ಸ್ವಸ್ತಿ ಪ್ರಕಾಶನ 2013 ರಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ತನ್ನ ಮೊದಲ ಪುಸ್ತಕ "ಮನನ" ಪ್ರಕಟಿಸುವುದರ ಮೂಲಕ ಆರಂಭವಾಯಿತು. ಅಲ್ಲಿಂದ ಪ್ರತೀ ವರುಷವೂ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತ ' ನಮ್ಮಿಂದ ನಿಮಗೆ ಕನ್ನಡ ಮನೆ ಮನೆಗೆ' ಎಂಬ ಸೂತ್ರದೊಂದಿಗೆ ಹಳ್ಳಿಗಳಲ್ಲಿ ಕೂಡ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಇದುವರೆಗೂ ಏಳು ಪುಸ್ತಕಗಳನ್ನು ಪ್ರಕಟಿಸಿದ್ದು ಪ್ರಕಾಶನ ಕನ್ನಡ ಸಾಹಿತ್ಯ ಪ್ರೀತಿಯನ್ನೇ ಉದ್ದೇಶವಾಗಿಟ್ಟುಕೊಂಡಿದೆ.
©2023 Book Brahma Private Limited.