Poem

ನಮ್ಮ ರೈತ

ಹೆಗಲಿಗೆ  ಏರಿಸಿದ ನೇಗಿಲು
ಮುಂಜಾನೆಯಾದೊಡನೆ ತಾನಾಗೆ ಕರೆಯುವ ಮುಗಿಲು
ನಾಳೆಯ ಭರವಸೆಗಳು ಕಣ್ಣಲ್ಲಿ ಕಾಣುತಿರಲು
ಖುಷಿಯಿಂದ ಮೂಡಿವೆ ಕನಸುಗಳ ಸಾಲು

ಮನಸಿನ ಜೋಳಿಗೆಯಿಂದ ಬಿತ್ತನೆಯ ಮಾಡಿ
ಕೈಮುಗಿದು ಹನಿಗಳ ಧಾರೆಗೆ ಬೇಡಿ
ಕಣ್ಣಲ್ಲೆ ಸಸಿಗಳಿಗೆ ಲಾಲಿಯ ಹಾಡಿ
ಅವನ ಖುಷಿಯ ತಾಳಕ್ಕೆ ಕುಣಿಯುತ್ತಿವೆ ಅವುಗಳು ಕೂಡಿ

ಅತಿವೃಷ್ಟಿ ಅನಾವೃಷ್ಟಿ ಹೊಡೆತಗಳ ತಡೆದು
ರೋಗಗಳ ಸಂಚುಗಳಿಗೆ ಬಲಿಯಾಗದೆ ಹಿಡಿದು
ಕೀಟಗಳ ಕಾಟಗಳಿಗೆ ನಲುಗದೆ ಬೆಳೆದು
ಬೆವರ ಹರಿಸಿ ಪೋಷಿಸುವನು ಮುನ್ನಡೆದು

ಎದೆಯ ಎತ್ತರ ಬೆಳೆದು ನಿಂತಾಗ ಮೇರೆಯಿಲ್ಲ ಅವನ ಖುಷಿಗೆ
ಕೃಷಿಯಲ್ಲಿ ಯಜ್ಞ ಮಾಡುವನಿವ ಕಮ್ಮಿಯಲ್ಲ ಯಾವುದೆ ಋಷಿಗೆ
ಎರಡು ಕೈಯಲ್ಲಿ ಪಸಲನ್ನು ಹಿಡಿದು ನಿಂತವನನ್ನೀಗ 
ಕರೆಯಬಹುದೆ ಭಗೀರತನೆಂದು ನಮ್ಮ ರೈತನನ್ನಿಗ!
 

By: ಷಣ್ಮುಖಾರಾಧ್ಯ ಕೆ ಪಿ

Comments[0] Likes[0] Shares[1]

Submit Your Comment

Latest Comments

No comments are available!