Poem

ಜಗತ್ ಚೇತನ ಬಾಪು

ಜಗತ್ಚೆಚನ ಬಾಪು


ಪದವಿಯ ಕೊರದ ಪಾವನ ಮೂರ್ತಿ
ಜನಮಾನಸದ ನಿಜ ಚಕ್ರವರ್ತಿ
ಸತ್ಯ ಅಹಿಂಸೆಯ ಮಾರ್ಗದ ಜ್ಯೊತಿ
ಸರ್ವ ಕಾಲಕೂ ಪುರಸ್ಕೃತ ನಿಮ್ಮ ಕೀರುತಿ....
ಬಲು ರೊಚಕ ನಿಮ್ಮ ಸ್ವಾತಂತ್ರ್ಯ ಸಂಗ್ರಾಮದ ಯಾನ
ಎಷ್ಟು ಮಾಡಿದರೂ ಕಡಿಮೆಯೆ ನಿಮ್ಮ ಗುಣಗಾನ...
ನಿಮ್ಮ ಯುಗಾರಂಭವಾಗಿ ಇಂದಿಗೆ ನೂರೈವತ್ತು..
ಬರೀ ವೇಷ- ಭೂಷಣಗಳಿಗೆ ಸೀಮಿತ ನೀವು ಇವತ್ತು...
ಚಲಾವಣೆಯಾಗುತ್ತಿದೆ ಇಲ್ಲಿ ನಿಮ್ಮದೇ ಚಿತ್ರದ ನೊಟು..
ಅದರಿಂದಲೇ ಚುನಾವಣೆಯಲ್ಲಾಗುತ್ತಿದೆ ವೊಟು...
ಗಲ್ಲಿ- ಗಲ್ಲಿಗಳಲ್ಲಿ ನಿಮ್ಮದೇ ಹೆಸರಿನ ಬೀದಿ
ಆದರೆ ಯಾರೂ ನಡೆಯಲೊಲ್ಲರು ನಿಮ್ಮಯ ಹಾದಿ..
ಊರಿಗೊಂದು ನಿಮ್ಮಯ ಹೆಸರಿನ ವೃತ್ತ
ನಿಮ್ಮ ಜೀವನಾದರ್ಶ ಪ್ರಸ್ತುತಕ್ಕೆ ನಿರರ್ಥ
ರಾಮರಾಜ್ಯದ ಕನಸು ಬಿತ್ತಿದಿರಿ ಅಂದು
ರಾವಣನ ವಿಕೃತಿಯೇ ವಿಜೃಂಭಿಸುತ್ತಿದೆ ಇಂದು...
ಅಹಿಂಸೆಯೇ ಪರಮವೆಂದ ನಿಮಗೆ..
ಹಿಂಸೆಯಿಂದಲೇ ಬಿಳ್ಕೊಡುಗೆ ಸಿಕ್ಕಿದ್ದು ಮಾತ್ರ ವಿಧಿ ವಿಪರ್ಯಾಸ...
ಅಗ್ನಿದಿವ್ಯಾ

By: ಅಗ್ನಿದಿವ್ಯ (ಅಮರೇಶ ಪಾಟೀಲ)

Comments[0] Likes[1] Shares[0]

Submit Your Comment

Latest Comments

No comments are available!