ಕಥಾಗತ

Author : ನವೀನ ಗಂಗೋತ್ರಿ

Pages 160

₹ 160.00




Year of Publication: 2023
Published by: ಸ್ವಸ್ತಿ ಪ್ರಕಾಶನ
Address: C/of :ಐಸಿರಿ ಲೇಡೀಸ್ ಸೆಂಟರ್. ಹೊಸ ಬಸ್ಟ್ಯಾಂಡ್ ಹತ್ತಿರ. ಎನ್.ಎಚ್.66 ಕುಮಟಾ. 581343 (ಉತ್ತರ ಕನ್ನಡ)
Phone: 9483617879

Synopsys

ಕಥಾಗತ ನವೀನ ಗಂಗೋತ್ರಿ ಅವರ ಕತೆಯಾಗಿದೆ. ನಮ್ಮ ನಮ್ಮ ಕಥೆಗಳು ನಮ್ಮ ನಮ್ಮ ಉಳಿವಿನ ಮೂಲ" ಇದೊಂದು ಸಾಲು ಸಾಕು; ನೈಜ ಇತಿಹಾಸದ ಅರಿವಿನ ಅವಶ್ಯಕತೆಯನ್ನು ಮೀರಿ ಅನಿವಾರ್ಯತೆಯನ್ನು ಪ್ರಜ್ಞೆಯಲ್ಲಿ ಬಿತ್ತುವುದಕ್ಕೆ. ಲೇಖಕರು ಮತ್ತನ್ನುತ್ತಾರೆ. "ಶುದ್ಧ ಇತಿಹಾಸವೆನ್ನುವುದು ಮಾಯಾಜಿಂಕೆ" - ಅವಶ್ಯಕತೆ ಇರುವುದು ಶುದ್ಧ ಇತಿಹಾಸವಲ್ಲ, ನೈಜ ಇತಿಹಾಸ. ಸರಳ ಶುದ್ಧ ಸುಂದರ ಭಾಷೆಯಲ್ಲಿ ಲೇಖಕರು ವರ್ತಮಾನದ ವಾಸ್ತವದ ನೆಲೆಗಟ್ಟಿನಲ್ಲಿ ಪುರಾಣೇತಿಹಾಸಗಳನ್ನು ಪದರ ಪದರವಾಗಿ ಅರಳಿಸಿದ್ದಾರೆ. ಈರ್ಷ್ಯೆ ಹುಟ್ಟಿಸುವ ಭಾಷೆ, ಕುತೂಹಲ ಮಿಶ್ರಿತ ತನ್ಮಯತೆಯ ಓದು, ಮುಗಿದಾಗ ಧನ್ಯತೆಯ ಭಾವ! ಇದು ನನ್ನ ಪೂರ್ವಜರ ಕತೆ, ನನ್ನ ಕತೆಯೂ ಹೌದು. ನನ್ನ ಜ್ಞಾನದ ಮಿತಿಯಲ್ಲಿ ವ್ಯಾಪಾರ ವ್ಯವಹಾರಕ್ಕೆಂದೇ ಸೀಮಿತವಾದ 'ಸಿಲ್ಕ್ ರೂಟ್' ಕ್ಷಣದಲ್ಲಿ ತತ್ವಜ್ಞಾನದ ಹರಿವಿನ ಹಾದಿಯಾಗಿ ಗೋಚರಿಸಿ ಬನವಾಸಿಯ ಕದಂಬರ ಮಯೂರಶರ್ಮ ನನ್ನ ಪೂರ್ವಜನಾದ; ನನ್ನ ಅರಿವಿನ ಪುರಾಣ ಇತಿಹಾಸಗಳು ಇಲ್ಲಿ ಕಥಾನಕವಾಯ್ತು, ನನ್ನ ಕಥೆಯಾಯ್ತು. ಈ ಅನುಭವಕ್ಕೆ ಋಣಿ ಎಂದು ಪುಸ್ತಕದ ಬೆನ್ನುಡಿಯಲ್ಲಿ ಸೇತುರಾಂ ತಿಳಿಸಿದ್ದಾರೆ.

About the Author

ನವೀನ ಗಂಗೋತ್ರಿ

ನವೀನ ಗಂಗೋತ್ರಿ ಅವರು ಉತ್ತರಕನ್ನಡ ಜಿಲ್ಲೆಯ ಶೇವಕಾರದವರು . ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪಾಣಿನೀಯ ವ್ಯಾಕರಣದಲ್ಲಿ ಉನ್ನತ ಶಿಕ್ಷಣ ಮತ್ತು ಡಾಕ್ಟರೇಟ್ ಗಳಿಸಿದ್ದಾರೆ. ಪ್ರಸ್ತುತ ಕೊಯಮತ್ತೂರಿನ ಅಮೃತ ವಿಶ್ವವಿದ್ಯಾಲಯದ ಅಮೃತದರ್ಶನ ಅಂತಾರಾಷ್ಟ್ರಿಯ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕಾರಾಗಿ ಕಾರ್ಯನಿರ್ವಹಿಸುತಿದ್ದಾರೆ. ಸಂಶೋಧನೆ ಹಾಗೂ ಸಂಶೋಧನ ಮಾರ್ಗದರ್ಶನದ ಹೊರತಾಗಿ ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಸಾಹಿತ್ಯನಿರ್ಮಾಣ ಮತ್ತು ಅನುವಾದದಲ್ಲಿ ಪ್ರವೃತ್ತಿ ಪಡೆದಿದ್ದಾರೆ. ನಾಡಿನ ಪ್ರಮುಖ ದಿನಪತ್ರಿಕೆ ಮತ್ತು ಇತರ ನಿಯತಕಾಲಿಕೆಗಳಲ್ಲಿ ಕಥೆಗಳು, ಲೇಖನಗಳು ಮತ್ತು ಚಿಂತನಗಳು ಪ್ರಕಟವಾಗಿವೆ. ಇದುವರೆಗೆ ಒಂದು ಕವಿತಾಸಂಕಲನ (ಅಂಟಿಕೊಳ್ಳದ ಚಿತ್ರಗಳು), ಒಂದು ಕಥಾ ಸಂಕಲನ (ಸಂಕ) ಮತ್ತು ಮೂರು ಅನುವಾದ ಗ್ರಂಥಗಳು ಪ್ರಕಾಶ ಕಂಡಿವೆ. ...

READ MORE

Related Books