ನಾನೊಂದು ಹುಚ್ಚು ಹೊಳೆ

Author : ಪ್ರಿಯಾ ಭಟ್

Pages 112

₹ 110.00




Year of Publication: 2018
Published by: ಸ್ವಸ್ತಿ ಪ್ರಕಾಶನ
Address: ಐಸಿರಿ ಲೇಡೀಸ್‌ ಸೆಂಟರ್‌, ಹೊಸ ಬಸ್‌ ನಿಲ್ದಾಣ ಹತ್ತಿರ, ಕುಮಟಾ- 581343

Synopsys

ಲೇಖಕಿ ಪ್ರಿಯಾ ಭಟ್‌ ಕಲ್ಲಭೆ ಅವರ ಕಥಾಸಂಕಲನ ಕೃತಿ ʻನಾನೊಂದು ಹುಚ್ಚು ಹೊಳೆʼ. ಗಂಗಾವಳಿ ನದಿ ದಡದ ಕಲ್ಲೇಶ್ವರದಲ್ಲಿ ಬಾಲ್ಯ ಕಳೆದು ಮುಂದೆ ಅಘನಾಶಿನಿ ನದಿ ತಟದಲ್ಲಿರುವ ಕಲ್ಲಬ್ಬೆಗೆ ವಿವಾಹಿತರಾಗಿ ಹೋದ ಲೇಖಕಿ ಈ ಎರಡೂ ನದಿತಟಗಳ ಹಾಗೂ ಬೆಟ್ಟ ಗುಡ್ಡಗಳ ನಡುವಿನ ತಮ್ಮ ಜೀವನದ ಅನುಭವಗಳನ್ನು ಕಥಾಗುಚ್ಚದಲ್ಲಿ ಬಿಚ್ಚಿಟ್ಟಿದ್ದಾರೆ. ಇಲ್ಲಿ ಒಟ್ಟು ಹನ್ನೆರಡು ಕತೆಗಳಿವೆ. ಅವು ಕುಮಟಾದ ಸುತ್ತಮುತ್ತಲಿನ ಪ್ರದೇಶಗಳನ್ನು ಆವರಿಸಿದ್ದು, ಗ್ರಾಮಜೀವನದಲ್ಲಿ ಬಳಸುವ ಭಾಷೆಯ ಮೂಲಕ ಕತೆಗಳನ್ನು ಹೇಳುತ್ತಾ ಹೋಗುತ್ತಾರೆ. ಪುಸ್ತಕದ ಪರಿವಿಡಿಯಲ್ಲಿ ಸರ್ಕಸ್ಸಿನ ಹುಡುಗಿ, ನಾನೊಂದು ಹುಚ್ಚು ಹೊಳೆ, ನೀರು ತೋಟದ ಹಸಿರುಮನೆ, ಚಾರುಲತೆ ಹಾಗೂ ಕನ್ನಡಿ, ಬೆಳಕನರಸಿ, ಮಳೆಗಾಲದ ಬೆಳದಿಂಗಳು, ನಶೆ, ವ್ಯಸ್ತ ಮುಂತಾದ ಶೀರ್ಷಿಕೆಗಳ ಕತೆಗಳಿವೆ.

About the Author

ಪ್ರಿಯಾ ಭಟ್

ಲೇಖಕಿ ಪ್ರಿಯಾ ಭಟ್ ಅವರು ಹುಟ್ಟಿದ್ದು ಅಪ್ಪಟ ಕಾಡಿನ ಊರಾದ ಅಂಕೋಲಾ ತಾಲೂಕಿನ ಹಳವಳ್ಳಿ. ಗ್ರಾಮದಲ್ಲಿ.ಸ್ವಂತಕ್ಕೊಂದು ಸಣ್ಣ ಉದ್ಯೋಗವನ್ನು ಕುಮಟಾ ಪೇಟೆಯಲ್ಲಿ ಸ್ಥಾಪಿಸಿದ್ದಾರೆ. ಅದರೊಂದಿಗೆ ‘ಸ್ವಸ್ತಿ ಪ್ರಕಾಶನ’ ಸಂಸ್ಥೆಯನ್ನು 2013ರಿಂದ ನಡೆಸುತ್ತ ಬಂದಿದ್ದು, ಎರಡು ಕೃತಿಗಳನ್ನು ರಚಿಸಿದ್ದಾರೆ.  ರಾಜ್ಯಮಟ್ಟದ ಸ್ಪರ್ಧೆಗಳನ್ನು ನಡೆಸುತ್ತ ಬಹುಮಾನಿತರ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ...

READ MORE

Related Books