ಕನ್ನಡ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ಮಹತ್ತರವಾದುದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Date: 06-01-2023

Location: ಹಾವೇರಿ


ರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕಂಪು: ಕನ್ನಡ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ಬಹಳಷ್ಟು ಮಹತ್ತರವಾದದ್ದು. ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮಾಡುವ ಉದ್ದೇಶವೇ ಕನ್ನಡವನ್ನು ಆಳವಾಗಿ ಭಾರತ ದೇಶದಲ್ಲಿ ಭಿತ್ತಿ, ಕನ್ನಡದ ಭಾಷಾ ಕಂಪನ್ನು ಎಲ್ಲೆಡೆಯೂ ಪಸರಿಸುವಂತದ್ದು. ದೊಡ್ಡರಂಗೇಗೌಡರು ದೊಡ್ಡ ಸಾಹಿತಿಗಳಾಗಿದ್ದು, ಜನಸಾಮಾನ್ಯರಿಗೆ ಸಾಹಿತ್ಯ ನೆಲೆಗಟ್ಟಿನಲ್ಲಿ ಹಲವಾರು ವಿಚಾರಗಳನ್ನು ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇಂತಹ ಸಾಹಿತಿಗಳ ಅಗತ್ಯತೆ ಕನ್ನಡ ಸಾಹಿತ್ಯ ಲೋಕಕ್ಕಿದೆ. ಹೊಸ ಚಿಂತನೆಗಳ ಜೊತೆಗೆ ಕನ್ನಡವನ್ನು ರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವ ಪ್ರಯತ್ನ ಮಹೇಶ್ ಜೋಶಿ ಅವರು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು.

ಕನ್ನಡ ಸಂಸ್ಕೃತಿಯ ಹೊಸ ಆಂದೋಲನ: ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ ಜೋಶಿ, ಕನ್ನಡ ಮನಸ್ಸುಗಳಿಗೆ ಹಾವೇರಿಯಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಬಹಳಷ್ಟು ಖುಷಿಯನ್ನು ನೀಡಿದೆ ಎಂದು ನನ್ನ ಭಾವನೆ. ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಅಸ್ಮಿತೆಯನ್ನು ಎಲ್ಲೆಡೆಯೂ ಸಾರುವಂತಹ ಸಂಭ್ರಮದ ಕ್ಷಣ ಇದಾಗಿದೆ. ಇದೊಂದು ಕನ್ನಡ ಸಂಸ್ಕೃತಿಯ ಹೊಸ ಆಂದೋಲನ. ಇದೊಂದು ಪುಣ್ಯದ ಫಲವು ಹೌದು. ಅನೇಕ ವಿಶೇಷತೆಗಳಿಂದ ಕೂಡಿದ ಈ ಸಮ್ಮೇಳನವು ಮೊದಲ ಬಾರಿಗೆ ಸಾಮರಸ್ಯದ ಭಾವನೆಯನ್ನು ಹೋಗಲಾಡಿಸುವ ರಥದಿಂದ ಮತ್ತಷ್ಟು ವಿಜೃಂಭಿಸಿದೆ ಎಂಬುದಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ ಜೋಶಿ ಹೇಳಿದರು.

ಮೊದಲ ದಿನದ ವಿಶೇಷ ಅಂಚೆ ಲಕೋಟೆಯ ಬಿಡುಗಡೆಯನ್ನು ಬಿ.ಎಸ್. ಯುಡಿಯೂರಪ್ಪ ನೇತೃತ್ವದಲ್ಲಿ ಸೇರಿದಂತ ಗಣ್ಯರು ನೆರವೇರಿಸಿದರು.

ಕನ್ನಡದ ಹೆಮ್ಮೆ ಬಾನೆತ್ತರಕ್ಕೆ ಹಾರಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯುಡಿಯೂರಪ್ಪ ಮಾತನಾಡಿ, ಪ್ರತಿಯೊಬ್ಬರು ಕನ್ನಡ ಪುಸ್ತಕವನನ್ನು ಖರೀದಿ ಮಾಡಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯದ ಸದುಪಯೋಗವನ್ನು ಮಾಡಬೇಕು. ಕನ್ನಡ ಸಾಹಿತ್ಯದ ತಾತ್ಪರ್ಯ ಸಮ್ಮೇಳನಕ್ಕೆ ಇಟ್ಟಿರುವಂತಹ ಈ ವೇದಿಕೆಯ್ಲಲಿಯೇ ಅಡಗಿದೆ. ಕನ್ನಡ ನಾಡೆಂದರೆ ಬರೀ ನಾಡಲ್ಲ, ಅದೊಂದು ಸಂಸ್ಕೃತಿ, ಸಾಹಿತ್ಯ ಹಾಗೂ ವಿಶೇಷತೆಯಾಗಿದೆ. ನಮ್ಮ ಆಚಾರ-ವಿಚಾರ ಸಂಸ್ಕೃತಿ ಬೇರೆಲ್ಲೂ ಸಿಗುವುದಿಲ್ಲ. ಅದು ಸಿಗುವಂತಹದ್ದು ನಮಗೆ ಕರ್ನಾಟಕದಲ್ಲಿ ಮಾತ್ರ. ಕನ್ನಡ ನಾಡು ನುಡಿ ಜಲ ವಿಷಯಗಳ ಬಗ್ಗೆ ನಮ್ಮ ಸರ್ಕಾರ ಯಾವಾಗಲೂ ಉದಾಸೀನ ಮಾಡಿಲ್ಲ, ಸದಾ ವಿಜಯಿಯಾಗಿ ಬಂದಿದೆ ಎಂದರು. ಸರ್ಕಾರ ಇತ್ತೀಚೆಗೆಷ್ಟೇ ಕನ್ನಡ ವಿಧೇಯಕವನ್ನು ಕೂಡ ಮಂಡಿಸಿತ್ತು. ಕನ್ನಡಿಗರು ಕನ್ನಡ ಭಾಷೆಯನ್ನು ಮಾತನಾಡುವ ಮೂಲಕ ಉಳಿಸಿ ಬೆಳೆಸಬೇಕು. ಇದು ಕೇವಲ ಸಾಹಿತ್ಯ ಸಮ್ಮೇಳನಕ್ಕೆ ಮಾತ್ರ ಮೀಸಲಾಗಬಾರದು. ಈ ನಿಟ್ಟಿನಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆದು ಕನ್ನಡದ ಹೆಮ್ಮೆ ಬಾನೆತ್ತರಕ್ಕೆ ಹಾರಲಿ ಎಂಬುವುದೇ ನನ್ನ ಆಸೆ ಎಂದರು.

ಎಚ್.ಎಸ್. ವೆಂಕಟೇಶಮೂರ್ತಿಯವರು ಕನ್ನಡ ಪರಿಷತ್ತಿನ ಧ್ವಜವನ್ನು ದೊಡ್ಡರಂಗೇಗೌಡ ಅವರಿಗೆ ನೀಡಿದರು.

ಅಪೂರ್ವ ಸಮ್ಮೇಳನ: ಕವಿ, ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಮಾತನಾಡಿ, ಸಮ್ಮೇಳನದ ಅಧ್ಯಕ್ಷತೆಯ ಪದವಿ ಕನ್ನಡ ಲೇಖಕರಿಗೆ ದೊರೆಯುವ ಬಹು ದೊಡ್ಡ ಗೌರವ. ಆ ಗೌರವಕ್ಕೆ ಪ್ರಸ್ತುತ ಮಾನ್ಯ ದೊಡ್ಡರಂಗೇಗೌಡರು ಪಾತ್ರರಾಗಿರುವುದು ಸಂತೋಷ. ಸಮ್ಮೇಳನದಲ್ಲಿ ರಾಜಕೀಯ ಅಗಾಧ ಶಕ್ತಿಯಿದೆ. ಸಾಹಿತ್ಯದ ಚಿಂತನಾದ್ರವ್ಯವಿದೆ. ಕನ್ನಡ ಸಾಹಿತ್ಯದ ಅಭಿಮಾನದ ದ್ರವ್ಯವಿದೆ. ಈ ಮೂರು ಶಕ್ತಿಗಳು ಸೇರಿರುವ ಸಮಾವೇಶವಿದಾಗಿದ್ದು, ಇದೊಂದು ಅಪೂರ್ವ ಸಮ್ಮೇಳನ. ನಾಡು ನುಡಿಗೆ ಸಂಬಂಧಿಸಿದ ಅನೇಕ ಬಿಕ್ಕಟ್ಟುಗಳ ಚರ್ಚೆಯೇ ಇಲ್ಲಿ ಪ್ರದಾನವಾಗಬೇಕೆಂಬುವುದು ನನ್ನ ಆಸೆ ಕೂಡ. ಕನ್ನಡ ನುಡಿಯ ಬಗ್ಗೆ ಹೇಳಬೇಕೆಂದರೆ ಕನ್ನಡ ಶಾಲೆಯ ಸಂಖ್ಯೆ ಕಡಿಮೆಯಾಗುತ್ತಿದ್ದು, ಇಂಗ್ಲೀಷ್ ವ್ಯಾವೋಹ ಹೆಚ್ಚಾಗುತ್ತಿದೆ. ಆದರೂ ಕೂಡ ಕನ್ನಡದ ಶಕ್ತಿ ಪ್ರಬಲವಾಗುತ್ತಿದೆ. ಕಳೆದ 2-3 ವರ್ಷಗಳಲ್ಲಿ ಶ್ರೇಷ್ಠ ಸಾಹಿತ್ಯಗಳು ಕೂಡ ಸೃಷ್ಟಿಯಾಗಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

- ರಂಜಿತಾ ಸಿದ್ದಕಟ್ಟೆ

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...