Poem

ಬೆಳಕು ಹರಿಯುವ ಮುನ್ನ

ನಸುಕಿನ ಕನಸು ಸವಿಯುವ ಮುನ್ನ..
ಪಿಸುದನಿ ಪೂರ್ತಿ ಮುಗಿಯುವ ಮುನ್ನ..
ಒಲವಿನ ದಾರಿ ಸವೆಯುವ ಮುನ್ನ ..
ನೆನಪಿನ‌ ದೋಣಿ ತುಂಬುವ ಮುನ್ನ..
ಮರೆಯಾಗಿ ಹೋದೆಯಾ... 
ಕನಸಾಗೇ ಉಳಿದೆಯಾ...

ಒಲವೇ ಹೀಗೆ ಇಬ್ಬನಿ ಹಾಗೆ..
ತಾಪಕೆ ಮರೆಯಾಗುವುದು... 
ಸನಿಹದ ಸುಖವ ಪಡೆಯುವ ಮೊದಲೇ
ವಿರಹಕೆ ದೂಡುವುದು...
ಪಯಣವಿನ್ನು ಉಳಿದಿರುವಾಗ
ಕಡು ಕತ್ತಲಿನ ತಿರುವಿನ ನಡುವೆ..
ಮರೆಯಾಗಿ ಹೋದೆಯಾ...
ಕನಸಾಗೇ ಉಳಿದೆಯಾ..

ಜೊತೆ ಇದ್ದಷ್ಟು ನೆನಪೇ ಸಾಕು
ಈ ಜೀವ ಉಸಿರಾಡಲು ಇನ್ನೇನು ಬೇಕು..
ಇಳಿಸಂಜೆಗೂ , ನಡುರಾತ್ರಿಗೂ 
ನಿನ್ನ ನೆನಪೇ ದೀವಟಿಗೆ...
ಬೆಳಕು ಹರಿಯುವ ಮುನ್ನ.
ಮಾತು ಮುಗಿಯುವ ಮುನ್ನ..
ಮರೆಯಾಗಿ ಹೋದೆಯಾ..
ಕನಸಾಗೇ ಉಳಿದೆಯಾ..
 

By: ಮಲ್ಲಿಕಾರ್ಜುನ ಎಸ್. ಬಿ.

Comments[0] Likes[43] Shares[2]

Submit Your Comment

Latest Comments

No comments are available!