ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನಕ್ಕೆ ಹೋಗೋಣ ಬನ್ನಿ

Date: 06-01-2023

Location: ಹಾವೇರಿ


ಏಲಕ್ಕಿ ಕಂಪಿನ ನಗರಿ ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಗೊಂಡಿದೆ. ಮೂರು ದಿನಗಳ ಕಾಲ ವಿವಿಧ ಸಾಹಿತ್ಯಿಕ-ಸಾಂಸ್ಕೃತಿಕ ವಿಚಾರಗಳಿಗೆ ಸಾಕ್ಷಿಯಾಗಲಿದೆ. ಕನ್ನಡ ಸಂಸ್ಕೃತಿ, ಭಾಷೆ, ಸಾಹಿತ್ಯದ ಸೊಗಡನ್ನು ಬಿಂಬಿಸುವ ಹಲವಾರು ವಿಚಾರ ಮಂಥನಗಳು ನಡೆಯಲಿವೆ.

ಕನ್ನಡಿಗರನ್ನು ಒಂದು ಭಾವನೆಯ ಸೂತ್ರದಲ್ಲಿ ಬೆಸೆಯುವ ಹಬ್ಬವಾಗಿ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳು ತೆರೆದಿವೆ. ಮೊದಲ ದಿನದ ಪುಸ್ತಕ ಪ್ರದರ್ಶನ ಮಳಿಗೆಗಳು ಸಾಹಿತ್ಯಾಸಕ್ತರಿಂದ ತುಂಬಿ, ಸಾಹಿತ್ಯದ ಕುರಿತ ಪ್ರೀತಿ ಹಾಗೂ ಮೆಚ್ಚುಗೆಯನ್ನು ವ್ಯಕ್ತವಾಗುತ್ತಿದೆ. ಹಲವಾರು ಪ್ರಕಾಶಕರ ಪುಸ್ತಕ ಮಳಿಗೆಗಳು ಸಮ್ಮೇಳನದ ಭಾಗವಾಗಿವೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಬಿಂಬಿಸುವ ವಿಚಾರಗಳೇ ಇಲ್ಲಿ ಮೇಳೈಸಲಿವೆ.

ಬೆಂಗಳೂರಿನ ಪ್ರಸಿದ್ಧ ಪುಸ್ತಕ ಮಳಿಗೆಗಳಾದ ಅಂಕಿತ ಪುಸ್ತಕ, ನವಕರ್ನಾಟಕ ಪ್ರೈ. ಲಿಮಿಟೆಡ್, ಸಪ್ನ ಬುಕ್ ಹೌಸ್, ವಸಂತ ಪ್ರಕಾಶನ, ಅಭಿನವ ಪ್ರಕಾಶನ, ಸೇರಿದಂತೆ ಹಲವಾರು ಪುಸ್ತಕ ಪ್ರಕಾಶಕರು ಸಾಹಿತ್ಯ ಸಮ್ಮೇಳನದ ಅಕ್ಷರ ಸಂಭ್ರಮಕ್ಕೆ ಮತ್ತಷ್ಟು ಕಳೆಯನ್ನು ನೀಡುತ್ತಿದ್ದಾರೆ. ಪುಸ್ತಕ ಹಾಗೂ ವಾಣಿಜ್ಯಕ್ಕೆ ಸಂಬಂಧಿಸಿ ಸುಮಾರು 600ಕ್ಕೂ ಹೆಚ್ಚು ಮಳಿಗೆಗಳು ಸಾಹಿತ್ಯಾಸಕ್ತರನ್ನು ಕೈಬೀಸಿ ಕರೆಯುತ್ತಿದೆ.

ನಾಡಿನ ಮೂಲೆ ಮೂಲೆಗಳಿಂದ ಬಂದಂತಹ ಅಸಂಖ್ಯಾತ ಸಾಹಿತ್ಯ ಪ್ರೇಮಿಗಳ ಸಂಭ್ರಮಕ್ಕೆ ಪಾರವೇ ಇಲ್ಲ. ಈ ಸಾಹಿತ್ಯ ಸಮ್ಮೇಳನವು ವಿಶೇಷವಾಗಿ ಕನ್ನಡದ ಪ್ರಥಮ ಪುಸ್ತಕಗಳ ಪ್ರದರ್ಶನವನ್ನು ಕೂಡ ಏರ್ಪಡಿಸಲಾಗಿದೆ. ಹಿರಿಯ ಲೇಖಕರಿಂದ ಹಿಡಿದು ಯುವಲೇಖಕರ ಪುಸ್ತಕಗಳು ಮಳಿಗೆಯಲ್ಲಿ ಸಿಗಲಿವೆ.

ಕೆಲವೊಂದು ಪುಸ್ತಕ ಮಳಿಗೆಗಳು ವಿಶೇಷ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತಿದೆ. ಪುಸ್ತಕದ ಜಾತ್ರೆಯಂತೆಯೇ ಕಂಡುಬಂದ ಇಲ್ಲಿನ ವಾತಾವರಣ ಹಿರಿಯರಿಂದ ಕಿರಿಯರವರೆಗೂ ಇರುವ ಸಾಹಿತ್ಯದ ಅಭಿರುಚಿ ಹಾಗೂ ಆಸಕ್ತಿಯನ್ನು ತೋರಿಸುತ್ತಿದೆ.

 

- ರಂಜಿತಾ ಸಿದ್ದಕಟ್ಟೆ

ಫೋಟೋ ಗ್ಯಾಲರಿ :

 

 

 

 

 

 

 

 

 

 

 

 

 

 

 

 

 

 

 

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...