ಬೆಂಗಳೂರಿನ ಸಮನ್ವಿತ ಪ್ರಕಾಶನ ಸಮಾನ ಮನಸ್ಕರ ನೆಲೆಯಾಗಿ 2010ರಲ್ಲಿ ಆರಂಭಗೊಂಡಿತು. ಸಮಾಜ, ಸಂಸ್ಕೃತಿ, ಸಾಹಿತ್ಯ ಚಟುವಟಿಕೆಗಳ ಹಿಂದಿನ ಧ್ವನಿಯಾಗಿ, ಬೆಂಗಳೂರು ನಗರದಲ್ಲಿ ಸ್ವಾತಂತ್ಯ್ರೋತ್ಸವ ಮತ್ತು ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಬಳಸುತ್ತಿದ್ದ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳ ನಿರ್ಮೂಲನೆಯ ಕುರಿತು 2010ರಲ್ಲೇ ಹಿರಿಯ ಕಲಾವಿದ ಎಂ.ಎಸ್. ಸತ್ಯು ನೇತೃತ್ವದಲ್ಲಿ ಈ ಸಂಸ್ಥೆಯು ಹೋರಾಟವನ್ನು ನಡೆಸಿರುತ್ತದೆ.
ಚಿತ್ರಕಲಾ ಶಿಬಿರಗಳನ್ನು, ನಿನಾದ ಸಂಸ್ಕೃತಿ ಕಲಾಕೇಂದ್ರದ ಸಹಯೋಗದಲ್ಲಿ ವಸಂತ ಗೀತ ಶಿಬಿರವನ್ನು ,ನಿರಂತರವಾಗಿ ಪೂರಕ ಶಿಕ್ಷಣ ಕಾರ್ಯಕ್ರಮಗಳು, ಜಾಗೃತಿ ಆಂದೋಲನಗಳು, ಚರ್ಚೆ ಮತ್ತು ಸಂವಾದಗಳನ್ನು ನಡೆಸುತ್ತಾ ಬಂದಿರುತ್ತದೆ. ಸಂಸ್ಥೆಯ ಹತ್ತನೆಯ ವರ್ಷದ ಹೆಜ್ಜೆ ಗುರುತನ್ನು ಸ್ಮರಣೀಯ ಮಾಡುವ ಸಲುವಾಗಿ ಮೌಲಿಕ ಕೃತಿಗಳನ್ನು ಹೊರತರುವ ಆಶಯವನ್ನು ಒಳಗೊಂಡಿದೆ. ಸಮನ್ವಿತ ಓದಿ-ಓದಿಸಿ ಅಭಿಯಾನದಡಿ ವಿಶೇಷ ರಿಯಾಯಿತಿ ದರದಲ್ಲಿ ಶಾಲೆ, ಕಾಲೇಜು,
ಗ್ರಂಥಾಲಯಗಳಿಗೆ ಪುಸ್ತಕಗಳನ್ನು ತಲುಪಿಸುವ ಕೆಲಸ ಮಾಡುತ್ತಿದೆ. ನೀವೂ ಸಹ ದೇಣಿಗೆ ನೀಡಿ, ನಿಮ್ಮ ಆಸಕ್ತಿಯ ಸಂಸ್ಥೆಗೆ ಪುಸ್ತಕ ಕಳಿಸಲು ಬಯಸಿದರೆ ವಿಶೇಷ ರಿಯಾಯಿತಿ ದರದಲ್ಲಿ ನಾವೂ ಕೈ ಜೋಡಿಸುತ್ತೇವೆ ಎನ್ನುತ್ತದೆ ಸಮನ್ವಿತ ಸಂಸ್ಥೆ.
©2024 Book Brahma Private Limited.