Poem

ಒಣಮರ

ಕಾಡ ಬಯಲೋಳು ನೀರವ ಮೌನದಲಿ
ಭಾವಗಳುದುರಿಸಿ ಧ್ರುಢ ಚಿತ್ತದಿ ನಿಂತಿದೆ
ಸಾವಿರ ಸಂವತ್ಸರಕೆ ಸಾಕ್ಷಿಯಾಗುತಲಿ
ಹಸಿರಿಲ್ಲದೆಯು ಕಂಗೊಳಿಸುತಿದೆ ಒಣಮರವೊಂದು

ಚಿಗುರೆಲೆಯ ನಗುವಿಲ್ಲ ತರಗೆಲೆಯ ಸದ್ದಿಲ್ಲ 
ಹೂವ ಅರಳಿಸಿ ಹಣ್ಣಾಗಿಸುವ ಬಯಕೆಯು ಇಲ್ಲ
ಒಡಲ ಬಾಯಾರಿಕೆಗೆ ಮಳೆ ಹನಿಯ ಬೇಡಿಲ್ಲ
ಸಮಚಿತ್ತದಿ ನಿಂತಿದೆ ಒಣಮರವೊಂದು

ಬಳಲಿ ಬಂದ ಜೀವಕ್ಕೆ ಆಸರೆಯ ನೀಡಿಲ್ಲ
ನೆರೆ ಮರದ ಗೋಳನ್ನು ಕಿವಿಗೊಟ್ಟು ಕೇಳಿಲ್ಲ
ಹರಿಯುವ ಬಳ್ಳಿಯನು ಬರಸೆಳೆದು ಅಪ್ಪಿಲ್ಲ
ಬಾಗದೆಯೆ ಬೀಗುತಿದೆ ಒಣಮರವೊಂದು

ನೋವು ನಲಿವುಗಳೆನೇಂಬುದೇ ಅರಿತಿಲ್ಲ
ಸಾವನ್ನು ಆಹ್ವಾನಿಸಲಿಲ್ಲ ಬದುಕನ್ನು ಪ್ರೀತಿಸಲೂ ಇಲ್ಲ
ತನ್ನದೊಂದು ಬಾಳೆಂದು ಮರುಗಿ ಒಣಗಿದ್ದಲ್ಲ
ಬೇರೂರದೆಯೇ ಭದ್ರವಾಗಿದೆ ಒಣಮರವೊಂದು......

By: ಸುಷ್ಮಾ ಜೋಯಿಸ್

Comments[0] Likes[2] Shares[0]

Submit Your Comment

Latest Comments

No comments are available!