Poem

ಓ ಹೆಣ್ಣೆ

ಓ ಹೆಣ್ಣೆ ನಿನಗ್ಯಾರೆ ಸರಿಸಾಟಿ ಈ ಜಗದಲ್ಲಿ ?
ನಿನ್ನ ನಿಲುವು ಬಲ್ಲವರಾರಿಲ್ಲ ?

ಹುಟ್ಟಿದ್ದು ಒಂದೆಡೆ, ಬೆಳೆದಿದ್ದು ಮತ್ತೊಂದೆಡೆ,
ಜ್ಯೋತಿ ಬೆಳಗಿದ್ದು ಇನ್ನೊಂದೆಡೆ
ಕೀರ್ತಿ ಪತಾಕೆ ಹಾರಿಸಿದ್ದು ಬಾನಡೆ

ಓ ಹೆಣ್ಣೆ ನಿನಗ್ಯಾರೆ ಸರಿಸಾಟಿ ಈ ಜಗದಲ್ಲಿ ?
ನಿನ್ನ ನಿಲುವು ಬಲ್ಲವರಾರಿಲ್ಲ ?

ಜಗದ ಸೃಷ್ಟಿಕರ್ತಳು ನೀನೆ
ಪೃತ್ವಿಯ ಪಾಪ ಸಂಹಾರಕಳು ನೀನೆ
ಈ ಇಳೆಗೆ ಕಳೆ ತರುವ ತಾರೆಯೂ ನೀನೆ

ಓ ಹೆಣ್ಣೆ ನಿನಗ್ಯಾರೆ ಸರಿಸಾಟಿ ಈ ಜಗದಲ್ಲಿ ?
ನಿನ್ನ ನಿಲುವು ಬಲ್ಲವರಾರಿಲ್ಲ ?

ಸಹನೆಯಲಿ ಸರಸ್ವತಿಯಾದೆ,
ಕೋಪದಲ್ಲಿ ಉಗ್ರಕಾಳಿಯಾದೆ,
ಈ ದರಣಿಗೆ ಮಹಾತಾಯಿಯು ನೀನಾದೆ

ಓ ಹೆಣ್ಣೆ ನಿನಗ್ಯಾರೆ ಸರಿಸಾಟಿ ಈ ಜಗದಲ್ಲಿ ?
ನಿನ್ನ ನಿಲುವು ಬಲ್ಲವರಾರಿಲ್ಲ ?

By: ಶಿವರಾಜ ಕುಮಾರ್‌ ಕಲ್ಲೂರು

Comments[0] Likes[3] Shares[0]

Submit Your Comment

Latest Comments

No comments are available!