86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾದ ಏಲಕ್ಕಿ ನಗರಿ ಹಾವೇರಿ

Date: 30-12-2022

Location: Bangalore


ಸಕಲ ಸಿದ್ಧತೆಯೊಂದಿಗೆ ಈ ಬಾರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ಜರುಗಲಿದೆ. ಜನವರಿ 6, 7 ಮತ್ತು 8ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ಡಾ.ದೊಡ್ಡರಂಗೇ ಗೌಡ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕೊರೋನಾ ಅಂತರದ ನಂತರ ಸಾಹಿತ್ಯ ಸಮ್ಮೇಳನ : ಕೊರೋನಾ ಕಾರಣದಿಂದ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತೆ ತನ್ನ ಕನ್ನಡದ ಕಂಪನ್ನು ಬೀರಲು ಸಜ್ಜಾಗಿದೆ. ಜ.6ರಿಂದ ಮೂರು ದಿನಗಳ ಕಾಲ ನಿಗದಿಯಾಗಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಪೂರ್ಣತಯಾರಿ ನಡೆದಿದೆ. ಈ ಸಮ್ಮೇಳನಕ್ಕೆ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಭಾರತ ಸರ್ಕಾರದ ಇಲಾಖೆಯಿಂದ ವಿಶೇಷ ಅಂಚೆ ಲಕೋಟೆ ಬಿಡುಗಡೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಯಸ್ ಯಡಿಯೂರಪ್ಪ ನಡೆಸಿಕೊಡಲಿದ್ದಾರೆ. ಕನ್ನಡ ಸಂಸ್ಕೃತಿ ಮತ್ತು ಇಂಧನ ಇಲಾಖೆಯ ಸಚಿವ ವಿ ಸುನಿಲ್ ಕುಮಾರ್ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವೇದಿಕೆಯಲ್ಲಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ,ಶ್ರೀನಿವಾಸ ಮಾನೆ ಹಾಗೂ ವಿಧಾನಪರಿಷತ್ ಸದಸ್ಯರ ವಿಶೇಷ ಉಪಸ್ಥಿತಿ ಇರಲಿದೆ.

ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳಾಗಲು ನೋಂದಣಿ ಕಡ್ಡಾಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸುವವರು ಕರ್ನಾಟಕ ಸಾಹಿತ್ಯ ಪರಿಷತ್ (ಕಸಾಪ) ಸದಸ್ಯತ್ವ ಹೊಂದಿರವುದು ಕಡ್ಡಾಯವಾಗಿದೆ. ಈ ಸಂಬಂಧ ನೋಂದಣಿಗಾಗಿ ಡಿ.1 ರಂದು ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಈ ಆ್ಯಪ್ ಮೂಲಕ ಡಿಸೆಂಬರ್ 01 ರಿಂದ 18 ರವರಗೆ 20 ಸಾವಿರ ಜನರು ಮಾತ್ರ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮ್ಮೇಳನಕ್ಕೆ ಸಜ್ಜಾದ ವಿವಿಧ ವೇದಿಕೆ: ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದ ಬಳಿಕ ಬೇರೆ ಬೇರೆ ವೇದಿಕೆಯಲ್ಲಿ ಕವಿ ಗೋಷ್ಠಿ , ವಿಚಾರ ಗೋಷ್ಠಿಗಳು ನಡೆಯಲಿವೆ. ಜನವರಿ 6 ರಂದು ಸಾಮರಸ್ಯ ಭಾವ-ಕನ್ನಡದ ಜೀವ, ಎಂಬ ವಿಷಯದ ಕುರಿತು ಗೋಷ್ಠಿ ,ಹಾಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಇದನ್ನು ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನಡೆಸಿಕೊಡಲಿದ್ದಾರೆ.
ಮರುದಿನ ಶನಿವಾರ 7 ರಂದು ಕನ್ನಡದಲ್ಲಿ ಕಾನೂನು ಸಾಹಿತ್ಯ ಎಂಬ ವಿಷಯದ ಕುರಿತು ವಿಷಯ ಮಂಡನೆಯನ್ನು ಸಿದ್ಧಪ್ಪ ಕೆಂಪೇಗೌಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾವೇರಿ, ಬಿ.ಶಿವಲಿಂಗೇ ಗೌಡ ,ವೃತ್ತ ಜಿಲ್ಲಾ ನ್ಯಾಯಾಧೀಶರು ನಡೆಸಿಕೊಡಲಿದ್ದಾರೆ. ಬಳಿಕ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಸರಸ್ವತಿ ಸಮ್ಮಾನ್ ಪುರಸ್ಕೃತರ ಕುರಿತು ಗ್ರಂಥ ಬಿಡುಗಡೆ ನಡೆಯಲಿದೆ. ಯುವ ಕರ್ನಾಟಕ ನಾಡು-ನುಡಿ-ಚಿಂತನೆ ಎಂಬ ವಿಷಯದ ಕುರಿತು ಗೋಷ್ಠಿ ನಡೆಯಲಿದೆ. ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ವಹಿಸಲಿದ್ದಾರೆ.

ಅದೇ ದಿನ ಇನ್ನೊಂದು ವೇದಿಕೆಯಲ್ಲಿ, ಮಾಧ್ಯಮ ಹೊಸತನ ಮತ್ತು ಆವಿಷ್ಕಾರಗಳು ಎಂಬ ವಿಷಯದ ಕುರಿತು ಗೋಷ್ಠಿಯನ್ನು ಸುದರ್ಶನ್ ಚನ್ನಂಗಿಹಳ್ಳಿ,ಎಚ್.ಎನ್. ಸುದರ್ಶನ್, ಡಾ. ಸಿಬಂತಿ ಪದ್ಮನಾಭ ನಡೆಸಿಕೊಡಲಿದ್ದಾರೆ. ಹಾಗೆ ಶಿಕ್ಷಣದಲ್ಲಿ ಕನ್ನಡದ ಅಸ್ಮಿತೆ ಎಂಬ ವಿಷಯದ ಗೋಷ್ಠಿಯನ್ನು ಡಾ.ಎಚ್.ಎನ್ ಮುರಳೀಧರ,ಡಾ.ಹರ್ಷಿತ್ ಜೋಸೆಫ್, ಡಾ ಧನಂಜಯ್ ಕುಂಬ್ಳೆ ನಡೆಸಿಕೊಡಲಿದ್ದಾರೆ.

ಭಾನುವಾರ 8 ರಂದು ಬೆಳಗ್ಗೆ ಅನ್ನದಾತರ ಅಳಲು-ಅಪೇಕ್ಷೆಗಳು ಎಂಬ ವಿಷಯ ಗೋಷ್ಠಿಯನ್ನು ಈರಯ್ಯ ಕಿಲ್ಲೇದಾರ ಹಾಗು ಕವಿತಾ ಮಿಶ್ರಾ ನಡೆಸಿಕೊಡಲಿದ್ದಾರೆ.ರ‍್ತಮಾನದ ಮಹಿಳೆ ಗೋಷ್ಠಿಯನ್ನು ಡಾ. ವೀಣಾ ಈ, ಡಾ ಕವಿತಾ ಕುಸುಗಲ್ಲ ಹಾಗೂ ಛಾಯಾ ನಂಜಪ್ಪ ಮಂಡಿಸಲಿದ್ದಾರೆ. ಮಧ್ಯಾಹ್ನ 1 ರಿಂದ ದಮನಿತ ಲೋಕದ ಸಬಲೀಕರಣ ಎಂಬ ವಿಚಾರ ಗೋಷ್ಠಿಯನ್ನು ಡಾ.ಬಿ .ಗಂಗಾಧರ,ಹನುಮಂತಪ್ಪ ಸಂಜೀವಣ್ಣ, ಡಾ.ನಟರಾಜ್ ಮಂಡಿಸಲಿದ್ದಾರೆ. ಬಳಿಕ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿಯ ಉಪಸ್ಥಿತಿಯಲ್ಲಿ ಡಾ.ಕಿರಣ್ ಕುಮಾರ್ ಹಿರಿಯ ವಿಜ್ಞಾನಿ ಇಸ್ರೋ ನಡೆಸಿಕೊಡಲಿದ್ದಾರೆ. ಡಾ ಮೋಹನ್ ಆಳ್ವಾ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಆಶ್ರಯದ ನುಡಿಗಳನ್ನಾಡಲಿದ್ದಾರೆ.

ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಸಂಜೆ: ಸಮ್ಮೇಳನದ ಸಮಾರೋಪ ಸಮಾರಂಭವು ಮುಖ್ಯಮತ್ರಿ ಬಸವರಾಜ ಬೊಮ್ಮಾಯಿ ಅವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿದ್ದು, ಗೌರವ ಅತಿಥಿಗಳಾಗಿ ಹೆಚ್.ಡಿ ದೇವೇ ಗೌಡ,ಪ್ರಹ್ಲಾದ ಜೋಶಿ,ವಿಶ್ವೇಶ್ವರ ಹೆಗಡೆ ಕಾಗೇರಿ, ಮಲ್ಲಿಖಾರ್ಜುನ ಖರ್ಗೆ, ಸಿದ್ಧರಾಮಯ್ಯ , ಎ .ನಾರಾಯಣ ಸ್ವಾಮಿ,ಬಿ, ಸಿ ನಾಗೇಶ್ ಆಗಮಿಸಲಿದ್ದಾರೆ. ಬಳಿಕ ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...