Poem

ಕಾಡ್ಗಿಚ್ಚು

ವಸುಂಧರೆಗೆ ಶೋಭೆ ಅನನ್ಯ ವನಸಿರಿಯು
ಮ್ರಗ-ಖಗಗಳ, ತರುಗಳ, ಸಹಬಾಳ್ವೆಯು
ಕೋಗಿಲೆಗಳ ಗಾಯನ ನವಿಲುಗಳ ನರ್ತನ
ವನ್ಯ ಸೊಬಗನುಂಡ  ಮನವು ಸಂಮೋಹನ 

ಶನಿದೇವನ ಪಥವು ವನದೇವಿಯಡೆಗೆ 
ಅಡವಿಯಾವರಿಸಿತು ಕಾಡ್ಗಿಚ್ಚ ನಾಲಿಗೆ 
ಒಣಹುಲ್ಲು ಎಲೆಗಳಿಂದ ಆಗಸಕ್ಕೆ ಚಿಮ್ಮಿ
ಧರೆಗೆ ಉರುಳಿತು ಬೃಹದಾಕಾರದ ದಿಮ್ಮಿ

ಜೀವ ರಕ್ಷಣೆಗಾಗಿ ಪ್ರಾಣಿಗಳ ಓಟ 
ಬೆಂಕಿಗೆ ಬೆಂದ ಮರಗಳ ಮೂಕ ಕಿರುಚಾಟ 
ಶತಮಾನದ ಸಂತತಿಯು ಕ್ಷಣದಲ್ಲಿ ಭಸ್ಮ
ವನ್ಯದೇವಿಯ ಮಕ್ಕಳ ಪೂರ್ಣ ನಿರ್ಣಾಮ 

ಸೇದಿ ಒಗೆದ ಬಿಡಿಗೋ! ಕರೆಂಟಿನ ಕಿಡಿಗೋ!
ನಗರೀಕರಣದ ಬಿಸಿಗೋ! ಮನುಷ್ಯತ್ವವಿಲ್ಲದ ಯೋಜನೆಗೋ!
ದುರಂತದ ದಾರಿಯಲಿ ಅನನ್ಯ ಜೀವ ಜಾಲ 
ಈ ಎಲ್ಲ ಸಮಸ್ಯೆಗೆ ಮಾನವನೇ ಮೂಲ

By: ಚಿನ್ಮಯ ರಮೇಶ ನಾಯಕ

Comments[0] Likes[4] Shares[0]

Submit Your Comment

Latest Comments

No comments are available!