Date: 16-10-2024
Location: ಬೆಂಗಳೂರು
ಬೆಂಗಳೂರು: ಶೇಷಾದ್ರಿಪುರಂ ಶಿಕ್ಷಣ ದತ್ತಿ, ಶೇಷಾದ್ರಿಪುರಂ ಸಂಜೆ ಕಾಲೇಜು ಹಾಗೂ ಗೋಧೂಳಿ ಕನ್ನಡ ಸಂಘ ಮತ್ತು ಮಂಗಳೂರಿನ ಶೋಧನ ಪ್ರಕಾಶನದ ಸಹಯೋಗದಲ್ಲಿ ಪ್ರೊ.ಎ.ವಿ. ನಾವಡ ಸಂಪಾದಿಸಿದ ‘ಮುದ್ದಣ ಕೃತಿ ಕರಜನ’ ಮುದ್ದಣ ಕವಿಯ ಸಮಗ್ರ ಕಾವ್ಯ ಸಂಪುಟ ಕೃತಿಯ ಲೋಕಾರ್ಪಣಾ ಸಮಾರಂಭವು 2024 ಅ.16 ಬುಧವಾರದಂದು ನಗರದ ಶೇಷಾದ್ರಿಪುರಂ ಸಂಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಸಂಶೋಧಕ, ವಿದ್ವಾಂಸ ನಾಡೋಜ ಹಂಪ ನಾಗರಾಜಯ್ಯ ಅವರು, “ತಂದೆಯ ಅಚ್ಚಿನ ಮುಖ, ಅದೇ ಎರಕದ ಮೊಗ ನಮ್ಮ ವಾಸುದೇವ ನಾವಡ ಅವರದ್ದು. ತಂದೆಯ ಅಚ್ಚನ್ನು ಮಾತ್ರವಲ್ಲದೇ, ತಂದೆಯ ವಿದ್ವತ್ ಪರಂಪರೆಯನ್ನು ಅವರು ಉದ್ಘಾರ್ಷ ಸ್ಥಿತಿಗೆ ತೆಗೆದುಕೊಂಡು ಹೋಗುವಂತಹ ಕೆಲಸವನ್ನು ತಮ್ಮ ಅಧ್ಯಯನದ ಮೂಲಕ ಮಾಡುತ್ತಿದ್ದಾರೆ. ಸ್ವತಃ ತಮ್ಮ ಅಧ್ಯಯನದಿಂದ ತಮ್ಮ ವಿದ್ವತ್ ಅನ್ನು ಬೆಳೆಸಿಕೊಂಡು, ಎಷ್ಟೆಷ್ಟೂ ಕ್ಷೇತ್ರಗಳಲ್ಲಿ ಅವರು ತಮ್ಮ ಬಹುಶ್ರುತತ್ವವನ್ನು ಪ್ರಕಟಿಸಿದ್ದಾರೆ ಎಂದರೆ, ಅದನ್ನು ನೋಡಿದ, ಓದಿದ, ತಿಳಿದ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಸಹಜವಾಗಿಯೇ ಅವರ ವಿಚಾರದಲ್ಲಿ ಇರುವಂತಹ ಗೌರವ ಇಮ್ಮಡಿಯಾಗುತ್ತದೆ," ಎಂದು ತಿಳಿಸಿದರು.
‘ಮುದ್ದಣ ಕೃತಿ ಕರಜನ’ ಮುದ್ದಣ ಕವಿಯ ಸಮಗ್ರ ಕಾವ್ಯ ಸಂಪುಟ ಕೃತಿಯ ಮೊದಲ ಗೌರವ ಪ್ರತಿಯನ್ನು ಕರ್ನಾಟಕ ಸರ್ಕಾರದ ಮಾನ್ಯ ಸಭಾಪತಿಗಳಾದ ಯು.ಟಿ ಖಾದರ್ ಅವರಿಗೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ, ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೆಪುರಂ ಜಿ. ವೆಂಕಟೇಶ, ವೇದಿಕೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ. ನಾವಡ, ಲೇಖಕ ಸತ್ಯಮಂಗಲ ಮಹಾದೇವ ಅವರು ಉಪಸ್ಥಿತರಿದ್ದರು.
ಕೃತಿ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ನೆರೆದಿದ್ದರು.
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...
ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...
©2025 Book Brahma Private Limited.