Story/Poem

ಕಮಲಾ ಹೆಮ್ಮಿಗೆ

ಸಾಹಿತಿ, ಅಂಕಣಗಾರ್ತಿ ಕಮಲಾ ಹೆಮ್ಮಿಗೆ ಅವರು ಹುಟ್ಟಿದ್ದು 20  ನವೆಂಬರ್, 1952ರಂದು, ಮೈಸೂರು ಜಿಲ್ಲೆಯ ಹೆಮ್ಮಿಗೆಯಲ್ಲಿ. ಪ್ರತಿಭಾವಂತ ಬರಹಗಾರ್ತಿ. 1973ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಜಾನಪದವನ್ನು ಮುಖ್ಯವಿಷಯವನ್ನಾಗಿ ಆರಿಸಿಕೊಂಡು ಪ್ರಥಮ ದರ್ಜೆಯಲ್ಲಿ ಎಂ.ಎ.ಪದವಿಯನ್ನು ಪಡೆದವರು. ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ದತಿಯ ಮೇಲೆ ಮಹಾಪ್ರಬಂಧ ರಚಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಭಾಷಾಂತರ ಡಿಪ್ಲೊಮಾ ಪಡೆದಿದ್ದಾರೆ. ನನ್ನ ಸಂಗಾತಿ ಎಂದರೆ ಒಂಟಿತನ ಎನ್ನುವ ಕಮಲಾ ಹೆಮ್ಮಿಗೆ I Think i am addicted to it ಎನ್ನುತ್ತಾರೆ. ಅಡಿಗ, ಅನಂತಮೂರ್ತಿ, ಶಾಂತಿನಾಥ ದೇಸಾಯಿ ಮೊದಲಾದವರ ಸಾಹಿತ್ಯಕ ಪ್ರಭಾವ ಇವರ ಮೇಲಿದೆ. 2023 ಸೆಪ್ಟೆಂಬರ್ 24 ರವಿವಾರದಂದು ನಿಧನರಾದರು.

More About Author

Story/Poem

ತಾಲಿಬಾನಿನ ಹೆಣ್ಣುಗಳು

ಕಪ್ಪು ಕಟ್ಟಡದಲ್ಲಿ ಬೆಳುಚಿದ ಹೆಂಗಸರು ಮನೆ ಸದಾ ಹೆರಿಗೆ ಖೋಲಿ ರಾಶಿ ರಾಶಿ ಹೊಲಸರಿಬೆ ಕಾಣುವಂತಿಲ್ಲ ನಗುವಿನ ಕನಸು ಬಿಟ್ಟುಸಿರೆ, ಒಳ ಹೋಗಬೇಕು. ಇಲ್ಲ ಉಗುರಿಗೆ ಬಣ್ಣ ಬಿರಿದ ತುಟಿಗಿಲ್ಲ ಸೆಳೆವ ಗುಣ ಇಲ್ಲ ಪೌಡರು ಸೆಂಟು ಕೊರಳಲಲ್ಲಿ ಕಬ್ಬಿಣದ ಗುಂಡುಸರ ಬೇರೇನು ಬೇಕು ದಾಗೀನು...

Read More...