‘ಪುಸ್ತಕದ ಆವಿಷ್ಕಾರ ಮನುಷ್ಯ ಕಂಡುಹಿಡಿದ ದೊಡ್ಡ ಸಂಶೋಧನೆ’: ಬಿ.ಎ. ಕೆಂಚರೆಡ್ಡಿ

Date: 15-04-2024

Location: ಬೆಂಗಳೂರು


ಗದಗ: ‘ಪುಸ್ತಕದ ಆವಿಷ್ಕಾರ’ವೆಂಬುದು ಮನುಷ್ಯ ಕಂಡುಹಿಡಿದ ಅತ್ಯಂತ ಮೌಲಿಕವಾದ ಮತ್ತು ದೊಡ್ಡ ಸಂಶೋಧನೆ ಎಂದು ಪ್ರೋ. ಬಿ. ಎ. ಕೆಂಚರಡ್ಡಿ ಅವರು ಅಭಿಪ್ರಾಯ ಪಟ್ಟರು.

ದಿನಾಂಕ 2024 ಏಪ್ರಿಲ್ 14ರಂದು ಗದಗ ಜಿಲ್ಲೆಯ ಕಲಾನಿಕೇತನ ಸಭಾಂಗಣದಲ್ಲಿ ನಡೆದ ಹರಿಶ್ರೀ ವೈ.ಜೆ ಅವರು ರಚಿಸಿರುವ ಕಲಾ ಇತಿಹಾಸಕಾರ ಕೆ.ವಿ. ಸುಬ್ರಹ್ಮಣ್ಯಂ ಅವರ ಕುರಿತಾದ ‘ಚಿತ್ರಾಕ್ಷರ’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬುಕ್ ಬ್ರಹ್ಮ’ ಸಂಪಾದಕರಾದ ದೇವು ಪತ್ತಾರ ಅವರು ‘ಕೆ.ವಿ.ಸುಬ್ರಹ್ಮಣ್ಯಂ ಅವರ ಸುಧೀರ್ಘ ಲಲಿತಕಲಾ ಮೀಮಾಂಸೆಯ ಬಗೆಗೆ ಬಂಗಾರಕ್ಕೆ ಪುಟವಿಟ್ಟಂತೆ ಮಾತನಾಡಿದರು. ಪ್ರಜಾವಾಣಿ ಮಯೂರ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಸುಬ್ರಮಣ್ಯಂ ಅವರು ಕೇಳಿದ ಟೈಂನೊಳಗೆ, ಕೇಳಿದಷ್ಟೇ ಶಬ್ದಗಳ ಮಿತಿಯೊಳಗೆ ಲೇಖನಗಳನ್ನು ಬರೆದುಕೊಟ್ಟವರು. ಕೆ. ವಿ.ಎಸ್ ಎಂದು ಅವರ ಸಾಹಿತ್ಯ ಬದ್ಧತೆಯ ಕುರಿತು ನೆನಪಿಸಿಕೊಂಡರು.

ನನಗೆ ಗೊತ್ತಿದ್ದ ಹಾಗೆ ಮೂರುವರೆ ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಕಲಾಸಾಹಿತ್ಯದದ ಕುರಿತು ಬರೆದಿದ್ದಾರೆ. ಅವೆಲ್ಲಾ ಸಂಕಲನಗೊಂಡು ಸಂಪುಟಗಳಾಗಿ ಪ್ರಕಟ ಆದರೆ ಅವು ಕನ್ನಡ ಸಾಹಿತ್ಯ ಮತ್ತು ಕಲಾಲೋಕದ ಮಹತ್ವದ ದಾಖಲೆಯಾಗುತ್ತವೆ. ಆದಷ್ಟು ಆ ಎಲ್ಲಾ ಲೇಖನಗಳನ್ನು ತಮ್ಮ ಗ್ರಂಥಾಲಯ ಮತ್ತು ಪ್ರತ್ರಿಕೆಗಳಿಂದ ಆಯ್ದು ಕೊಡಬೇಕು. ಯಾರಾದರೂ ಆ ಗ್ರಂಥಗಳನ್ನು‌ ಪ್ರಕಟಿಸುತ್ತಾರೆ. ಅದನ್ನು ಆದಷ್ಟು ಬೇಗ ಮಾಡಿಕೊಡಲು ಕೆವಿಎಸ್ ಅವರಿಗೆ ಸೂಚಿಸಿದರು.

ಅಷ್ಟಲ್ಲದೆ ಕಲಾಲೋಕದ ವಿವಿಧ ಆಯಾಮಗಳ ದಾಖಲೆಗಳ ಕುರಿತಾಗಿ ಬರೆದ ಬರಹಗಳ ಮೌಲ್ಯದ ಕುರಿತು ಬಹುವಾಗಿ ಮೆಚ್ಚಿ ವಿಮರ್ಶಾತ್ಮಕವಾಗಿ ಮಾತನಾಡಿ ಸಭೀಕರ ಗಮನ ಸೆಳೆದರು.

ಮಯೂರ ಪತ್ರಿಕೆಯಲ್ಲಿ ಕೆವಿಎಸ್ ಅವರ ಲಲಿತಕಲಾ ಬರಹಗಳಿಗೆ ಚಿತ್ರಾಕ್ಷರ ಎಂಬ ಹೆಸರಿನಿಂದ ಪ್ರಕಟಿಸಿದ್ದೆವು. ಆ ಹೆಸರೇ ಈ ಪುಸ್ತಕದ್ದು ಎಂದುಕೊಂಡಿದ್ದೆ ಆದರೆ ಅದೇ ಹೆಸರಿನ ಪತ್ರಿಕೆಯನ್ನು ಸುಬ್ರಹ್ಮಣ್ಯಂ ಅವರೆ ಪ್ರಕಟಿಸಿದ್ದರಂತೆ ಎಂದು ತಿಳಿಸಿದರು.

‘ಚಿತ್ರಾಕ್ಷರ’ ಪುಸ್ತಕವನ್ನು ಪ್ರಕಟಿಸಿದ ಪ್ರಕಾಶಕ, ಕಲಾವಿದ ಪುಂಡಲೀಕ ಕಲ್ಲಿಗನೂರ ಅವರು ಪುಸ್ತಕ ಪ್ರಕಟಣೆಯ ಸಂತೋಷವನ್ನು ಹಂಚಿಕೊಂಡರೂ ಕೆಲವು ಸವಾಲುಗಳನ್ನು ನೆನಪಿಸಿಕೊಂಡರು. ಅಧ್ಯಕ್ಷತೆಯನ್ನು ವಹಿಸಿಕೊಂಡ ಶ್ರೀಮತಿ ಮಂಜುಳಾ ರೇವಡಿ ಅವರು ಲೇಖಕಿ ಹರಿಶ್ರೀಯವರ ಬರಹಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

ಒಟ್ಟಾರೆ ಬೆಂಗಳೂರಿನ ಹೊರಗಡೆಗೆ ಪುಸ್ತಕಗಳನ್ನು ಪ್ರಕಟಿಸಿ ಪ್ರಕಾಶಿಸಿದ ಬಗೆಗೆ ಸಭಿಕರಿಂದ ಮೆಚ್ಚುಗೆಯ‌ ಮಾತುಗಳು ಕೇಳಿಬಂದವು.

- ಕೆ. ವಿ. ಪುಂಡಲೀಕ

MORE NEWS

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-04-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...

ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಗೆ ಆಹ್ವಾನ 

29-04-2024 ಬೆಂಗಳೂರು

ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇವರ ವತಿಯಂದ ಹಾಗೂ ನಾಡೋಜ ಚೆನ್ನವೀರ ಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ದತ್ತ...

ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

28-04-2024 ಬೆಂಗಳೂರು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023ನೇ ಸಾಲಿನಲ್ಲಿ ಪುಸ್ತಕಗಳಿಗೆ ನೀಡಲಾಗುವ ವಿವಿಧ ದತ್ತಿ ಪುರಸ್ಕಾರಗಳಿಗಾಗಿ ಕ...