ಕನ್ನಡ ಕಟ್ಟುವ ಕೆಲಸ ನಿರಂತರವಾಗಿರಬೇಕು: ದೊಡ್ಡರಂಗೇಗೌಡ

Date: 01-01-2023

Location: ಬೆಂಗಳೂರು


ಕೊರೋನಾದಿಂದಾಗಿ ಎರಡು ವರ್ಷಗಳಿಂದ ಹಲವು ಸಲ ಮುಂದೂಡುತ್ತಾ ಬಂದು, ಜ.6ರಿಂದ ಮೂರು ದಿನಗಳ ಕಾಲ ನಿಗದಿಯಾಗಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ತಯಾರಿಗಳು ನಡೆಯುತ್ತಲಿವೆ. ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಸಾಹಿತಿ ಡಾ. ದೊಡ್ಡರಂಗೇಗೌಡರು ವಹಿಸಲಿದ್ದಾರೆ.

ವರ್ಷಕ್ಕೂ ಮುನ್ನವೇ ಸರ್ವಾಧ್ಯಕ್ಷರ ಆಯ್ಕೆ: 2021ರ ಫೆಬ್ರವರಿ 26 ರಿಂದ 28ರವರೆಗೆ ಸಮ್ಮೇಳನ ನಡೆಸುವ ಉದ್ದೇಶವಿತ್ತಾದರೂ ನಾನಾ ಕಾರಣಗಳಿಂದಾಗಿ ಸಮ್ಮೇಳನ ಮುಂದೂಡಲ್ಪಟ್ಟಿತ್ತು. ಅಂದಿನ ಕಸಾಪ ಅಧ್ಯಕ್ಷ ಮನು ಬಳಿಗಾರ ನೇತೃತ್ವದ ತಂಡ ಸಾಹಿತಿ ಡಾ. ದೊಡ್ಡರಂಗೇಗೌಡರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಸಾಹಿತಿಗಳಾದ ಕೆ.ಎಸ್. ಭಗವಾನ್, ಗೊ.ರು. ಚೆನ್ನಬಸಪ್ಪ, ವೀಣಾ ಶಾಂತೇಶ್ವರ, ಎಸ್. ಆರ್. ಗುಂಜಾಳ ಅವರ ಹೆಸರುಗಳು ಕೇಳಿ ಬಂದಿದ್ದವು. ಅಂತಿಮವಾಗಿ ಸಮಿತಿಯು ಸಾಹಿತಿ ಡಾ. ದೊಡ್ಡರಂಗೇಗೌಡರ ಹೆಸರನ್ನು ಸರ್ವಾನುಮತದೊಂದಿಗೆ ಒಪ್ಪಿಗೆ ಸೂಚಿಸಿತ್ತು.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವ ಬಗ್ಗೆ ಮಾತನಾಡಿರುವ ಸಾಹಿತಿ ದೊಡ್ಡರಂಗೇಗೌಡರು, ಈ ಬಾರಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿರುವ ಹಾವೇರಿ ಜಿಲ್ಲೆಯು ಕನಕದಾಸ, ಸರ್ವಜ್ಷ, ಸಂತ ಶಿಶುನಾಳ ಶರೀಫರು ಓಡಾಡಿ ಬೆಳೆದ, ತಮ್ಮ ದಿವ್ಯ ಸಂದೇಶಗಳ್ನು ಪ್ರಸಾರ ಮಾಡಿದ ಶುಭದ ನೆಲವದು. ಇಂತಹ ಪುಣ್ಯದ ನೆಲದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿರುವುದು ಹೆಮ್ಮೆಯ ವಿಚಾರ ಎಂದರು.

ಅಲ್ಲದೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಏನೋನೋ ಕಡೆದು ಗುಡ್ಡೆ ಹಾಕುವುದಿಲ್ಲ. ಏನೋ ಸಾಧಿಸುತ್ತೇನೆ ಎಂಬ ಭ್ರಮೆಯೂ ಇಲ್ಲ. ಈವರೆಗಾದ ಸಮ್ಮೇಳನದ ಗೊತ್ತುವಳಿಗಳಿಂದ ಕನ್ನಡಕ್ಕೆ ಲಾಭವಾಗಿಲ್ಲ. ಆದರೆ, ಕನ್ನಡ ಕಟ್ಟುವ ಕೆಲಸ ನಿರಂತರವಾಗಿರಬೇಕು. ಆದ್ದರಿಂದ, ಸಮ್ಮೇಳನ ನಡೆಯಬೇಕು ಎಂಬ ಕಾರಣಕ್ಕೆ ತಾವು ಸಮ್ಮೇಳನದ ಅಧ್ಯಕ್ಷತೆ ಸ್ಥಾನ ನಿರ್ವಹಿಸುವ ಹೊಣೆ ಹೊತ್ತಿರುವುದಾಗಿ ಹೇಳಿದರು.

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...