Story/Poem

ಫಕೀರ (ಶ್ರೀಧರ ಬನವಾಸಿ ಜಿ.ಸಿ.)

ಇವರ ಕತೆಗಳ ಮೇಲೆ ಎಂಫಿಲ್ ಅಧ್ಯಯನವನ್ನು ಕೂಡ ಮಾಡಲಾಗಿದೆ. `ತಿಗರಿಯ ಹೂಗಳು’, `ಬಿತ್ತಿದ ಬೆಂಕಿ’ ಇವರ ಕವನ ಸಂಕಲನಗಳು. 2017ರಲ್ಲಿ ಪ್ರಕಟಗೊಂಡ ಇವರ `ಬೇರು' ಕಾದಂಬರಿಯು ಆ ವರ್ಷದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದ್ದು ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ `ಯುವ ಪುರಸ್ಕಾರ', ಕರ್ನಾಟಕ ಸಾಹಿತ್ಯ ಅಕಾಡೆಮಿಯ `ಚದುರಂಗ' ದತ್ತಿನಿಧಿ, `ಕುವೆಂಪು’ ಪ್ರಶಸ್ತಿ, ‘ಚಡಗ ಕಾದಂಬರಿ ಪ್ರಶಸ್ತಿ’, `ಶಾ ಬಾಲುರಾವ್’ ಹಾಗೂ `ಬಸವರಾಜ ಕಟ್ಟಿಮನಿ ಯುವ ಬರಹಗಾರ’ ಪ್ರಶಸ್ತಿ ಸೇರಿದಂತೆ ಸುಮಾರು 9 ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಒಂದು ವಿಶೇಷ ಮತ್ತು ದಾಖಲೆಯೆಂದು ಗುರುತಿಸಲ್ಪಟ್ಟಿದೆ. ತಮಿಳಿನ ‘ಇನಿಯ ನಂದನವನಂ’ ಪತ್ರಿಕೆಯು ಇವರಿಗೆ ಕರುನಾಡ ಸಾಹಿತ್ಯ ಚಿಂತಾಮಣಿ ಪ್ರಶಸ್ತಿ ನೀಡಿ ಗೌರವಿಸಿದೆ. ಕಥೆ, ಕಾವ್ಯ, ಕಾದಂಬರಿ, ನಾಟಕ, ಜೀವನಕಥನ ಮತ್ತು ಗ್ರಂಥ ಸಂಪಾದನೆ ಸೇರಿದಂತೆ ಇದುವರೆಗೆ ಸುಮಾರು ಹನ್ನೆರಡು ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ. 
 

More About Author

Story/Poem

ಹೊಂಗೆ ನೆರಳಿನ ಆತ್ಮವು

ಒಂದು ಸಮಾಧಿಯ ಮೇಲೆ ಎಂದೋ ನೆಟ್ಟ ಸಸಿಯು ಈಗ ಬೆಳೆದು ಮರವಾಗಿದೆ ಒಳಗೆ ಹೂತವನು ಮತ್ತೆ ಜೀವಂತವಾಗಿದ್ದಾನೆ ಹೊಂಗೆಮರದ ಮೂಲಕ ಸಾಕ್ಷಿಯಾಗಿದ್ದಾನೆ ಕಣ್ಣುಮುಚ್ಚಿದ ಆ ಜೀವವು ಬದುಕಿದೆ ಉಸಿರಾಡುವುದು ಈಗ ಕಣ್ಣಿಗೆ ಕಾಣುತ್ತಿದೆ ಆ ಜೀವವಿಲ್ಲ ಎಂಬ ಭಾವವೇ ಇಲ್ಲವಾಗಿದೆ ಬಿರುಬಿಸಿಲಿನ ಆ...

Read More...

ಕುದುರೆಹೊಂಡ

ಬದುಕು ಕಟ್ಟಿಕೊಳ್ಳಲು ನಾನು ವೈಜಯಂತಿಪುರವನ್ನು ಬಿಟ್ಟು ಮುಂಬೈ ಸೇರಿ ಅನೇಕ ವರ್ಷಗಳಾದರೂ, ಪ್ರತಿಬಾರಿ ಊರಿಗೆ ಹೋದಾಗ ಕುದುರೆಹೊಂಡದ ಬಯಲನ್ನು ಮಾತ್ರ ನೋಡದೇ ವಾಪಸ್ ಹೋಗುತ್ತಿರಲಿಲ್ಲ. ಅಮ್ಮನಿಗೆ ನಾನು ಅಲ್ಲಿಗೆ ಹೋಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಪ್ರತಿಸಾರಿ ಹೋಗುವಾಗ ಒಂದಲ್ಲ ಒಂದು ...

Read More...