‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ ವಿವಿಧ ಪ್ರಕಾರದ ಕನ್ನಡ ಕೃತಿಗಳ ಆಹ್ವಾನ

Date: 03-04-2024

Location: ಬೆಂಗಳೂರು


ಬೆಂಗಳೂರು: ಸ್ವಾಭಿಮಾನಿ ಪುಸ್ತಕ ಪ್ರಶಸ್ತಿಗೆ 2023 ರಲ್ಲಿ ಪ್ರಕಟವಾದ ವಿವಿಧ ಪ್ರಕಾರದ ಕೃತಿಗಳನ್ನು ಆಹ್ವಾನಿಸಲಾಗಿದೆ.

ಸ್ವಾಭಿಮಾನಿ ಕರ್ನಾಟಕ ವೇದಿಕೆಯು ಪ್ರತಿ ವರ್ಷದಂತೆ ಈ ವರ್ಷವೂ "ಸ್ವಾಭಿಮಾನಿ ಮಸ್ತಕ ಪ್ರಶಸ್ತಿ"ಗೆ 2023 ರಲ್ಲಿ ಪ್ರಕಟಗೊಂಡ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಗೆ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಲೇಖಕರು ಮತ್ತು ಪ್ರಕಾಶಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ.

ಆಯ್ಕೆಯಾದ 4 ಪ್ರಕಾರದ, 7 ಕೃತಿಗಳಗೆ (ಅದರಲ್ಲಿ ಒಂದು ಡಾ.ಸಿ.ಸೋಮಶೇಖರ/ಶ್ರೀಮತಿ ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ (ರಿ), ಬೆಂಗಳೂರು, ದತ್ತಿ ಪ್ರಶಸ್ತಿ ಸೇರಿದೆ) ಕತೆ, ಕಾದಂಬರಿ, ಕವಿತೆ, ಲೇಖನ, ಮಕ್ಕಳ ಸಾಹಿತ್ಯ, ನಾಟಕ ಇತ್ಯಾದಿಯಾಗಿ, ತಲಾ 5000 ರೂ.ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹೊಂದಿದ್ದು, ಮಸ್ತಕದ ಮೂರು ಪ್ರತಿಗಳನ್ನು ಮೇ 5 ರೊಳಗೆ ಕಳುಹಿಸಬೇಕೆಂದು ವೇದಿಕೆಯ ಅಧ್ಯಕ್ಷರಾದ ದ್ವಾರನಕುಂಟೆ ಪಾತಣ್ಣ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸ: ದ್ವಾರನಕುಂಟೆ ಪಾತಣ್ಣ, ಅಧ್ಯಕ್ಷರು, ಸ್ವಾಭಿಮಾನಿ ಕರ್ನಾಟಕ ವೇದಿಕೆ, ನಂ.118, ಹೊಂಬೆಳಕು, ಎಚ್.ಎಂ.ಟಿ. ಲೇಔಟ್, ನಾಗಸಂದ್ರ ಅಂಚೆ, ಬೆಂಗಳೂರು- 560 073 ಹೆಚ್ಚಿನ ಮಾಹಿತಿಗಾಗಿ 9686073837 ಜಂಗಮವಾಣಿಯನ್ನು ಸಂಪರ್ಕಿಸಬಹುದು ಎಂದು ಸ್ವಾಭಿಮಾನಿ ಕರ್ನಾಟಕ ವೇದಿಕೆಯ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

MORE NEWS

ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿನಿಧಿ ರಾಜ್ಯ ಪ್ರಶಸ್ತಿಗಳಿಗೆ ಆಹ್ವಾನ 

18-05-2024 ಬೆಂಗಳೂರು

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2023ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿ...

ಅನುಪಮಾ ನಿರಂಜನ ಅವರ ಬಗ್ಗೆ ಓದಿ ತಿಳಿದುಕೊಳ್ಳುವುದು ಬಹಳಷ್ಟಿದೆ; ಎಚ್.ಎಲ್. ಪುಷ್ಟ

17-05-2024 ಬೆಂಗಳೂರು

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯಿಂದ ಡಾ. ಅನುಪಮಾ ನಿರಂಜನ ಹುಟ್ಟು ಹಬ್ಬದ ಪ್ರಯುಕ್ತ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ...

ದಾಸರಾಯರ ಕೃತಿ ಸಂಪದಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಗುವ ಎಲ್ಲ ಅರ್ಹತೆಗಳಿವೆ

17-05-2024 ಬೆಂಗಳೂರು

ಬೆಂಗಳೂರು: ದಾಸರಾಯರ ಕೃತಿ ಸಂಪದಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಗುವ ಎಲ್ಲ ಅರ್ಹತೆಗಳಿವೆ ಎಂದು ಹರಿದಾಸ ಸಂಪದ ಸಂಸ್ಥ...