Poem

ಬಾಳಿಗೆ ಅಂದು ಇಂದು

ಮುಗ್ಧ ಮೋರೆ ಹಿಂದೆ ಅಂದು ರುದ್ರ , ದುಷ್ಟ ಮೋರೆ;
ತೆರೆಯ ಬಾರದಿತ್ತೆ ಅಂದು ನರಕದಾದೃಷ್ಟಕ್ಕಿಂದು;

ಕಾಲಕಳೆವ ಹಾಗೆಯಲ್ಲ ಭಯದ, ಮೋಸದಾಜ್ವಾಲೆ;
ಬಿದ್ದಿಆಯಿತ್ತಲ್ಲಾ ಅಂದು ಕೊರಳಿಗಗ್ನೀಮಾಲೆ;

ಮರೆಯ ಮಾಚಿದಂತ ಕೆಂಡ ಕಾಣದಾತು ಅಂದು;
ಸ್ತ್ರೀತ್ವ ಎಲ್ಲಾ ಮಾಯಗೊಂಡು ನಾಶವಾಯಿತಲ್ಲಾ ಇಂದು;

ಜೀವದಗ್ನೀಜ್ವಾಲೆಯಿಂದ ನರಳುತ್ತಿರುವುದಿಂದು;
ಹೊರಗೆ ನಗೆಯ ಪುಷ್ಪ ಅರಳುತಿರುವುದಿಂದು;

ಬಾಳಗೆಳೆಯ ಮೊರೆವ ನಾಗನಂತೆ ಇಂದು;
ಊಸರವಳ್ಳಿಯ ಅರಿಯಲಾರದಂತಾದೆ ಅಂದು;

ಬ್ರಹ್ಮ ಬರೆದ ಮುಗಿದ ಬಾಳಿಗೆ ಅಂದಿನಿಂದಿನಾಟ;
ಬಯಲು ಆಯಿತಲ್ಲಾ ಇಂದು ಅಂದಿನಿಂದಿನಾಟ.
 

By: ಚಂದನಕುಮಾರಿ. ಎಂ

Comments[0] Likes[0] Shares[0]

Submit Your Comment

Latest Comments

No comments are available!