Poem

ನನ್ನಾಕೆ

                "ನನ್ನಾಕೆ"

ಹಾಲು ಗಲ್ಲದ ಚೆಲುವೆಯೇ
ತೋಳುಗಳಲ್ಲಿ ಬಿಗಿದಪ್ಪಲು
ಕಾತುರದಿಂದ ಕಾಯುತಿರುವೆ

  ಅತ್ತಿತ ಜಿಂಕೆಯಂತೆ ಜಿಗಿಯುತ
  ನಡು ಬಳಕಿಸುವ ವಯ್ಯಾರದವಳೇ
  ಬಂದೆ ನಿಲ್ಲೆ ಅಲ್ಲೆ  ನೀಳಕಾಂತಿಯೇ 

ಮಗುವಿನಂತ್ತೆ ಮುದ್ದಿಸುವಳೆ
ಮೂಗಿನ ಮ್ಯಾಲೆ ಸಿಟ್ಯಾಕೆ
ಕೈಗೆ ಸಿಕ್ಕರೆ ಸುಟ್ಟು ಬಿಡುವಷ್ಟು
            
ತುಟಿಯಂಚಲಿ ಚುಕ್ಕೆವುಳವಳೆ
ಕೋಪ ತಾಪಗಳ ಜೊತೆಗ
 ಮುತ್ತು ಕೊಟ್ಟು ಮುದ್ದಿಸುವಳೆ

ಜೊತೆ ನಿಂತರೆ ಭುಜಕೆ ತಾಗುವಳೇ
ಆಗಾಗ ಮಾತು ಬಿಟ್ಟು ಮುನಿಸಿಕೊಂಡು
ಪ್ರೀತಿಯಲ್ಲಿ ನನ್ನನೆ ಗೆದ್ದವಳೆ.

By: ಉತ್ತಮ. ಎ. ದೊಡ್ಮನಿ

Comments[1] Likes[7] Shares[3]

Submit Your Comment

Latest Comments

Nagaraj dekun
Jul 06,2020

Super poem