86ನೇ ಸಾಹಿತ್ಯ ಸಮ್ಮೇಳನದಲ್ಲಿ 86 ಕೃತಿಗಳು ಲೋಕಾರ್ಪಣೆ

Date: 04-01-2023

Location: ಬೆಂಗಳೂರು


ಸಂತರ ನಾಡು ಭಾವೈಕ್ಯದ ಬೀಡು ಎಂದು ಕರೆಸಿಕೊಳ್ಳುವ ಹಾವೇರಿ ಜಿಲ್ಲೆಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎರಡೇ ದಿನಗಳು ಬಾಕಿ ಇದೆ. ಸಮ್ಮೇಳನದಲ್ಲಿ ವಿಶೇಷವಾಗಿ 86 ಕೃತಿಗಳು ಬಿಡುಗಡೆಯಾಗುತ್ತಿವೆ.

ಹಾವೇರಿಯ ಸಾಧಕರ ಕೃತಿಗಳು ಈ ಮಾಲಿಕೆಯಲ್ಲಿವೆ. ಕನಕದಾಸ ವಿರಚಿತ ಹರಿಭಕ್ತಿ ಸಾರ, ಸರ್ವಜ್ಞನ ವಚನಗಳು, ಸಂತ ಶಿಶುನಾಳ ಶರೀಫರ ತತ್ವಪದಗಳ ಸಂಕಲನ ‘ಬರಕೋ ಪದ ಬರಕೋ’ ಗಳಗನಾಥ ಮಾಸ್ತರ, ಶ್ರೀನಿವಾಸ ಹಾವನೂರ, ಮಹದೇವ ಬಣಕಾರರ ಮೇರು ಕೃತಿ ‘ಆಡಳಿತದಲ್ಲಿ ಕನ್ನಡವೇ ಏಕೆ ಬೇಕು’, ಬಿ.ಜಿ. ಬಣಕಾರ ಅವರ ‘ಕನ್ನಡ ಕರ್ನಾಟಕ ಚಿಂತನೆಗಳು’ ಪ್ರಕಟವಾಗುತ್ತಿದ್ದು ಹಾವೇರಿ ನೆಲದಿಂದ ಮೂಡಿ ಬಂದ ತತ್ವನಿಷ್ಟ ರಾಜಕಾರಣಿ ಎಸ್.ಆರ್.ಬೊಮ್ಮಾಯಿಯವರ ಜೀವನ ಚಿತ್ರಣವೂ ಈ ಮಾಲಿಕೆಯಲ್ಲಿದ್ದು ಮರೆಲಾಗದ ಕೃತಿ ಎನ್ನಿಸಿ ಕೊಂಡಿದೆ.

ಕನ್ನಡ ಭಾಷೆಗಿರುವ ನಾದಗುಣವನ್ನು ಪರಿಚಯಿಸುವ ಸುಮಾರು ನೂರು ವರ್ಷಗಳ ಹಿಂದೆ ರಚಿತವಾಗಿ ಅಪ್ರಕಟಿತವಾಗಿ ಉಳಿದಿದ್ದ ಶಂ.ಬಾ.ಜೋಶಿಯವರ ‘ಕನ್ನಡ ನುಡಿಯ ಜೀವಾಳ’ ಕೃತಿ ಈ ಸಂದರ್ಭದಲ್ಲಿ ಪ್ರಕಟವಾಗುತ್ತಿದೆ.

ಡಾ.ಎಸ್.ಎಲ್. ಭೈರಪ್ಪನವರ ಕುರಿತು ಡಾ.ಶತಾವಧಾನಿ ಗಣೇಶ್ ಅವರು ಬರೆದಿರುವ ‘ಪ್ರಸ್ಥಾನ’, ಆರತಿ ನಾಗೇಶ್ ಅವರ ‘ಸವ್ಯಸಾಚಿ ವೀರಪ್ಪ ಮೊಯ್ಲಿ’ ಕೃತಿ ಪ್ರಕಟವಾಗುತ್ತಿದೆ.

ಹಾವೇರಿಯ ಸವಣೂರು ಸಂಸ್ಥಾನ, ಅಗಡಿ ಆನಂದವನ, ಹಾವನೂರು ಸಂಸ್ಥಾನ, ದೇವರಗುಡ್ಡ ಪರಂಪರೆ, ಆರೂಢ ಪರಂಪರೆ ಕುರಿತು ಮಹತ್ವದ ಕೃತಿಗಳು ಈ ಮಾಲಿಕೆಯಲ್ಲಿವೆ. ಹಾವೇರಿ, ರಟ್ಟೀಹಳ್ಳಿ, ರಾಣೆಬೆನ್ನುರು, ಹಿರೇಕೆರೂರು, ಹಾನಗಲ್ಲ, ಬ್ಯಾಡಗಿ, ಶಿಗ್ಗಾಂವಿ, ಸವಣೂರುಗಳ ಇತಿಹಾಸ, ಪರಂಪರೆ,ಹಾಗೂ ಸಾಧಕರನ್ನು ಗುರುತಿಸುವ ಕೃತಿಗಳು ಈ ಮಾಲಿಕೆಯಲ್ಲಿವೆ.

ಒಟ್ಟಾರೆ, 86 ಕೃತಿಗಳು ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗುವ ಮೂಲಕ ಪುಸ್ತಕ ಪ್ರೇಮಿಗಳ ಕೈ ಸೇರಲಿವೆ.

 

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...