Poem

ಅಂಧಕಾರ

ಮೈಯಲ್ಲಿ ಬಲವಿದ್ದು, ಮನಸಲ್ಲಿ ಒಲವಿದ್ದು
ಕಾಯಕಕೆ ಕಾಯೋರಿಗೆ ಏನೆನ್ನಲೆ?
ತಮ್ಮಲ್ಲೇ ಕಲೆ ಇದ್ದು, ಸಾಧಿಸುವ ಛಲವಿದ್ದು
ಅವಕಾಶವ ಅರಸೋರಿಗೇನೆನ್ನಲೆ?

ಸಂಭ್ರಮದ ಅಲೆಯಲ್ಲಿ, ಮನೆ ದೀಪವ ಪಸರಿಸುತ
ಜಗ ಬೆಳಗುವೆನೆನ್ನೋರಿಗೆ ಏನೆನ್ನಲೆ?
ಒಬ್ಬರ ಪ್ರತಿಭೆಯನ್ನು ಅತಿಲೋಕದನ್ಯರಿಗೆ
ಹೋಲಿಸಿ ನಗುವವರಿಗೇನೆನ್ನಲೆ?

ಬದುಕೆಂಬ ಸಾಗರದಲಿ ಅವಕಾಶದ ನಾವೆ ಹತ್ತಿ,
ದಿಕ್ಕೂಚಿಯ ಮರೆತೋದರೆ ದಡ ಸಿಕ್ಕಿತೇ?
ದಾಹವಾಗಿದೆಯೆಂದು ಸಮುದ್ರದಾಳಕೆ
ಈಜಿ ಸಿಹಿನೀರ ಹುಡುಕೋರಿಗೆ ಫಲವೆಲ್ಲಿದೆ?

ಜನರ ತನುವಲ್ಲಿ, ತನುವ ಮನದಲ್ಲಿ
ಭರವಸೆ ತುಂಬಿದ್ದರೆ, ಜಯ ಅಲ್ಲಿದೆ..
ಆತ್ಮವಿಶ್ವಾಸದಿಂದ ವಿಶ್ವಾಸವ ಹೊರ ಎಳೆದು
ಬರಿಯ ಆತ್ಮಕೆ ಜೈ ಎನ್ನುವ ಫಲ ವ್ಯರ್ಥವಲ್ಲವೆ...?

-ಚೇತನ್ ಕುಮಾರ್ ನವಲೆ

ವಿಡಿಯೋ
ವಿಡಿಯೋ

ಚೇತನ್ ಕುಮಾರ್ ನವಲೆ

ಚೇತನ್ ಕುಮಾರ್ ನವಲೆ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಒಬ್ಬ ಕನ್ನಡ ಬರಹಗಾರ. ಹುಟ್ಟೂರು ಹೂವಿನ ಹಡಗಲಿ. ವಾಸ ಬೆಂಗಳೂರು. ಜೀವಚೇತನ ಸಮಾನಾಂತರ ಬ್ರಹ್ಮಾಂಡದಲ್ಲಿ, ಭವ್ಯಚೇತನ ಇವರ ಕೃತಿಗಳು. ಜೀವಚೇತನ ಕವನಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಕೃತಿಗಳು: ಸಮಾನಾಂತರ ಬ್ರಹ್ಮಾಂಡದಲ್ಲಿ , ಭವ್ಯಚೇತನ, ಜೀವಚೇತನ

More About Author