Poem

ಸುಂದರ ಸೆಳೆತ

ಯಾವ ಹಕ್ಕಿಯ ಕೊರಳ ದನಿಯದು,
 ಭಾವ ತಂತಿಯ ಮೀಟಿದೆ!
ಯಾವ ಪುಷ್ಪದ ಒಡಲ ಸುಗಂಧವು,
ನನ್ನ ಬದುಕ ಸೆಳೆದಿದೆ!

ಕಡಲ ತೀರದ ಅಲೆಯ ಶಬ್ದವದು,
ಮನವ ಅತ್ತ ಕರೆದಿದೆ!
ಗಾಢ ಕತ್ತಲ ಕಡಲ ಕಿನಾರೆಯು,
ಬೆಳಕ ಹಾದಿ ತೋರಿದೆ!

ಸುರಿವ ಮಳೆಯ ಶುದ್ದ ಹನಿಯದು,
ಕೆಟ್ಟ ಚಿಂತನೆ ತೊಳೆದಿದೆ!
ಭೂಮಿ ಸಾರಿಸಿ ಹಸಿರು ಬೆಳೆಯಲು,
ಒಳ್ಳೆ ಯೋಜನೆ ಹಾಕಿದೆ!

ಶಶಿಯ ಕಾಂತಿಯು ಇರದ ಇರುಳದು,
ಬೀಸೋ ಗಾಳಿ ಸಂತೈಸಿದೆ!
ಇರುಳಲಿ ಮಿನುಗೋ ಮಿಂಚು ಹುಳವದು,
ಕಣ್ಣ ತುಂಬಾ ಬೆಳಗಿದೆ!

By: ಸಹನಾ ಕಾರಂತ್‌

Comments[1] Likes[37] Shares[1]

Submit Your Comment

Latest Comments

Vinaya Jois
Jul 09,2020

Nice poem. ಪದ ಬಳಕೆ ಸರಳವಾಗಿ ಮಾಡಿ, ಕವಿತೆ ಸುಂದರವಾಗಿದೆ..