ಕೇಳು ಧನಂಜಯ

Author : ರಾಜಶೇಖರ ಜೋಗಿನ್ಮನೆ

Pages 192

₹ 200.00




Year of Publication: 2023
Published by: ಸಮನ್ವಿತ ಪ್ರಕಾಶನ
Address: #೧೨, ೧ನೆ ಅಡ್ಡರಸ್ತೆ, ಮಂಜುನಾಥ ಲೇಔಟ್, ಅರಕೆರೆ ಮೈಕೋ ಲೇಔಟ್ ಹಿಂಭಾಗ, ಬನ್ನೇರುಘಟ್ಟ ರಸ್ತೆ, ಬೆಂಗಳೂರು 560076
Phone: 9844192952

Synopsys

`ಕೇಳು ಧನಂಜಯ’ ಕೃತಿಯು ರಾಜಶೇಖರ ಜೋಗಿನ್ಮನೆ ಅವರ ಕಾದಂಬರಿಯಾಗಿದೆ. ಈ ಕೃತಿಯ ಲೇಖಕರು ಹೇಳುವಂತೆ; ಸುಮಾರು ಹದಿನಾರನೇ ಶತಮಾನದಲ್ಲಿ ಆರಂಭವಾಗಿ ಇನ್ನೂರು ವರ್ಷಗಳಷ್ಟು ಕಾಲ ಸಾಗುವ ಮೊದಲ ಭಾಗ ಅಕ್ಷರಶಃ ಕಟ್ಟಿದ ಕಥನ, ಅಂಬೆಗಾರಿನ ವೆಂಕಟೇಶ ಹೆಗಡೆಯಿಂದ ಶುರುವಾಗಿ ಗೋವಿಂದ ಹೆಗಡೆ ಎಂಬಾತ ಶ್ರೀಕಾರ ಹಾಕಿದ ಜಂಗಮಪುರ, ಸಂಗೀತ, ಯಕ್ಷಗಾನ, ರಾಜರ ಆಡಳಿತ, ವಿದೇಶ ವ್ಯವಹಾರ, ಹೀಗೆ ಸಮೃದ್ಧವಾಗಿ ಸಾಗುತ್ತ ಗಜಾನನ ಹೆಗಡೆಯ ಕಾಲದವರೆಗೆ ಪಾತ್ರಗಳು ಬದಲಾಗುತ್ತ ಸಾಗುವುದೆಲ್ಲ ಇರದಿರುವುದನ್ನು ಇದ್ದಂತೆ ಸೃಷ್ಟಿಸಿದ್ದು. ಮನೆತನವೊಂದು ಉತ್ತುಂಗ ಸ್ಥಿತಿಯಲ್ಲಿರುವಾಗ ದಿಢೀರ್ ಇಲ್ಲವಾಗುವುದು, ಅದನ್ನು ಸಂಕೇತಿಸುವಂತೆ ಬದುಕಿದ್ದೂ ಏನೂ ಮಾಡಲಾಗದ ಅಸಹಾಯಕತೆಯಲ್ಲಿ ಸುಬ್ಬಮ್ಮ ಹಾಗೂ ರಾಧಕ್ಕೆ ದೇಶಾಂತರ ಹೊರಟುಬಿಡುವುದು... ಇಂತಹ ಸಂಗತಿಗಳನ್ನು ಹೇಳುವಾಗ ಮನೆತನವೊಂದರ ಮುಖ್ಯ ಪಾತ್ರಗಳ ದಟ್ಟಣೆ ಸಹಜ. ಹೀಗಾಗಿ ಆ ಪಾತ್ರಗಳ ಗುರುತು ಹಿಡಿಯಲು ಓದುಗರಿಗೆ ಕಿರಿಕಿರಿ ಆಗಬಹುದೆಂಬ ಕಾರಣಕ್ಕೆ ವಂಶವೃಕ್ಷವನ್ನೂ ಅಳವಡಿಸಿದ್ದೇನೆ. ಎರಡನೇ ಭಾಗ ಅರವತ್ತರ ದಶಕದಲ್ಲಿ ಆರಂಭವಾಗುವುದರಿಂದ ಹಾಗೂ ಪಾತ್ರಗಳ ಗೋಜಲು ಇಲ್ಲದಿರುವುದರಿಂದ ಅದಕ್ಕೆ ವಂಶವೃಕ್ಷ ಬೇಕಾಗಲಾರದು ಎಂದು ಭಾವಿಸಿದ್ದೇನೆ. ಬೇರೆಯದೇ ಕಥೆಯೇನೋ ಎಂದು ಭಾಸವಾಗುವ ಎರಡನೇ ಭಾಗಕ್ಕೂ ಮೊದಲನೆಯ ಭಾಗಕ್ಕೂ ಅವಿನಾಭಾವ ಸಂಬಂಧವೊಂದು ಸೃಷ್ಟಿಯಾಗುವ ಸಮಾಧಾನವನ್ನು ಬರಹಗಾರನಾಗಿ ನನಗೆ ಈ ಕಾದಂಬರಿ ಕೊಟ್ಟಿದೆ. ಕಥೆಯನ್ನು ಅನಂತಜ್ಜ ಹೇಳುತ್ತಿದ್ದಾನೆ. ಸಹಜವಾಗಿ ಕಥೆ ಭೂತ-ವರ್ತಮಾನದ ನಡುವೆ ಇಲ್ಲಿ ಅನಂತಜ್ಜ ಕಥೆಗಾರ, ಧನಂಜಯ ಕೇಳುಗ ಸಣ್ಣಪ್ಪಜ್ಜನಿಂದ ಕೇಳಿಸಿಕೊಂಡ ಸಂಚರಿಸುತ್ತಿರುತ್ತದೆ. ಹೀಗಾಗಿ ಕಾದಂಬರಿಯಲ್ಲಿ ನಾನು ಪ್ರವೇಶಿಸುವ ಪ್ರಮೇಯ ಬರಲಿಲ್ಲ. ಕೇಳು ಧನಂಜಯ ಎಂದು ಹೇಳುವವನು ಕಥೆಯ ಪಾತ್ರವಾದ ಅನಂತ ನಾನು ಹೇಳಬೇಕಾದ್ದನ್ನು ಕಥೆಯ ಅವನೇ ಹೇಳಿದ್ದಾನೆ. ಈ ಕಾದಂಬರಿಯ ಮೂಲಕ ಮಹತ್ವವಾದುದನ್ನೇನೋ ಹೇಳಬೇಕೆಂಬ ದರ್ದು ನನ್ನದಲ್ಲ. ಆದರೆ ಓದುಗರಿಗೆ ಅಂಥದೇನಾದರೂ ಸಿಕ್ಕರೆ ಅದು ಕಾದಂಬರಿಯ ಗೆಲುವು, ಈ ಕಾದಂಬರಿಯೆಂಬ ಕಥಾಹಂದರ ತನ್ನದೇ ಆದ ವೈಶಿಷ್ಟ್ಯವನ್ನು ದಕ್ಕಿಸಿಕೊಂಡಿದೆ ಎಂಬ ನಂಬಿಕೆ ನನಗಂತೂ ಇದೆ ಎಂದಿದ್ದಾರೆ.

About the Author

ರಾಜಶೇಖರ ಜೋಗಿನ್ಮನೆ

ರಾಜಶೇಖರ ಜೋಗಿನ್ಮನೆ ಅವರ ಮೂಲ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಜೋಗಿನ್ಮನೆ ಗ್ರಾಮ. ತಂದೆ ಅಣ್ಣಪ್ಪ ಹೆಗಡೆ, ತಾಯಿ ಕಾಮಾಕ್ಷಿ ಹೆಗಡೆ. ವೃತ್ತಿಯಿಂದ ವಿಜಯವಾಣಿ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕರು. ಪ್ರವೃತ್ತಿಯಿಂದ ಕಥೆಗಾರರು. ನೀರಿನ ಕುರಿತ ಬರೆಹವೊಂದಕ್ಕೆ ’ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಸಂದಿದೆ. ಸಂಗೀತ, ಸಿನಿಮಾ, ನಾಟಕ, ಯಕ್ಷಗಾನ, ಸಾಹಿತ್ಯ- ಇವರ ಆಸಕ್ತಿ ಕ್ಷೇತ್ರಗಳು. ...

READ MORE

Related Books