Poem

ಮುಸ್ಸಂಜೆಯ ಕವಿ

ಮುಸ್ಸಂಜೆಯ ಸವಿತಂಪಲಿ
ಭಾವಗಳ ಸಂತೆಯಲಿ
ಪದಗಳನರಸುತ ಅಲ್ಲಿ
ಕಳೆದುಹೋದನು ಅವನಿಲ್ಲಿ

ತಾನೇ ಭಾವವಾಗಿ ಭಾವವೇ ತನ್ನೊಳಗೆ
ಹಿಂಡಿ ತೆಗೆದ ಪದಪುಂಜದ ಸೊಂಪಲ್ಲಿ
ಕವಿತೆಯಾಯಿತು ಸುಂದರ
ಅದ ನೋಡಿ ನಕ್ಕನು ಬಾನಲಿ ಚಂದಿರ

ತಂಗಾಳಿ ಬೀಸಲು ಸಂತಸದ ಹೊನಲು
ನೃತ್ಯಗೈದವು ಇಳೆಗೆ ಚಾಚಿದ ಬಿಳಲು
ಗಂಗೆಯು ನೋಡಿ ಮುಗುಳ್ನಗಲು
ಮಾಧುರ್ಯ ಸೂಸಲು ಕೋಗಿಲೆಯು ಕೊಳಲು
ಅಣಿಯಾದನು ಕವಿಯು ತನ್ನ ಗೂಡಿಗೆ ತೆರಳಲು
 

By: ಕಾರ್ತಿಕ್‌ ದಾಮ್ಲೆ

Comments[0] Likes[10] Shares[1]

Submit Your Comment

Latest Comments

No comments are available!