೆಗಾರರಾಗಿ ಗುರುತಿಸಿಕೊಂಡಿರುವ ಡಾ.ಪ್ರಕಾಶ ಖಾಡೆ ಅವರು ಈಗಾಗಲೇ ಎರಡು ಕಥಾ ಸಂಕಲನಗಳನ್ನು ಪ್ರಕಟಿಸಿದ್ದು, ಮೊದಲ ಕಥಾ ಸಂಕಲನ ‘ಚೆಲುವಿ ಚಂದ್ರಿ ಬೀಳಗಿ ಕಸಾಪ ದತ್ತಿ ಪ್ರಶಸ್ತಿಗೆ ಭಾಜನವಾಗಿತ್ತು. ಎರಡನೆಯ ಕಥಾ ಸಂಕಲನ ಬಾಳುಕುನ ಪುರಾಣ ಸಂಕಲನವು ಹತ್ತು ಗ್ರಾಮೀಣ ಸಂವೇದನೆಯ ಕಥೆಗಳನ್ನು ಒಳಗೊಂಡಿದೆ.

ಇವರೊಂದಿಗೆ ಎಸ್.ಆರ್.ರಾವಳ ಅವರ ‘ಮಲ್ಲಯ್ಯನ ಬೆಲ್ಲ’ ಕವನ ಸಂಕಲನ, ರುದ್ರಗೌಡ ಪಾಟೀಲ ಅವರ ‘ರುದ್ರಾಂಕಣ’ ಪತ್ರಿಕಾ ಲೇಖನ ಸಂಕಲನ ಮತ್ತು ಆರ್.ನಾಗರಾಜ ಅವರ ‘ಸುರಗಿರಿ’ ವೈಚಾರಿಕ ಲೇಖನ ಸಂಕಲನ ಕೃತಿಗಳು ಅರಕೇರಿ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿವೆ. 

MORE NEWS

ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

28-04-2024 ಬೆಂಗಳೂರು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023ನೇ ಸಾಲಿನಲ್ಲಿ ಪುಸ್ತಕಗಳಿಗೆ ನೀಡಲಾಗುವ ವಿವಿಧ ದತ್ತಿ ಪುರಸ್ಕಾರಗಳಿಗಾಗಿ ಕ...

ಅಂತರಾಷ್ಟ್ರೀಯ ಕಾವ್ಯ ಪ್ರಶಸ್ತಿ ಪುರಸ್ಕೃತೆ ಡಾ. ಮಮತಾ ಸಾಗರ್ ಅವರಿಗೆ ಅಭಿನಂದನೆ ಕಾರ್ಯಕ್ರಮ

28-04-2024 ಬೆಂಗಳೂರು

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಹಾಗೂ ಲಂಡನ್ ನ ಬಸವ ಅಂತರಾಷ್ಟ್ರೀಯ ...

ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್‌ನ ಅಧ್ಯಕ್ಷರಾಗಿ ನರಹಳ್ಳಿ ಬಾಲಸುಬ್ರಹ್ಮಣ್ಯ ಆಯ್ಕೆ

27-04-2024 ಬೆಂಗಳೂರು

ಬೆಂಗಳೂರು: ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸ್ತುತಪಡಿಸುತ್ತಿರುವ ವ...