Poem

ನೆನಪಿನಂಗಳ ಕಿರುನೋಟವೆ ಚೆಂದ

ಕಾನನದ ಹಸಿರಿನಂತೆ ಸದಾ ಅಮರ 
ಇನಿಯರೊಡನೆ ಬೆರೆತ ಕ್ಷಣಗಳು 
ಜ್ಞಾನದೇಗುಲದಿ ಕುಳಿತು ಕಲಿತ ಆ 
ನೆನಪಿನಂಗಳ ಕಿರುನೋಟವೆ ಚೆಂದ 

ಇಳಿ ಸಂಜೆಯ ತಂಪಲಿ ಕುಣಿಯುತ 
ಹಸನ್ಮುಖಿ ಮೊಗಗಳ ಜೊತೆ ನಲಿದ
ಇಂಪಿನ ಗಾನವ ಕೇಳುತ ನಡೆದ ಆ 
ನೆನಪಿನಂಗಳ ಕಿರುನೋಟವೆ ಚೆಂದ

ಆಟದ ನಡುವೆ ರಂಜಿಸಿ ಸಂಘರ್ಷಿಸಿದ 
ಭೂತದ ಆ ಮಧುರ ಸ್ನೇಹವರ್ಗವನ್ನೊಮ್ಮೆ 
ಮೆಲುಕಿದಾಗ ದೊರೆವ ಆನಂದದ ಆ 
ನೆನಪಿನಂಗಳ ಕಿರುನೋಟವೆ ಚೆಂದ

ಪ್ರವಾಸ ಜೊತೆಗೆ ಚಾರಣಕೆ ಹೊರಟು 
ಸವಿ ಭೋಜನ ಸೇವಿಸಿ ಸಂಭ್ರಮಿಸಿ
ನಿಸರ್ಗ ಸೊಬಗನ್ನು ಸವಿದ ಆ 
ನೆನಪಿನಂಗಳ ಕಿರುನೋಟವೆ ಚೆಂದ

         

By: ಮೌನಿ ಮುನೇಶ್

Comments[0] Likes[2] Shares[0]

Submit Your Comment

Latest Comments

No comments are available!