Story/Poem

ಹನುಮಂತ ಹಾಲಿಗೇರಿ

ಬಾಗಲಕೋಟೆ ಸಮೀಪದ ತುಳಸಿಗೇರಿಯವರಾದ ಹನಮಂತ ಹಾಲಿಗೇರಿಯವರು ಬಸವೇಶ್ವರ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದರೂ ಅದನ್ನು ಅರ್ಧಕ್ಕೆ ಕೈ ಬಿಟ್ಟು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗ್ರಾಮೀಣ ಅಭಿವೃದ್ಧಿ ವಿಭಾಗದಲ್ಲಿ ಪದವಿ ಪಡೆದರು. ಸರ್ವ ಶಿಕ್ಷಣ ಅಭಿಯಾನದ ಟೀಚರ್ ಆಗಿ ಮೂರು ವರ್ಷಗಳ ಕಾಲ ಗ್ರಾಮೀಣ ಗುರುಕುಲ ನಡೆಸಿರುವ ಅವರು, ನಂತರ ‘ಭೈಪ್’ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇರಿ ಅಲ್ಲಿಯೂ ಮೂರು ವರ್ಷ ಕೆಲಸ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ನಿಸರ್ಗ ಮಿಲ್ಕ್ ಡೈರಿ ಸಂಸ್ಥೆ ಕಟ್ಟಿದ್ದರು. ಕೆಂಗುಲಾಬಿ ಕಾದಂಬರಿ ಪ್ರಕಟಿಸುವ ಮುನ್ನ ಅವರು ಎಂಟನೇ ತರಗತಿಯಲ್ಲಿದ್ದಾಗ ‘ರೊಚ್ಚಿಗೆದ್ದ ನಾರಿ’ ಎಂಬ ನಾಟಕ ರಚಿಸಿದ್ದರು. ದೇವರ ಹೆಸರಲ್ಲಿ’ ಎಂಬ ಮತ್ತೊಂದು ನಾಟಕವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರೋತ್ಸಾಹ ಧನ ಪಡೆದಿತ್ತು. ವಿಜಯಕರ್ನಾಟಕ, ವಾರ್ತಾಭಾರತಿ, ಸುದ್ದಿ ಟಿ.ವಿ., ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ.

More About Author

Story/Poem

ಹೂವಿನ ಪತ್ತಲದ ಹುಡುಗಿ

ಎಂಟರ ರೈಲು ಹೋಗಿ ಸರೊತ್ತಾದ್ರೂ ತುಳಸಮ್ಮ ಇನ್ನು ಮಲಗಿದಲ್ಲೇ ಹೊರಳಾಡುತಿದ್ಲು. ಎಚ್ಚರಾಗಿ ತಾಸೊತ್ತಾಗಿದ್ರೂ ಆಕಿಗೆ ಏಳಾಕ ಸಗತಿ ಇರಲಾರದಂಗಾಗಿತ್ತು. ನಿನ್ನೆಯ ತಡರಾತ್ರಿಯ ದಂಧೆಯಿಂದಾಗಿ ಮೈಯೆಲ್ಲ ಹಣ್ಣಣ್ಣು. ಕೈಕಾಲಿನ ನರ ಒಂದ ಸವನ ಸೇದಿದಂದಾಗಿ ಬಡ್ದ ಒಗ್ದಂಗ ಆಗಿತ್ತು.    &...

Read More...