ಕಾವ್ಯ ಹುಟ್ಟುವುದು ಅನುಭವದ ವೇದನೆಯಿಂದ: ಮಲ್ಲಮ್ಮ ಪಾಟೀಲ ಪ್ರತಿಪಾದನೆ

Date: 07-01-2023

Location: ಹಾವೇರಿ


ಹಾವೇರಿ: ಬರೆಹ ಅನ್ನುವುದು ಅನುಭವಗಳ ಪರಿಣಾಮವೇ ಹೊರತು ಅಭಿವ್ಯಕ್ತಿ ಅಲ್ಲ ಎಂದು ಲೇಖಕಿ ಮಲ್ಲಮ್ಮ ಪಾಟೀಲ ಅವರು ಪ್ರತಿಪಾದಿಸಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪಾಪು ಚಂಪಾ ವೇದಿಕೆಯಲ್ಲಿ ಎರಡನೇ ದಿನ ನಡೆದ ಎರಡನೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು,

ನಮ್ಮಲ್ಲಿ ಸಂಚಯಗೊಂಡ ಅನುಭವನ್ನು ಹಂಚಿಕೊಳ್ಳಬೇಕು ಎನ್ನುವ ತಹತಹವು ಬಹುತೇಕರಲ್ಲಿರುತ್ತದೆ. ಕಾವ್ಯವು ನಮ್ಮಲ್ಲಿನ ಅನುಭವದ ವೇದನೆಯ ಒತ್ತಡದಿಂದ ಹುಟ್ಟುವಂತದ್ದು ಎಂದು ತಿಳಿಸಿದರು.

ಕವಿಯಾದವನು ಶಬ್ದಗಳನ್ನು ಪ್ರೀತಿಸಬೇಕು ಎಂದು ತಿಳಿಸಿದ ಅವರು, ಕವಿಗಳ ಬುಟ್ಟಿಯಲ್ಲಿ ಅವರ ಹೃದಯ ಇರುತ್ತದೆ. ಕವಿತ್ವವೂ ಮುಖ್ಯ ಕವನವೂ ಮುಖ್ಯ. ‌ಕವಿತೆಯು ತಾನಾಗಿಯೇ ಬರಬೇಕು. ಅದು ಒತ್ತಡದಿಂದ ಬರಬಾರದು. ಸಂಸ್ಕಾರಯುತ ಮನುಷ್ಯನಿಗೆ ಕಾವ್ಯ ತನ್ನಿಂತಾನೆ ಬರುತ್ತದೆ ಎಂದು ತಿಳಿಸಿದರು.

ಕಾವ್ಯವಾಚಿಸಿದ ಕವಿಗಳು

24 ಕವಿಗಳಿಂದ ಕಾವ್ಯವಾಚನ ನಡೆಯಿತು. ಕವಿಗಳಾದ ಡಾ.ಗೋವಿಂದ ಹೆಗಡೆ, ಅರುಣಾ ನರೇಂದ್ರ, ಕೃಷ್ಣ ದೇವಾಂಗಮಠ, ಕೆ.ಗಿರಿಜಾ ರಾಜಶೇಖರ, ಗುರು ಬಸವರಾಜ ಎಸ್., ಡಾ.ಸದಾಶಿವ ದೊಡ್ಡಮನಿ, ಸಂತೋಷ ನಾಯಿಕ, ಎಸ್.ಎಂ. ತುಕ್ಕಪ್ಪನವರ, ಮೌನೇಶ ಬಡಿಗೇರ, ಕನ್ನಿಕಾ ಎಚ್.ಆರ್., ಬಿ.ಕೆ.ಹೊಂಗಲ್, ನೂರ್ ಜಹಾನ್ ಹೊಸಪೇಟೆ, ಸುಮಾ ಸತೀಶ, ಎಸ್.ನರಸಿಂಹಸ್ವಾಮಿ, ಲಿಂಗರಾಜ ಸೊಟ್ಟಪ್ಪನವರ, ಸಾ.ಸುಮತಿ ಪಿ., ನರೇಶ ನಾಯ್ಕ್, ಬಿ.ಟಿ.ಅಂಬಿಕಾ, ಡಾ.ಸಿ.ಶಿವಣ್ಣ, ಅನುರಾಧ ಪಿ.ಎಸ್., ಪದ್ಮಾ ವಿಠಲ್, ಗಂಗಮ್ಮ ನಾಲವಾರ ಅವರುಗಳು ತಮ್ಮದೇ ಶೈಲಿಯಲ್ಲಿ ಕವಿತೆ ವಾಚಿಸಿ, ಸಾಮಾಜಿಕ ಸಮಸ್ಯೆ, ಭ್ರೂಣ ಹತ್ಯೆ,‌ ಬುದ್ಧ ಮತ್ತು ಬಸವನ ವಿಚಾರಧಾರೆ, ಸೈನಿಕ ಸೇವೆ, ಗೆಳೆತನ ಮತ್ತು ನಾಡ ಅಭಿಮಾನ ಸೇರಿದಂತೆ ನಾನಾ ವಿಷಯಗಳ‌ ಮೇಲೆ ಕಟ್ಟಿದ ಪದ್ಯಗಳನ್ನು ವಾಚಿಸಿದರು.

ದಿನೇದಿನೆ ಘಟಿಸುತ್ತಿರುವ ಹಲವಾರು ದೌರ್ಜನ್ಯದಲ್ಲಿ ಹೆಣ್ಣಾದವಳು ಸಿಲುಕಿ ನಲುಗುತ್ತಿದ್ದಾಳೆ ಎಂದು ಶ್ರೀಧರ್ ಶೇಟ್ ಅವರು, 'ಅವಳ ಕಣ್ಣುಗಳಿಗೆ ವಿಶ್ರಾಂತಿ ಇಲ್ಲ' ಪದ್ಯದ ಮೂಲಕ ಎಚ್ಚರಿಸಿದರು.

'ಪದಗಳು ಬೇಕಿವೆ' ಎನ್ನುವ ಪದ್ಯದ ಮೂಲಕ ಮಾಲತೇಶ ಚಳಗೇರಿ ಅವರು, ಕವಿಯೊಬ್ಬ ಪದ್ಯ ಕಟ್ಟಲು ತಡಕಾಡುವ ಬಗೆಯನ್ನು ವಿವರಿಸಿದರು.

ಕವಿ ಪ್ರಭುಲಿಂಗ ಜಿ. ದಂಡಿನ ಅವರು, 'ಭಯವೇ ಧರ್ಮದ ಮೂಲ ಎಂದವರಿಗೆ ದಯವೇ ಧರ್ಮ' ಎಂದ ನೀವು ಮತ್ತೇಕೆ ಹುಟ್ಟಿಬರಲಿಲ್ಲ ಬಸವಣ್ಣ ಎಂದು ಪ್ರಶ್ನಿಸಿದರು.

 

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...