Poem

ನಮ್ಮೂರು

ಮೂಡಣ ಕೆಂಪಿನ ನಡುವಲಿ ನಮ್ಮ,
ಹಳ್ಳಿಯು ನೋಡು ಬಲು ಚಂದ!
ಹರಿಯುವ ನದಿಯಲಿ ಬೆಳಕಿನ ಬಿಂಬ,
ಮಿನುಗುವ ಬಗೆಯದು ಬಲು ಅಂದ!

ಹೊರಟರು ರೈತರು ಹೊಲದ ಕಡೆಗೆ,
ಬೆಳೆಯಲು ಭತ್ತದ ಹೊಸ ಪೈರು!
ಮಣ್ಣಿನ ಘಮವದು ಎಂತಹ ಸೂಗಸು,
ಬೀಳಲು ಧರೆಗೆ ಹೊಸ ನೀರು!

ಹಸಿರಿನ ಗಿರಿಗೆ ಮುತ್ತಿನ ತೋರಣ,
ಹೂವನು ತುಂಬಿದೆ ಕಾಫಿಯ ನಾಡು!
ಚಳಿಯ ಹೊದಿಕೆ ಊರಲಿ ಇರಲು,
ನೋಡಲು ಸುಂದರ ಕಾಫಿಯ ಕಾಡು!

ಸುಡುವಾ ಬೇಸಿಗೆ ಇಲ್ಲಿ ಇರದು,
ಬೀಸುವ ಗಾಳಿಯು ತುಸು ತಂಪು!
ಹುಲ್ಲಿನ ಹಾಸಿಗೆ ಸೆಕೆಗೆ ಬಾಡಲು,
ಊರಿನ ದಾರಿಯು ತುಸು ಕೆಂಪು!

By: ಸಹನಾ ಕಾರಂತ್‌

Comments[0] Likes[36] Shares[0]

Submit Your Comment

Latest Comments

No comments are available!