Poem

ಸೆಳೆವ

ಸೆಳೆವ-ತುಳಿವ ಮಾತ ಕಂಪಕೇಳಿ
ಮನದಿ-ಸುಳಿವ ಬೀಭತ್ಸ ರೌದ್ರ ಕಾಳಿ
ಉದ್ದರಿಸಲು ಬಂದಿಹಳು ಒಮ್ಮೆ ತಾಳಿ
ಸಾವದಾನ...ಸಾವದಾನ..ಪರಮಪದವಗಾಣ

ಹೆಂಗಿದ್ದರೇನು ನಿನ್ನಾತ್ಮನೊಪ್ಪಿದ ನಡೆ-ನುಡಿಯಲಿ
ಬಾಳ್ ಎಂದಿಗೂ ನಡೆಯದು ನರನ ಸಿದ್ದಸೂತ್ರದಲಿ
ಬರುವ ಭಾವ-ಭವಣೆ ನೀ ಹಿಡಿವ ತೂಕದಲಿ
ಸಾವದಾನ...ಸಾವದಾನ..ಎದುರಿನವನು ಮನುಜಕಾಣ

ನಿನ್ನನರಿಯದೇ ನೀನು ಪರರಿಗೇನು ಹೇಳುವೆ
ನೀ ಕಂಡ ಚುಕ್ಕಿ ಸೂರ್ಯನೆಂದು ಸಾರುವೆ
ಕಣದಗಲ ಕಣ್ಣಲಿ ವಿಶ್ವದೃಷ್ಠಿಯ ತೂಕವೇ
ಸಾವದಾನ...ಸಾವದಾನ...ಒಮ್ಮೆ ಮನಸತಿಳಿಗಾಣ

ಲೋಕಕಂಜಿ ಬದುಕುವುದೊಂದು ಬಾಳೇನು
ಹೊತ್-ಗಂಜಿ ಕಾಣದಿರಲು ಬರುವರೇನು
ಭ್ರಮೆ-ಭ್ರಾಂತಿಗೆ ಪದರಿದ ನಿನ್ನ ನುಡಿಯೇನು
ಸಾವದಾನ...ಸಾವದಾನ...ತೆರೆದೊಮ್ಮೆ ಲೋಕಕಾಣ

ಬಿದ್ದು-ಬಾಳುವ ಗೆದ್ದು -ಆಳುವ ತುಡಿತದಲಿ
ಸಿಡಿವ ಜ್ವಾಲೆಯೆ ಜಳಕೆ ಬಾಡದಿರಲಿ
ನಿನ್ನಲ್ಲಿರಳಿದ ನಿರ್ಮಲ ಹೂಮನದ ಜಗಲಿ
ಸಾವದಾನ...ಸಾವದಾನ...ಪ್ರಯೋಗತ್ಮಕ ಬದುಕಕಾಣ

By: ಮಧುಕುಮಾರ್ ಎನ್.

Comments[1] Likes[12] Shares[4]

Submit Your Comment

Latest Comments

ಸುಷ್ಮಾ ಬಿ. ಎಸ್.
Jul 08,2020

ತಾಳ್ಮೆ ಹಾಗೂ ಜೀವನದ ಮೌಲ್ಯಗಳನ್ನು ಸುಂದರವಾಗಿ ನಿಮ್ಮ ಸಾಲುಗಳಲ್ಲೆ ಬಣ್ಣಿಸಿದ್ದೀರಿ 👏