Poem

ಗದ್ದೆಮಣ್ಣು

ಗದ್ದೆಮಣ್ಣು

ನೋಟವೀಗ ಪ್ರೇಮವಾಗಿದೆ
ತವಕವೇದನೆಯ 
ಕುದಿಬಿಂದುವೊಂದು
ನಿನ್ನೆಡೆ ಪ್ರವಹಿಸುತ ಪ್ರಣಯಿಸುತ ಬಂದು ನೋಟವಾಗಿದೆ
ಕಣ್ಣುಗಳೆರಡರ 
ಜೀವಗಳೆರಡರ 
ಭಾವಹೊಂದೀಗ ಪ್ರೇಮವಾಗಿದೆ.

ರೂಪಕಗಳಿಗೆ ಸೀಗದ
ನಿನ್ನ ರೂಪವ
ವರ್ಣಿಸಲು ಹೋಗಿ 
ಕವಿರೋಸಿ
ಪ್ರೇಮ ಪ್ರಾಬಲ್ಯಕೆ
ತನ್ನ ದೌರ್ಬಲ್ಯಕೆ
ಮಧುರಭಾವಗಳಲ್ಲೆ
ತಾನು ಬರೆದ ಸಾಲುಗಳಲ್ಲೆ
ನಿನ್ನ ಕಾಣುವಾಸೆ,
ನಿನ್ನ ನೋಡುವಾಸೆ
ಆತನಿಗೆ.


ಆ ನಿನ್ನ ರಸಗೆನ್ನೆಯ ಬಣ್ಣ
ಗದ್ದೆಮಣ್ಣಿನ ಮೈ ಬಣ್ಣ
ಕಾಡ ಹೂವಿನಂತೆ ಕಾಡುವ ನಿನ್ನ 
ಅಂದವು
ಮೋಹಕತೆಗು ಮೋಹ ಹಿಡಿಸುವಷ್ಟಿದೆ
ಚಿನ್ನ
ಆಲಿಂಗನಕ್ಕು ಆಸೆ ಹುಟ್ಟುವಂತಿದೆ 
ನಿನ್ನ
ಬಾಚಿ ಮುತ್ತುಗೈಯಲು

By: ಮಧುಕುಮಾರ್ ಎನ್.

Comments[1] Likes[4] Shares[0]

Submit Your Comment

Latest Comments

ಸುಷ್ಮಾ ಬಿ. ಎಸ್.
Jul 08,2020

ಪ್ರಕೃತಿಯ ಬಗ್ಗೆ ಇಂಥಾ ಪ್ರೇಮವನ್ನು ಒಬ್ಬ ಕವಿಮಾತ್ರ ಹೊಂದಬಲ್ಲ...👌