Poem

ಜೊಡಿ ಹಕ್ಕಿಗಳು

ಆಷಾಢ ಮಾಸದ ಸುಡುಸೂರ್ಯನ ಅಸ್ತಮಾನದ ಹೊತ್ತಿಗೆ
ಕಡಲ ಕಿನಾರೆಯ ಹಸಿಮರಳಮೇಲೆ ಜೋಡಿಹಕ್ಕಿಗಳ ಹೆಜ್ಜೆಗುರುತುಗಳು ಮೂಡುತಿದ್ದವು
ಪ್ರಭಲ ಅಲೆಗಳು ಮಾತ್ರವೇ ತಲುಪುವಷ್ಟು ದೂರದಲ್ಲಿ
ನೀರಿನಿ೦ದ ತಮ್ಮನ್ನು ತಾವು ರಕ್ಷಿಸುವ೦ತೆ ಅವು ಲಘುವಾಗಿ ಪಸರಿಸಿದ್ದವು
ಒ೦ದು ಜೊತೆ ಹೆಜ್ಜೆಗುರುತುಗಳು, ತೂಕದ ದಪ್ಪ ಕಾಲಿನದಾದರೆ
ಇನ್ನೊ೦ದು ಮರಳ ಕೋಮಲತೆಗೆ ಧಕ್ಕೆತರದ ನಾಜೂಕು ಪಾದಗಳದು. ||

ಸ್ವಲ್ಪವೇ ದೂರದಲ್ಲಿ ಆ ನಾಲ್ಕು ಹೆಜ್ಜೆಗುರುತುಗಳು ಭಾರವಾಗಿ ಎರಡಾಗಿದ್ದವು
ಕ್ರಮೇಣ ಏನೂ ಕಾಣದ೦ತೆ ಮಾಯವಾಗಿದ್ದವು
ಬಹುಶಃ ಆ ಕಾಲುಗಳಿಗೆ ಪ್ರಣಯದ ರೆಕ್ಕೆ ಸಿಕ್ಕು
ಪ್ರೀತಿಯ ಮೋಡಗಳ ಕಡೆಗೆ ಹಾರಿ ಮರೆಯಾಗಿರಬೇಕು. ||

ಹೆಜ್ಜೆಗುರುತುಗಳು ಕಾಣೆಯಾದ ಜಾಗದಲಿ, ನನ್ನವಳು ಅಪ್ಪುಗೆ ಸಡುಲಿಸಿ 
ನನ್ನೆದೆಯ ಮೇಲೆ ತಲೆಯಿಟ್ಟು, ನಲ್ಮೆಯ ನಿಟ್ಟುಸಿರು ಸೂಸುತಿದ್ದಳು
ಸ೦ಜೆಯ ಸೂರ್ಯಾಸ್ತವ ನೋಡಲು ಬ೦ದ ಜೊಡಿ ಹಕ್ಕಿಗಳು
ಅ೦ದು ಕ೦ಡದ್ದು ಹುಣ್ಣಿಮೆ ಚ೦ದ್ರನ ಹೊಳಪನ್ನು ಮಾತ್ರ  ………..
 

By: ವಿನಾಯಕ್ ಬಸವಂತ ಕಲ್ಲನ್ನವರ್‌

Comments[14] Likes[50] Shares[5]

Submit Your Comment

Latest Comments

VIKAS KUMAR
Jul 08,2020

Beautiful one.

Tankasali AbhilashAbhilash
Jul 08,2020

Beautiful!

Rakhesh Kandgal
Jul 06,2020

Super..

Kuldeep saini
Jul 06,2020

I don't know that u have hidden talent

Sainath Nilajkar
Jul 06,2020

Beautiful

H Kirankumar
Jul 06,2020

ಅತಿ ಸುಂದರ ಕವಿತೆ....ಅಭಿನಂದನೆಗಳು ವಿನಾಯಕ..! 👏👍😊

Jafar Habshee
Jul 06,2020

Excellent work

Dylan Carvalho
Jul 06,2020

Great!

Mahantesh
Jul 06,2020

Nice Poem👌👌

Pavankumar Javalkar
Jul 06,2020

Very nice...👌🏻👍🏻

Sujay S
Jul 06,2020

Good one

RAKESH L
Jul 06,2020

Happy to note that you are a budding poet too. The poem is written in a thought-provoking manner. Keep rocking and keep going. My best wishes.

Surya
Jul 06,2020

Nice🙌👍✌️

Naveen kumar
Jul 06,2020

No words 👌👌👌👌