Poem

ಇದು ನನ್ನದೆ ಕವಿತೆ

ನನ್ನೆದೆಯ ಬಾನಂಗಳದಲ್ಲಿ ಮೂಡಿತೊಂದು ಕವಿತೆ
ಬರೆಯಬೇಕೆಂಬ ಹಂಬಲ ನನಗೆ 
ಮನಸ್ಸು ಹೃದಯಗಳ ಮಾತುಗಳ ಸಮ್ಮಿಲನ.
ಕವಿತೆ ಬರೆಯುವ ಗಾಳಿ ಗಂಧ ಗೊತ್ತಿಲ್ಲ ನನಗೆ
ಕೊನೆಗೆ ಸುರು ಮಾಡಿದೆ ಬರೆಯಲಿಕ್ಕೆ ಕವಿತೆ
ನನ್ನೊಳಗಿನ ಕವಿತೆಯ ಸಾಲುಗಳಿಗೆ ಪದಗಳ 
ಜೋಡಣೆ ಸುರು ಮಾಡಿದೆ .
ಮೌನದ ಹಕ್ಕಿಯು ಹಾರಿದಾಗ 
ಕಣ್ಣಿನ ರೆಪ್ಪೆಗಳು ಮಾತನಾಡಿದಾಗ 
ಇದು ನನ್ನದೆ ಕವಿತೆ .ಇದು ನನ್ನದೆ ಕವಿತೆ
ಭಾವನೆಗಳಿಲ್ಲದ ಬರೆದ ಕವಿತೆ
ಕಲ್ಪನೆಗಳು ಮೂಡದ ಕವಿತೆ
ಪದಗಳಿಗೆ ಅರ್ಥ ಸಿಗದ ಕವಿತೆ.
ಇದು ನನ್ನದೆ ಕವಿತೆ ನಾ ಬರೆದ ಕವಿತೆ.....!!


 

By: ಶ್ರೀ ಕಿರಣ್

Comments[0] Likes[0] Shares[0]

Submit Your Comment

Latest Comments

No comments are available!