ಸಾಧನೆಯ ಹಾದಿಯಲ್ಲಿ ಎಲ್ಲರೂ ಏಕಾಂಗಿ - ಬಿ. ಪುರಂದರ ಭಟ್

Date: 16-04-2024

Location: ಬೆಂಗಳೂರು


ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಸಾಹಿತ್ಯ ಬಳಗದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಅಂಬೇಡ್ಕರ್ ದಿನಾಚರಣೆ, ದಿವ್ಯಾಂಗ ಚೇತನರಿಗೆ ಕವಿಗೋಷ್ಠಿ ಮತ್ತು ಕೃತಿ ಬಿಡುಗಡೆ ಸಮಾರಂಭವು ಅನುರಾಗ ವಠಾರದಲ್ಲಿ ನಡೆಯಿತು.

ಹಿರಿಯ ಸಾಹಿತಿ ಮತ್ತು ಕರ್ನಾಟಕ ಸಂಘ ಪುತ್ತೂರು ಇದರ ಅಧ್ಯಕ್ಷ ಬಿ. ಪುರಂದರ ಭಟ್ ಅವರು ದೀಪ ಬೆಳಗಿಸಿ, ಗಿಡಕ್ಕೆ ನೀರುಣಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರದಲ್ಲಿ ಮಾತನಾಡಿ, "ಸಾಧನೆಯ ಹಾದಿಯಲ್ಲಿ ಎಲ್ಲರೂ ಏಕಾಂಗಿಯಾಗಿ ಇರುತ್ತಾರೆ ಆಮೇಲೆ ಮುಂದಕ್ಕೆ ಹೋದಂತೆ ಸಮಾನ ಮನಸ್ಕರು ಸೇರಿಕೊಳ್ಳುತ್ತಾರೆ "ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿವೇಕಾನಂದ ಕಾಲೇಜು ಪುತ್ತೂರಿನ ಪರೀಕ್ಷಾಂಗ ಕುಲಸಚಿವ ಡಾ.ಹೆಚ್.ಜಿ ಶ್ರೀಧರ್ ಮಾತನಾಡಿ, "ಸಾಹಿತ್ಯದಲ್ಲಿ ಪ್ರಾಸ ಮಾತ್ರವಲ್ಲ ಲಯ ಛಂದಸ್ಸು ಮಾತ್ರೆ ಗಣಗಳನ್ನು ಒಳಗೊಂಡು ಕೃತಿ ರಚಿಸಲು ಪ್ರಬುದ್ಧರಾಗಬೇಕಿದ್ರೆ ಕನ್ನಡ ಸಾಹಿತ್ಯ ಪರಿಷತ್ತು ಮೂಲಕ ಕಾವ್ಯ ಕಮ್ಮಟಗಳು ಆಯೋಜನೆಯಾಗಬೇಕಿದೆ," ಎಂದರು.

ರಂಗಕರ್ಮಿ ಮತ್ತು ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ, "ಚಿಗುರೆಲೆ ಸಾಹಿತ್ಯ ಬಳಗದ ಮೂಲಕ ಹಲವಾರು ಪ್ರತಿಭೆಗಳು ಹೊರ ಬರುತ್ತಿರುವುದು ಹೆಮ್ಮೆಯ ವಿಚಾರ. ಕಲೆ ಮತ್ತು ಸಾಹಿತ್ಯ ಮನಸ್ಸಿನ ಸಂತೋಷ ಇಮ್ಮಡಿಗೊಳಿಸಲು ಪೂರಕವಾಗಿದೆ ಇಂದಿನ ಸಮಾಜಕ್ಕೆ" ಎಂದು ಶುಭ ಹಾರೈಸಿದರು.

ಸುನೀತಾ ಶ್ರೀರಾಮ್ ಕೊಯಿಲ ರವರ ‘ಆಶಯ ಚೊಚ್ಚಲ’ ಕವನ ಸಂಕಲನವನ್ನು ಹಿರಿಯ ಸಾಹಿತಿಗಳು, ಮಧು ಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕರು ಆಗಿರುವ ಶ್ರೀ ನಾರಾಯಣ ರೈ ಕುಕ್ಕುವಳ್ಳಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕು. ಪಾವನಿ. ಬಿ. ನಲ್ಕ ರವರ ‘ಸಪ್ತಮಿ’ ಚೊಚ್ಚಲ ಕವನಸಂಕಲನವನ್ನು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಪರಿಮಳ ಮಹೇಶ್ ರಾವ್ ಲೋಕಾರ್ಪಣೆ ಗೊಳಿಸಿದರು. ನಾರಾಯಣ ಕುಂಬ್ರ ಸಾಹಿತ್ಯದ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ್ ರೈ ನಿರ್ಮಾಣದ ಬಿಲ್ವಾರ್ಚನೆ ಪುತ್ತೂರು ಮಹಾಲಿಂಗೇಶ್ವರ ದೇವರ ಭಕ್ತಿ ಧ್ವನಿ ಸುರುಳಿಯನ್ನು ನಾಟ್ಯ ಮಯೂರಿ ಬಿರುದಾಂಕಿತ ಕು. ಶ್ರೇಯಾ ಮೇರ್ಕಜೆ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.

ದಿವ್ಯಾಂಗ ಚೇತನ ಕವಿಗೋಷ್ಠಿ: ಬಳಗದ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಚೇತನ ಪ್ರತಿಭೆಗಳಾದ ಕು. ಧನ್ಯಶ್ರೀ, ಕು, ಮಾನ್ಯ ಮತ್ತು ಶ್ರೀಮತಿ ಮಲ್ಲಿಕಾ ಐ ಹಿರೇಬಂಡಾಡಿಯವರಿಂದ ಕವಿಗೋಷ್ಠಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ರವರು ಮಾತನಾಡಿ, "ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರಿನ ದೊಡ್ಡ ಶಕ್ತಿ ಚಿಗುರೆಲೆ ಸಾಹಿತ್ಯ ಬಳಗ ಆಗಿದ್ದು, ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಕೈ ಜೋಡಿಸುತ್ತಿದೆ' ಎಂದರು.

 

MORE NEWS

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-04-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...

ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಗೆ ಆಹ್ವಾನ 

29-04-2024 ಬೆಂಗಳೂರು

ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇವರ ವತಿಯಂದ ಹಾಗೂ ನಾಡೋಜ ಚೆನ್ನವೀರ ಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ದತ್ತ...

ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

28-04-2024 ಬೆಂಗಳೂರು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023ನೇ ಸಾಲಿನಲ್ಲಿ ಪುಸ್ತಕಗಳಿಗೆ ನೀಡಲಾಗುವ ವಿವಿಧ ದತ್ತಿ ಪುರಸ್ಕಾರಗಳಿಗಾಗಿ ಕ...