Poem

ಅವಳು

ಅವಳೆಂದರೆ 
ಸುರಿವ ಮಳೆಯೊಳು ನಿಂತು
ಅದರೊಳು ಕಂಬನಿಗಳ ಬೆರಿಸಿ
ನೋವ ನುಂಗುವ ಗಟ್ಟಿಗಿತ್ತೆ

ಬಲು ತೂಕದ ಮಾತುಗಳಿಗೆ
ಮೌನವನ್ನು ಸಮನಾಗಿ ತೂಗಿ
ಮಾತುಗಳ ಶೂನ್ಯದಲಿ ಮೂಖವಾಗುವಳು

ಬಳಲಿದ ಉಸಿರ ಹೊರಗೆಡವದೆ
ಒಳಗೊಳಗೆ ತಡೆದು 
ಎದೆಯ ದಹಿಸಿಕೊಳ್ಳುತ್ತ
ಅದರ ಪ್ರಕರ ಬೆಳಕಿನ ಸವಿಯನು
ಮತ್ತಾರಿಗೊ ನೀಡುವಳು

ಹಬ್ಬ ಹರಿದಿನ ಉತ್ಸವ ಜಾತ್ರೆಯ
ಸಡಗರದ ರಜೆಯಿಲ್ಲದೆ
ತುರ್ತು ಸೇವೆಯ ಇಲಾಖೆಯ
ಮುಖ್ಯಸ್ಥೆಯಂತೆ ಸಂಬಂಳ ರಹಿತವಾಗಿ
ದುಡಿವ ಕಾರ್ಮಿಕಳು

ಆಸೆ ಬಯಕೆಯ ಭಾವನೆಗಳನ್ನು
ಯಾವುದೊ ತಡಿಕೆಗಳ ನಡುವೆ
ಕುರಿ ಮಂದೆಯ ಹಾಗೆ ಕೂಡಿ ಹಾಕಿ
ಸಿಕ್ಕಿದ್ದಷ್ಪು ಸಂತಸವ ತಬ್ಬುವ ಮಹಾತೃಪ್ತಿ....
              

By: ದಾಸ್ ರಂಗೇನಹಳ್ಳಿ

Comments[0] Likes[4] Shares[0]

Submit Your Comment

Latest Comments

No comments are available!