ಹಾವೇರಿಯ ಮಾಸೂರಿನ ಒಂದು ನೋಟ

Date: 05-01-2023

Location: ಬೆಂಗಳೂರು


ಹಾವೇರಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಮಾಸೂರು ಒಂದಾಗಿದೆ. ಸರ್ವಜ್ಞನ ತ್ರಿಪದಿಗಳು ಆರಂಭವಾದದ್ದು ಇಲ್ಲಿಂದಲೇ. ಇತಿಹಾಸ, ಪರಿಸರ, ಸ್ಥಳ ಎಲ್ಲವೂ ಆಕರ್ಷಣೀಯ. ಇಲ್ಲಿನ ಸರ್ವಜ್ಞನ ಸಮಾಧಿ ಹಾಗೂ ಮಾಸೂರು ಕೆರೆಯ ಬಗೆಗಿನ ಕಿರು ಮಾಹಿತಿ ಇಲ್ಲಿದೆ.

ಮಾಸೂರು ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಒಂದು ಗ್ರಾಮ. ಐತಿಹಾಸಿಕ ಪುಟಗಳಲ್ಲಿ ಬಹುದೊಡ್ಡ ಗ್ರಾಮವಾಗಿ ಪ್ರತೀತಿ ಪಡೆದಿರುವ ಮಾಸೂರು, ಸರ್ವಜ್ಞನ ಹುಟ್ಟೂರು. ಕುಮದ್ವತಿ ನದಿಯಿಂದ ಶೇಕಡಾ 75 ಭಾಗದಷ್ಟು ಆವೃತ್ತವಾಗಿರುವ ಈ ಊರು, ‘ಸರ್ವಜ್ಞನ ಮಾಸೂರು’ ಎಂದೇ ಪ್ರಸಿದ್ಧಿ. ತ್ರಿಪದಿಗಳ ಸಂತ ಸರ್ವಜ್ಞ ಮಾಸೂರಿನ ಅಂಬಲೂರಿನಲ್ಲಿ ಹುಟ್ಟಿ ಮಾಸೂರು ಮದಗದ ಕೆರೆಯ ಬಳಿ ಅಡ್ಡಾಡಿದ್ದನೆಂದು ಇತಿಹಾಸ ನೆನಪಿಸುತ್ತದೆ.

ಸರ್ವಜ್ಞ : "ಸರ್ವಜ್ಞ" ಎಂಬುದು ಒಬ್ಬ ವ್ಯಕ್ತಿಯ ಹೆಸರಲ್ಲ. ಅದೊಂದು ಕಾವ್ಯ ಪದ್ಧತಿಗೆ ಇಟ್ಟ ಹೆಸರು ಎಂದು ಹೇಳಬಹುದು. ಸರ್ವಜ್ಞರು ಒಂದೇ ಕಡೆ ನಿಲ್ಲದೇ ನಿರಂತರ ಸಂಚಾರದಲ್ಲಿದ್ದರು. ಸಮಾಜದ ಎಲ್ಲಾ ಬಗೆಯ ಅಂಕುಡೊಂಕುಗಳನ್ನು ಒರೆಹಚ್ಚಿ ಅದಕ್ಕೊಂದು ಪರಿಹಾರ ಕೊಡುತ್ತಿದ್ದರು. ಇವರ ವಚನಗಳು ತುಂಬಾ ಸರಳವಾಗಿದ್ದು, ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತಿತ್ತು. ಸರ್ವಜ್ಞನ ತ್ರಿಪದಿಗಳು ಜನರ ಬಾಯಲ್ಲಿ ಗಾದೆಮಾತುಗಳಂತೆ ನೆಲೆನಿಂತಿದೆ. ಸರ್ವಜ್ಞ ಕನ್ನಡ ನಾಡಿನ ಕವಿಗಳಲ್ಲಿ ಸರ್ವಜ್ಞ ಉನ್ನತ ಸ್ಥಾನ ಪಡೆದಿದ್ದಾರೆ. ಧರ್ಮ, ಅರ್ಥ, ಕಾಮ, ಮೋಕ್ಷ ಎಲ್ಲಾ ವಿಷಯಗಳನ್ನು ಒಳಗೊಂಡ ತ್ರಿಪದಿಗಳಾಗಿವೆ. ಸರ್ವಕಾಲಕ್ಕೂ ಸಲ್ಲಬಹುದಾದ ತ್ರಿಪದಿಗಳು ಸರ್ವಜ್ಞನನದ್ದು ಎಂಬುದು ಪ್ರಸ್ತುತ.

ಮಾಸೂರು ಕೆರೆ

ಮಾಸೂರಿನಿಂದ ದಕ್ಷಿಣಕ್ಕೆ 3 ಕಿಮೀ ದೂರದಲ್ಲಿ ಶಿಕಾರಿಪುರ ತಾಲೂಕಿಗೆ ಹೊಂದಿಕೊಂಡತಿರುವ ಮದಗದ ಈ ಭಾಗದ ದೊಡ್ಡ ಕೆರೆ. ಬಹುಶಃ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕಟ್ಟಿದ್ದು ಎನ್ನಲಾಗಿದೆ. ಮಾಸೂರಿನ ಮದಗದಕೆರೆಯ ಬಳಿ ಕೆಂಚವ್ವನ ಗುಡಿ ಇದೆ. ಶಿಕಾರಿಪುರ ಭಾಗದಲ್ಲಿ ಮಳೆ ಬಾರದಿದ್ದರೆ ಜನ ಮಾಸೂರಿನ ಕೆರೆಗೆ ಬಂದು ಕೆರೆಯ ಕೆಂಚವ್ವನನ್ನು ಪೂಜಿಸಿ ಮಳೆ ಕೊಡು ಎಂದು ಬೇಡಿಕೊಳ್ಳುವುದುಂಟು. ಮದಗದ ಕೆರೆ ಮತ್ತು ಅದಕ್ಕೆ ಸಂಬಂಧಿಸಿದ ಬಲಿದಾನ ಕುರಿತ ಜನಪದ ಗೀತೆಗಳು ಇನ್ನೂ ಪ್ರಚಾರದಲ್ಲಿವೆ.

ಸರ್ವಜ್ಞನ ಸಮಾಧಿ: ಕುಮದ್ವತಿ ನದಿಯ ದಂಡೆಯಲ್ಲಿ ಸರ್ವಜ್ಞನ ಸಮಾಧಿ ಇದೆ. ಪ್ರತಿ ಬಾರಿ ಕುಮದ್ವತಿ ನದಿಯಲ್ಲಿ ನೀರು ಹೆಚ್ಚಾದಾಗ ಈ ಸಮಾಧಿ ಮುಳುಗಡೆಯಾಗುತ್ತದೆ. ಹಿರೇಕೆರೂರಿಗೆ ಆಗ್ನೇಯ ದಿಕ್ಕಿನಲ್ಲಿ 11 ಕಿಮೀ ದೂರದಲ್ಲಿ ರಾಣೆಬೆನ್ನೂರು ರೈಲು ನಿಲ್ದಾಣದಿಂದ, ನೈರುತ್ಯಕ್ಕೆ 37 ಕಿಮೀ ದೂರದಲ್ಲಿದೆ. ಈ ಸ್ಥಳದಲ್ಲಿ ಹಳೆಯ ಕೋಟೆಯೊಂದಿದೆ. ಇದನ್ನು ಮಹಮ್ಮದ್ ಆದಿಲ್‍ಷಾನ ಕಾಲದಲ್ಲಿ ಇಲ್ಲ ಅಧಿಕಾರಿಯಾಗಿದ್ದ ಮಹಮ್ಮದ್ ಖಾನ್ ಬಿನ್ ರಾಜಾಫರೀದ ಎಂಬವನು ಕಟ್ಟಿಸಿದ್ದರೆಂದು 1635 ರ ಒಂದು ಶಿಲಾಶಾಸನ ತಿಳಿಸುತ್ತದೆ.

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...