Poem

ಹುಡುಕಾಟ

 ಮನವೆಂಬ ಕನ್ನಡಿಯೊಳಗೆ ,
         ಜಾಲಾಡಿ  ಹುಡುಕುತಿರಲು ನಾ ನನ್ನನು..
 ಸಹಸ್ರ ವಿಚಾರಗಳ ರಾಶಿಯಲಿ ,
         ಕಳೆದು ಹೋಗಿರುವ ನನ್ನನು..
 ಕಾರ್ಮೋಡದ ಸಂತೆಯಲಿ ,
         ಅವಿತು ಕೊಂಡಿರುವ ನನ್ನನು..
 ಬೆಳದಿಂಗಳ ಚಂದಿರನ ,
         ಕಪ್ಪು ಚುಕ್ಕೆಯಲಿ ನನ್ನನು..
 ನಕ್ಷತ್ರಗಳ ಪೊದೆಯಲಿ ,
         ಮಿಂಚುತ್ತಿರುವ ನನ್ನನು..
 ಸಮುದ್ರದ ಅಲೆಯ ,
         ಅಂತರಾಳದಲ್ಲಿ ನನ್ನನು..
 ಚಲಿಸುವ ಗಡಿಯಾರದ ,
         ಮುಳ್ಳಿನಲಿ ನನ್ನನು..
 ಓದುಗರ ದಿಗ್ಬಂಧನದ ,
         ಪುಸ್ತಕದಲಿ ನನ್ನನು..
 ಶಬ್ದವೇ ತೋಚದ ,
          ಖಾಲಿ ಹಾಳೆಯಲಿ ನನ್ನನು..

By: ಶ್ರೇಯ ವಿ ಉಪಾಧ್ಯಾಯ

Comments[2] Likes[2] Shares[1]

Submit Your Comment

Latest Comments

Shalini Ashok
Jul 08,2020

Super 😃🌷🌹

Va
Jul 06,2020

Super