ವಾಚಕ್ನವೀ

Author : ಸದ್ಯೋಜಾತ ಭಟ್ಟ

Pages 112

₹ 129.00




Year of Publication: 2023
Published by: ಸಮನ್ವಿತ ಪ್ರಕಾಶನ
Address: #12, 1ನೆ ಅಡ್ಡರಸ್ತೆ, ಮಂಜುನಾಥ ಲೇಔಟ್, ಅರಕೆರೆ ಮೈಕೋ ಲೇಔಟ್ ಹಿಂಭಾಗ, ಬನ್ನೇರುಘಟ್ಟ ರಸ್ತೆ, ಬೆಂಗಳೂರು 560076
Phone: 9844192952

Synopsys

`ವಾಚಕ್ನವೀ’ ಕೃತಿಯು ಸದ್ಯೋಜಾತ ಭಟ್ಟ ಅವರ ಗ್ರಂಥವಾಗಿದೆ. ಇಲ್ಲಿ ಹಲವಾರು ಕತೆಗಳು ಭಿನ್ನವಾಗಿ ತೆರೆದುಕೊಳ್ಳುತ್ತದೆ. ಕಥೆಯನ್ನು ಅರ್ಥಮಾಡಿಕೊಳ್ಳಲು ಒಂದು ಭೂಮಿಕೆ ಬೇಕು ಎನ್ನುವ ಈ ಕೃತಿಯು ಪ್ರಾಚೀನ ಕಾಲದ ಪರಿಸರ, ಪರಿಸ್ಥಿತಿ ಹಾಗೂ ಸಂಭವಿಸಿದ ಘಟನೆಗಳ ಕುರಿತು ಇರುವ ಸನ್ನಿವೇಶಗಳಿವು , ಉಪನಿಷತ್ತುಗಳಲ್ಲಿ ಮತ್ತು ಪ್ರಾಚೀನ ಗ್ರಂಥಗಳಲ್ಲಿ ದಾಖಲಿಸಲಾದ ವಿಷಯಗಳನ್ನು ತಿಳಿಸುತ್ತದೆ. ಅಷ್ಟೇಅಲ್ಲದೇ ಗಂಡು ಮತ್ತು ಹೆಣ್ಣಿನ ಲಿಂಗ ವ್ಯತ್ಯಾಸವು ಪ್ರಾಯಶಃ ಕೆಲವೊಂದು ಪ್ರಾಪಂಚಿಕ ಕರ್ತವ್ಯಗಳಲ್ಲಿ ವ್ಯತ್ಯಾಸವಾಗುತ್ತವೆ. ಆದರೆ ದೇಹಕ್ಕೆ ಭಿನ್ನತೆ ಇದೆ. ವ್ಯತ್ಯಾಸವಿದೆ. ಆದರೆ ಆತ್ಮಕ್ಕೆ ಇದಾವುದರ ಅವಶ್ಯಕತೆ ಇಲ್ಲ. ಆತ್ಮ ಎಲ್ಲರಲ್ಲಿಯೂ ಒಂದೇ ತೆರನಾಗಿದ್ದಾಗ ಮೋಕ್ಷ ಸಾಧನೆಗೆ ತಾರತಮ್ಯದ ಅವಶ್ಯಕತೆ ಇಲ್ಲ . ಮಾರ್ಗವೊಂದೇ - ಅದು ಸಾಧನೆ ಮತ್ತು ಅಛಲ ಶ್ರದ್ಧೆ. ಮಹಿಳೆಯರೂ ಉನ್ನತ ಮಟ್ಟದ ಜ್ಞಾನವನ್ನು, ಅರಿವನ್ನು ಪಡೆಯಲು ಸದಾ ಅರ್ಹರು ಎಂದು ಈ ಪುಸ್ತಕ ಹೇಳುತ್ತದೆ.

About the Author

ಸದ್ಯೋಜಾತ ಭಟ್ಟ

ಲೇಖಕ, ಸಂಶೋಧಕ ಸದ್ಯೋಜಾತ ಭಟ್ಟ ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನವರು. ಕನ್ನಡ ಪಂಡಿತರಾದ ಅವರು ಶಾಸನಗಳ ಅಧ್ಯಯನ ಮತ್ತು ಶಾಸನಗಳ ಪದಕೋಶಗಳ ರಚನೆಯ ಜೊತೆಗೆ ಶಾಸನಗಳಲ್ಲಿ ಬಳಸಲ್ಪಟ್ಟ ಲಿಪಿಗಳ ಅಧ್ಯಯನ ನಡೆಸಿದ್ದಾರೆ. ಖರೋಷ್ಟಿ, ಬ್ರಾಹ್ಮಿ, ಶಾರದಾ, ನಾಗರೀ ನಂದಿನಾಗರೀ ಮತ್ತು ಕನ್ನಡ ಲಿಪಿಗಳ ಲಿಪ್ಯಂತರಣ. ಪ್ರಸ್ತುತ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆರಂಭಗೊಂಡ ಪಾಲಿಯೋಗ್ರಾಫಿ ಮತ್ತು ಮ್ಯಾನ್ಯುಸ್ಕ್ರಿಪ್ಟಾಲಜಿಯಲ್ಲಿ ಬೋಧಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ’ಶಿಲೆಗಳಲ್ಲಡಗಿದ ಸತ್ಯ’, ’ನಾಸತ್ಯಾ’ ಅವರ ಕೃತಿಗಳು. ’ಕಾಲಯಾನ’ ಅವರ ಇತ್ತಿಚಿನ ಕೃತಿ. ...

READ MORE

Related Books