ಸಾಫ್ಟ್ ವೇರ್ ನಿಂದ ಸಾಕ್ಷಾತ್ಕಾರದ ಕಡೆಗೆ

Author : ಬಿ.ಎಸ್. ಜಯಪ್ರಕಾಶ ನಾರಾಯಣ

Pages 297

₹ 315.00




Year of Publication: 2022
Published by: ಸಮನ್ವಿತ ಪ್ರಕಾಶನ

Synopsys

ಸಾಫ್ಟ್ ವೇರ್ ನಿಂದ ಸಾಕ್ಷಾತ್ಕಾರದಕಡೆಗೆ ಜಯಪ್ರಕಾಶ ಬಿ.ಎಸ್‌ ಅವರ ಅನುವಾದಿತ ಕೃತಿಯಾಗಿದೆ. ತುಂಬಾ ಜನರು ಜ್ಞಾನೋದಯವೆಂದರೆ ದಿವಾಳಿಕೋರನಂತೆ ಬದುಕುವುದು ಎಂದುಕೊಂಡಿದ್ದಾರೆ. ಆದರೆ ಅದು ಶುದ್ಧ ತಪ್ಪು. 'ಜ್ಞಾನೋದಯ'ವೆಂದರೆ ನಮ್ಮನ್ನು ನಾವು ಕಷ್ಟಕ್ಕೂ ಉಪವಾಸಕ್ಕೂ ದೂಡಿಕೊಳ್ಳುವುದಲ್ಲ, ಬದಲಿಗೆ, ಜ್ಞಾನೋದಯವೆಂದರೆ ಪ್ರೀತಿ, ಉತ್ಕಟತೆ ಮತ್ತು ಸತ್ಯಸಂಧತೆಯ ಬೆಳಕಿನಲ್ಲಿ ಬದುಕುವುದು ಎಂದರ್ಥ. ಅಂದರೆ, ನಾವು ಯಾವುದೇ ಕಟ್ಟುಪಾಡುಗಳಿಲ್ಲದೆ, ನಿಷೇಧಗಳಿಲ್ಲದೆ ಬದುಕುವುದನ್ನು ಕಲಿಯುವುದು ಎಂದಷ್ಟೆ. ನೀವು ನಿಮ್ಮದೇ ಆದ ಮತ್ತು ನಿಮಗೆ ಬೇಕೆನಿಸಿದ ವಿಮೋಚನೆಯನ್ನು ಪಡೆದುಕೊಳ್ಳಬೇಕು; ನಿಮ್ಮ ಪಾಲಿನ ಬದುಕನ್ನು ಸಂಪೂರ್ಣವಾಗಿ ಅನುಭವಿಸಬೇಕು. ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೆ- ನಿಮ್ಮ ನಿಯಮಗಳನ್ನು ಪುನರ್ ಸೃಷ್ಟಿಸಿಕೊಳ್ಳಿ ನಿಮ್ಮ ವ್ಯಕ್ತಿತ್ವವನ್ನು ಮುನ‌ ವ್ಯಾಖ್ಯಾನಿಸಿಕೊಳ್ಳಿ! ಬದುಕನ್ನು ಸುಮ್ಮನೆ ಹಾಳಾಗಲು ಬಿಡಬೇಡಿ. ನೀವು ಅನಂತ ಸಾಧ್ಯತೆಗಳಿರುವ ಒಂದು ಅದ್ಭುತ ವ್ಯಕ್ತಿ ಎನ್ನುವುದು ನಿಮಗೆ ನೆನಪಿರಲಿ ಎಂಬುದು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಬಿ.ಎಸ್. ಜಯಪ್ರಕಾಶ ನಾರಾಯಣ

ಪತ್ರಕರ್ತ ಬಿ.ಎಸ್. ಜಯಪ್ರಕಾಶ್‌ ನಾರಾಯಣ ಅವರು ಉತ್ತಮ ಅನುವಾದಕ ಕೂಡ. ಪ್ರಜಾವಾಣಿ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕ/ ವರದಿಗಾರರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟಿ.ಜೆ.ಎಸ್‌. ಜಾರ್ಜ್‌ ಅವರ ಎಂ.ಎಸ್., ಯು.ಆರ್‌. ಅನಂತಮೂರ್ತಿ ಅವರ ’ನನ್ನ ಸಾಹಿತ್ಯದ ಐದು ದಶಕಗಳು’, ’ನಾನು ಮಲಾಲ’ ಕೃತಿಗಳನ್ನು ಅನುವಾದಿಸಿದ್ದಾರೆ. ಛಾಯಾಗ್ರಾಹಕ ಕೆ.ಜಿ. ಸೋಮಶೇಖರ ಅವರ ಆತ್ಮಕತೆ ’ನನ್ನ ಬದುಕು ನನ್ನ ಫೋಟೊಗ್ರಫಿ’ ಕೃತಿಯನ್ನು ನಿರೂಪಿಸಿದ್ದಾರೆ. ...

READ MORE

Related Books