ವಾರದ ಲೇಖಕ ವಿಶೇಷದಲ್ಲಿ ಕನ್ನಡದ ವ್ಯಂಗ್ಯಶೈಲಿಯ ಬರಹಗಾರ ‘ಬೀಚಿ’


ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕನ್ನಡದ ವ್ಯಂಗ್ಯಶೈಲಿಯ ಬರಹಗಾರ ಬೀಚಿ ಅವರ ಕುರಿತ ಒಂದು ನೀಳ ನೋಟ..

ಹಾಸ್ಯ ಬರಹಗಳಿಗೆ ಜೀವತುಂಬಿದ ಕನ್ನಡದ ವ್ಯಂಗ್ಯಶೈಲಿಯ ಬರಹಗಾರ ಬೀಚಿ. ನಿಜನಾಮ ರಾಯಸಂ ಭೀಮಸೇನರಾವ್.

1913, ಎಪ್ರಿಲ್ 23 ರಂದು ಹರಪನಹಳ್ಳಿ ಮೂಲದ ಮಾಧ್ವ ಸಂಪ್ರದಾಯಸ್ಥ ಕುಟುಂಬದ, ಆರ್ ಶ್ರೀನಿವಾಸರಾಯರು ಮತ್ತು ಭಾರತಮ್ಮ ದಂಪತಿಗಳಿಗೆ ಜನಿಸಿದರು.

ಇವರ ಜೀವನದಲ್ಲಿ ನಡೆದ ವೃತ್ತಾಂತಗಳು ಹಲವು; ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಳ್ಳುತ್ತಾರೆ. ನಂತರದಲ್ಲಿ ಸೋದರತ್ತೆಯ ಆಶ್ರಯದಲ್ಲಿ ಬೆಳೆದು ಎಸ್.ಎಸ್.ಎಲ್.ಸಿ ಯವರೆಗೆ ವಿದ್ಯಾಭ್ಯಾಸವನ್ನು ಪಡೆಯುತ್ತಾರೆ. ಹಣಕಾಸಿನ ತೊಂದರೆಯಿಂದ ತಮ್ಮ ವಿದ್ಯಾಭ್ಯಾಸವನ್ನು ಕೂಡ ಮೊಟಕುಗೊಳಿಸುತ್ತಾರೆ. ತಮ್ಮ ಶಾಲಾ ವಿದ್ಯಾಭ್ಯಾಸವನ್ನು ತೆಲುಗು ಭಾಷೆಯಲ್ಲಿಯೇ ಮಾಡಿದ ಇವರಿಗೆ ಕನ್ನಡದ ನಂಟೇ ಇರಲಿಲ್ಲ.

ಹೀಗೆ ಬಾಲ್ಯದಿಂದಲೂ ಕನ್ನಡದ ನಂಟೆ ಇರದ ಬೀಚಿ ನಂತರದ ದಿನಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಪರಿ ಮಾತ್ರ ಬಹಳ ವಿಶೇಷ. ಇದಕ್ಕೆ ಮುಖ್ಯ ಕಾರಣ ಅವರ ಹೆಂಡತಿ.

ಒಂದು ದಿನ ಬೀಚಿ ಅವರ ಜೀವನದಲ್ಲಿ ಒಂದು ಮಹತ್ವದ ಘಟನೆ ನಡೆಯುತ್ತದೆ. ಅದೇನಪ್ಪ ಅಂದ್ರೆ ಬೀಚಿ ಅವರ ಹೆಂಡತಿ ಬೀಚಿ ಅವರಲ್ಲಿ ಕನ್ನಡ ಪುಸ್ತಕ ಓದುವ ಬೇಡಿಕೆ ಇಡುತ್ತಾರೆ. ಮೊದಲೇ ಬೀಚಿ ಅವರಿಗೆ ಕನ್ನಡದ ಕುರಿತು ಅಳುಕಿತ್ತು. ಕನ್ನಡದಲ್ಲಿ ಬರೆಯುವುದು, ಓದುವುದು ಅಷ್ಟೇನೂ ಗೌರವದ ಕೆಲಸವಲ್ಲ ಎಂಬ ಭಾವನೆಯಿತ್ತು. ಇದರಿಂದ ಅಲ್ಪ ಸ್ವಲ್ಪ ತಿರಸ್ಕಾರದ ಭಾವದಿಂದಲೇ ಒಂದು ಪುಸ್ತಕದ ಅಂಗಡಿಗೆ ಹೋದರಂತೆ. ‘ಒಂದು ಕನ್ನಡದ ಪುಸ್ತಕ ಕೊಡಿ. ಯಾವುದಾದರೂ ಚಿಂತೆಯಿಲ್ಲ. ರೈಲ್ವೆ ಟೈಮ್ ಟೇಬಲ್ ಪುಸ್ತಕ ಕೊಟ್ಟರೂ ಅಡ್ಡಿಯಿಲ್ಲ. ಆದರೆ ಕನ್ನಡದಲ್ಲಿ ಅಚ್ಚಾಗಿರಬೇಕು” ಎಂದರಂತೆ!. ಆಗ ಅವರಿಗೆ ಅಂಗಡಿಯಾತ ಕೊಟ್ಟ ಪುಸ್ತಕ ‘ಸಂಧ್ಯಾರಾಗ’. ಹೀಗೆ ಬೀಚಿ ಅವರು ಅ.ನ. ಕೃಷ್ಣರಾಯರ ಕಾದಂಬರಿ ‘ಸಂಧ್ಯಾರಾಗ’ದಿಂದ ಸದ್ದಿಲ್ಲದೆ ಕನ್ನಡ ಪ್ರೇಮಿಯಾದರು.

ಅವರಲ್ಲಿ ಹಾಸ್ಯ ಪ್ರಜ್ಷೆ ಧಾರಳವಾಗಿದ್ದ ಕಾರಣ ಹಾಸ್ಯದ ಬರವಣಿಗೆಗಳನ್ನೇ ಹೆಚ್ಚಾಗಿ ಬರೆದರು. ಅವರ ‘ದಾಸಕೂಟ’ ಕನ್ನಡದಲ್ಲಿಯೇ ಮೊತ್ತ ಮೊದಲ ಹಾಸ್ಯಪ್ರಧಾನ ಕಾದಂಬರಿ. ನಂತರದಲ್ಲಿ ಸರಸ್ವತಿ ಸಂಸಾರ, ಮೂರು ಹೆಣ್ಣು ಐದು ಜಡೆ, ಸುನಂದೂಗೆ ಏನಂತೆ, ಕಾಂಮಣ, ತಿಂಮ ರಸಾಯನ, ಅಮ್ಮಾವ್ರ ಕಾಲ್ಗುಣ, ಕತ್ತಲಲ್ಲಿ ಬಂದವಳು, ಎಲ್ಲಿರುವೆ ತಂದೆ ಬಾರೋ, ತೋಚಿದ್ದು ಗೀಚಿದ್ದು ಹೀಗೆ 50ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ನನ್ನ ಭಯಾಗ್ರಫಿ ಇವರ ಆತ್ಮಕಥೆ. ಇವರ ಅಂಕಣಗಳು, ಏಕಾಂತ, ರೇಡಿಯೋ ನಾಟಕಗಳು, ವಿನೋದ ಬರಹಗಳು, ಸಣ್ಣಕಥೆ ಇತ್ಯಾದಿಗಳು ಬಹಳಷ್ಟು ಪ್ರಸಿದ್ದಿಯನ್ನು ಪಡೆದುಕೊಂಡಿದೆ.

ಹೀಗೆ ಸಮಾಜದ ಓರೆ ಕೋರೆಗಳನ್ನು, ಸಾಮಾಜಿಕ ಬೇನೆಗಳನ್ನು, ಕಲಹ, ಭಾಷಾ ವೈವಿಧ್ಯವನ್ನು ತನ್ನದೇ ಶೈಲಿಯಲ್ಲಿ ಹಿಡಿದಿಟ್ಟುಕೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಬೀchiಯವರು 1980 ಡಿಸೆಂಬರ್ 7 ರಂದು ನಿಧನರಾದರು.

MORE FEATURES

ಎಲ್ಲವನ್ನೂ ಉಡಿಯಲ್ಲಿ ತುಂಬಿಕೊಂಡು ಹರಿಯುತ್ತಿರುವ ಜಯಂತರ ಅಂತರಗಂಗೆ ಕಲರವ

12-05-2024 ಬೆಂಗಳೂರು

'ಜಯಂತ್ ಕಾಯ್ಕಿಣಿಯವರ ಶೈಲಿಯ ಸ್ವಾದವಿರುವುದೇ ಅವರು ಕಟ್ಟಿ ಕೊಡುವ ಚಿತ್ರಣಗಳ ಸೂಕ್ಷ್ಮವಾದ  ವರ್ಣನೆ ಮತ್ತು ಅ...

‘ಭಾರತೀಯ ದಾರ್ಶನಿಕ ಪರಂಪರೆ ಮತ್ತು ಬಸವ ದರ್ಶನ’

12-05-2024 ಬೆಂಗಳೂರು

ಜಾಗತಿಕ ಸಂಸ್ಕೃತಿಗೆ ಘನತೆಯನ್ನು ತಂದು ಕೊಡುವವರೆಂದರೆ ತಮ್ಮ ವ್ಯಕ್ತಿತ್ವವನ್ನು ಉದಾತ್ತೀಕರಿಸಿಕೊಂಡ ಮಹಾಪುರುಷರು; ಮತ್ತ...

ಮುನ್ನುಡಿಗಳಿಗೆ ಅವುಗಳದ್ದೇ ಆದ ಪಾತ್ರವಿರುವಂತೆಯೇ ಮಿತಿಯೂ ಇದೆ

12-05-2024 ಬೆಂಗಳೂರು

`ಮುನ್ನುಡಿಗಳ ಮಹತ್ವವಾಗಲಿ, ಪಾತ್ರವಾಗಲಿ ಕಡಿಮೆಯಾದದ್ದಿಲ್ಲ. ಮುನ್ನುಡಿಗಳು ಓದುಗರು ಮತ್ತು ಕೃತಿಯ ನಡುವೆ ಕಟ್ಟುವ '...