Poem

ಅವನೊಬ್ಬ ಬುದ್ಧ!!

ಅವನೊಬ್ಬನಿದ್ದನಂತೆ ಬುದ್ಧ
ಇಹದ ನಶೆಯಿಳಿಸಿಕೊಂಡು
ನಿಶೆಯಲ್ಲೆ ಮೈಕೊಡವಿ ಹೊರಟನಂತೆ
ಆಸೆಯೆಂದರೆ ಮೋಸವೆಂದು
ತನ್ನ ತಾನೇ ಹುಡುಕುತ ಹೊರಟನಂತೆ
ಎಲ್ಲ ಬಿಟ್ಟು ಹೊರಟನಂತೆ 
ದೇಹವಲ್ಲದೆ ಬೇರೆ ಆತ್ಮವಿಲ್ಲವೆಂದು
ನಾಳೆಯ ಮುಕ್ತಿಗೆ ಕಾಯುತ
ಇಂದಿನ ಕಷ್ಟಕೆ ಬೇಯುವವಗೆ 
ಕಷ್ಟಗಳ ಪರಿಹರಿಸಿಕೊ ಎನ್ನಲು 
ಬುದ್ಧ ಬರಬೇಕಾಯಿತು ತನ್ನರಮನೆಯಿಂದ
ಇಲ್ಲೂ ಕೆಲವರು ಮನೆ ಬಿಟ್ಟು ಹೊರಟರು
ಬುದ್ಧನಾಗುವೆನೆಂದು
ಬುದ್ಧ ಬಿಟ್ಟಿದ್ದು ಕೇವಲ ರಾಜ ವೈಬೋಗವನ್ನಲ್ಲವೆಂದು
ಇವರಿಗೆ ಹೇಳುವವರಾರು
ಅವನು ಬಿಟ್ಟಿದ್ದು ಅಸಮಾನತೆಯನ್ನು
ದೇವರ ಅನಿವಾರ್ಯತೆಯನ್ನು
ಉಟ್ಟು ಹೊರಟನು ಅಹಿಂಸೆಯನ್ನು
ಮನೆ ಬಿಟ್ಟೇ ಬುದ್ಧನಾಗಬೇಕೆಂದೆನಿಲ್ಲ
ಬದ್ದನಾಗಿರು ನಿನ್ನೊಳಗಿನ ಬುದ್ಧನಿಗೆ
ಮತ್ತೊಬ್ಬ ಬುದ್ಧ ಬರುವನು ಈ ನೆಲಕೆ

By: ವಿನಯ ಜೋಯಿಸ್

Comments[0] Likes[2] Shares[0]

Submit Your Comment

Latest Comments

No comments are available!