Poem

ಒಡವೆ -ಮೊಡವೆ

⭐ಒಡವೆ -ಮೊಡವೆ⭐
ಮದುವೆ ಮುಂಚೆ ನನ್ನಾಕೆಯ ಮುಖದ ತುಂಬ ಮೊಡವೆ.
ಅವಳ ಮುಖದ‌ ಮೊಡವೆ ಅವಳಿಗೆ ಬೇಡ ಎನಿಸುತ್ತಿತ್ತು ಅವಳ ಮುಖಕ್ಕೆ ಒಡವೆ.
ಮೊಡವೆ ಮುಖಕ್ಕೆ ಯಾಕೆ ಈ ಒಡವೆ ಗಿಡವೆ ಎಂದು ಸಂತೈಸುತ್ತಿದ್ದೆ ಮಾತಿನ ನಡುವೆ.
ಮದುವೆ ಆದ ಮೇಲೆ ಹೊರಟೆ ಹೋಯಿತು ಅವಳ ಮುಖದ ಮೇಲಿನ ಮೊಡವೆ ಎಂಬ ಒಡವೆ.
ಅವಾಗ್ಲಿಂದ್ ಪೀಡಿಸಲು ಪ್ರಾರಂಭಿಸಿದಳು ನನಗೆ ಬೇಕೆ ಬೇಕೆ ಥರ ಥರದ ಒಡವೆ.
ನಿನಗೆ ಕಷ್ಟ ಪಟ್ಟು ದುಡಿದು ತರುವೆ ರತ್ನ ಖಚಿತ ದೊಡವೆ.
ಅಲ್ಲಿಯವರೆಗೆ ಸುಮ್ಮನಿರು ನನ್ನ ಮನದೊಡವೆ.
ನೀವು ಒಡವೆ ತರುವವರೆಗೂ ಇರುವೆ ನಮ್ಮ ತವರು ಮನೆಯ ಕಡೆಗೆ.
ನೀವು ತಂದಾದ ಮೇಲೆ ಒಡವೆ  ನಾ ಮರಳಿ ನಿಮ್ಮ ಮನೆ ಕಡೆಗೆ‌ ಬರುವೆ.

By: ದಸ್ತಗೀರ ನದಾಫ್

Comments[0] Likes[1] Shares[0]

Submit Your Comment

Latest Comments

No comments are available!