Poem

ಅಮವಾಸೆಯ ಚಂದ್ರ

  .. ಅಮವಾಸೆಯ ಚಂದ್ರ..

ಮೌಢ್ಯ ತುಂಬಿದ ಸಮಾಜದಲ್ಲಿನ
ಮೇಲು ಕೀಳೆಂಬ ನೋವುಂಡಿದ್ದು
ಅಪಮಾನ ಅವಮಾನ ನನ್ನವರಿಗೆ ಬೇಡವೆಂದು
ಹಗಳಿರಳು ದುಡಿದು ಸಮಾನತೆಯ ಕಹಳೆ ಉದಿದೆ.
 
ಜಾತಿವಾದಿಗಳ ಕಪಟ ವಂಚನೆಗೆ ಹೆದರದೆ
ಎದೆ ಕೊಟ್ಟು ಹೋರಾಡಿ ಶೈಕ್ಷಣಿಕ ಕ್ರಾಂತಿಯಿಂದ
ಸಮಾಜಿಕ ಸಮಾನತೆ ಸಾಧ್ಯವೆಂದು
ಮನುಷ್ಯತ್ವದ ಪಾಠ ಮಾಡಿದೆ


ಬುಲೆಟಗಿಂತ ಬ್ಯಾಲೆಟಿನ್ ಮಹತ್ವ ಅರಿತು
ಆಸ್ತಿ ತೆರಿಗೆ,ಶಿಕ್ಷಣ,ಬಂಡವಾಳ ಶಾಹಿಗಳಿಗಿದ್ದ
ಮತದಾನ ಹಕ್ಕನು ಸರ್ವರಿಗೂ ನೀಡಿ
ಪ್ರಜಾಪ್ರಭುತ್ವಕ್ಕೆ ಭದ್ರಾಬುನಾದಿ ಹಾಕಿದೆ

ಹಿರಾಕುಡ ದಾಮೋದರ ನದಿಗೆ ಆಣೆಕಟ್ಟು
ರಿಸರ್ವ್ ಬ್ಯಾಂಕ್,ಕಾರ್ಮಿಕರ ಭವಿಷ್ಯ ನಿಧಿ
ಹೆರಿಗೆ ರಜೆ,ಕೆಲಸದ ಸಮಯದಲ್ಲಿ ಬದಲಾವಣೆ
ಹತ್ತು ಹಲವು ಯೋಜನೆಗಳಿಂದ
ಶೂದ್ರರ ಬದುಕಿನಲ್ಲಿ ಬೆಳಕಾದೆ
 
ಹೆಣ್ಣು ಗಂಡಿನ ಗುಲಾಮಳೆನ್ನುವ ಕಾಲದಲ್ಲಿ
ಮತಾಂಧರನ್ನು ಎದಿರು ಹಾಕಿಕೊಂಡು
ಮಹಿಳಾ ಕೋಡ್ ಬಿಲ್ ಮಂಡಿಸಿ ಒಪ್ಪದಿದಾಗ
ಹೆಣ್ಣಿಗೆ ಸಮಾನತೆ ನೀಡದ ಮಂತ್ರಿ ಮಂಡಲಕೆ
ರಾಜೀನಾಮೆ ಬಿಸಾಕಿ ಹೊರ ನಡೆದೆ

ಮನುವಾದ ಸಿದ್ದಾಂತದವರು
ಬದಲಾಗುವುದಿಲ್ಲವೆಂದು ತಿಳಿದು
ಕರುಣೆ,ಪ್ರೀತಿ,ಸಮಾನತೆಯನ್ನು
ತೋರುವ ಧಮ್ಮದ ದಾರಿಯನ್ನು ಅಪ್ಪಿ
ಮನುಕುಲಕ್ಕೆ ಸಮತಾ ಮಾರ್ಗ ಭೋದಿಸಿದೆ.

By: ಉತ್ತಮ. ಎ. ದೊಡ್ಮನಿ

Comments[0] Likes[2] Shares[0]

Submit Your Comment

Latest Comments

No comments are available!